ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ದ ಸ್ಥಳೀಯರು ತಿರುಗಿ ಬಿದಿದ್ದಾರೆ. ಪಾಕಿಸ್ತಾನದ ಸ್ಥಳೀಯರು ಪಾಕಿಸ್ತಾನದ ಸೇನೆ ಹಾಗೂ ಪೊಲೀಸರ ವಿರುದ್ದ ದೊಡ್ಡ ಮಟ್ಟದಲ್ಲೇ ಹೋರಾ ನಡೆಸಿದ್ದಾರೆ. ಶನಿವಾರ ನಡೆದ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಗಲಬೆಯಲ್ಲಿ 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಮುಜಾಫರಾಬಾದ್ ಸೇರಿದಂತೆ ಹಲವು ಕಡೆ ಪ್ರತಿಭಟನಾಕಾರರು ಆಜಾಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದ್ದಾರೆ. ಪೊಲೀಸರು ಹಾಗೂ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿ ಸ್ವಾತಂತ್ಯ್ರದ ಘೋಷಣೆ ಕೂಗಿದ್ದಾರೆ. ಈ ಪ್ರತಿಭಟನೆಯ ನೇತೃತ್ವವವನ್ನು ಜಮ್ಮು ಹಾಗೂ ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ಹೊತ್ತುಕೊಂಡಿದೆ. ಕಳೆದ ಶುಕ್ರವಾರ ಈ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಕರೆ ನೀಡಿದ ಬಳಿಕ ಸಮಿತಿಯ ನಾಯಕರು ಹಾಗೂ ಸದಸ್ಯರನ್ನು ಬಂಧನ ಮಾಡಿದ್ದಾರೆ. 2023 ರ ಆಗಸ್ಟ್ ನಲ್ಲೂ ಸಹ ಈ ಸಮಿತಿ ಇದೇ ಮಾದರಿಯಲ್ಲಿ ಪ್ರತಿಭಟನೆ ನಡೆಸಿತ್ತು.
ಇನ್ನೂ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸುತ್ತಿದ್ದರೇ, ಪಿಒಕೆ ತಾನಾಗಿ ಭಾರತದ ಜೊತೆ ವಿಲೀನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ ಎನ್ನಲಾಗಿದೆ. ಪಿಒಕೆಯಲ್ಲಿ ಪಾಕಿಸ್ತಾನ ಸರ್ಕಾರ, ಸೇನೆ ಹಾಗೂ ಪೊಲೀಸರ ವಿರುದ್ದ ಆರಂಭಗೊಂಡ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. 144 ಸೆಕ್ಷನ್ ಜಾರಿ ಮಾಡಿದ್ದರೂ ಸಹ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಆಕ್ರೋಷ ಹೊರಹಾಕಿದ್ದಾರೆ. ಪಾಕ್ ಸೇನೆ ಹಾಗೂ ಪೊಲೀಸರ ದಬ್ಬಾಳಿಕೆ ದೌರ್ಜನ್ಯ, ಬೆಲೆ ಏರಿಕೆ, ವಿದ್ಯುತ್ ಕಡಿತ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಸ್ಥಳೀಯರು ಭಾರತದ ಜೊತೆ ವಿಲೀನದ ಘೋಷಣೆಯನ್ನು ಸಹ ಕೂಗಿದ್ದಾರೆ ಎಂದು ಹೇಳಲಾಗುತ್ತಿದೆ.