ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ PM Surya Ghar Yojana ಯೋಜನೆಯ ಸೌಲಭ್ಯವನ್ನು ನೀವೂ ಸಹ ಪಡೆಯಬಹುದು. ಅಯೋಧ್ಯೆಯ ರಾಮಮಂದಿರ ಪ್ರತಿಷ್ಠಾಪನಾ ಸಮಯದಲ್ಲಿ ಪ್ರತಿ ಮನೆಯಲ್ಲಿ ಸೌರ ಫಲಕವನ್ನು ಅಳವಡಿಸಿ ವಿದ್ಯುತ್ ಕೊರತೆ ನಿವಾರಣೆಗೆ ಪಿಎಂ ಸೂರ್ಯ ಘರ್ ಯೋಜನೆಯನ್ನು ಘೋಷಣೆ ಮಾಡಿದರು. ಬಳಿಕ ಈ ಯೋಜನೆಗೆ ಕ್ಯಾಬಿನೆಟ್ ನಲ್ಲೂ ಅನುಮೋದನೆ ದೊರೆಯಿತು. ಈ ಯೋಜನೆಗೆ ಯಾರೆಲ್ಲಾ ಅರ್ಹರು, ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ.

PM Surya Ghar Yojana – ಪಿಎಂ ಸೂರ್ಯ ಘರ್ ಯೋಜನೆಯಡಿ ಮೊದಲ ಹಂತವಾಗಿ ಒಂದು ಕೋಟಿ ಮನೆಗಳಿಗೆ ಸೌರ ಮೇಲ್ಚಾವಣಿ ಅಳವಡಿಸಿ, ಅದರಿಂದ ಬರುವ ವಿದ್ಯುತ್ ನಿಂದ ಬಡವರಿಗೆ ಉಚಿತ ವಿದ್ಯುತ್ ನೀಡುವ ಗುರಿಯನ್ನು ಹೊಂದಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಬಹುದು ಎಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸೂರ್ಯ ಘರ್ ಯೋಜನೆಯು ಕೇವಲ ಕುಟುಂಬಗಳಿಗೆ ಉಪಯೋಗವಾಗುವುದಷ್ಟೇ ಅಲ್ಲದೆ, ಸರಕಾರಕ್ಕೂ ವಿದ್ಯುತ್ ವೆಚ್ಚದಲ್ಲಿ ವರ್ಷಕ್ಕೆ 75,000 ಕೋಟಿ ರೂಪಾಯಿಗಳ ಉಳಿತಾಯವಾಗಲಿದೆ.

PM Surya Ghar Yojana – ಸಬ್ಸಿಡಿ ಎಷ್ಟು ದೊರೆಯಲಿದೆ:
- 150 ಯೂನಿಟ್‌ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 1 ರಿಂದ 2 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 30,000 ರೂ ನಿಂದ 60,000 ರೂ. ವರೆಗೂ ಸಬ್ಸಿಡಿ ಸಿಗಲಿದೆ.
- 150 ರಿಂದ 300 ಯೂನಿಟ್‌ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 2 ರಿಂದ 3 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 60,000 ರೂ.ನಿಂದ 78,000 ರೂ.ವರೆಗೂ ಸಬ್ಸಿಡಿ ದೊರೆಯಲಿದೆ.
- 300 ಯೂನಿಟ್‌ಗೂ ಹೆಚ್ಚು ವಿದ್ಯುತ್ ಬಳಸುವ ಮನೆಗಳಿಗೆ 3 ಕ್ಕಿಂತ ಹೆಚ್ಚು ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 78,000 ರೂ. ಸಬ್ಸಿಡಿ ಸಿಗಲಿದೆ.
PM Surya Ghar Yojana ಸೌರಫಲಕ ಅಳವಡಿಕೆ ಮಾಡುವುದರ ಉಪಯೋಗಗಳು:
- ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯ ಇಲ್ಲ.
- ಸೌರ ಫಲಕ ಅಳವಡಿಕೆ ಮಾಡಿಸಿಕೊಂಡರೆ ನಿಮ್ಮ ಮನೆಯಲ್ಲಿ ಬಳಕೆ ಆಗದೆ ಉಳಿಯುವ ವಿದ್ಯುತ್ ಅನ್ನು ಬೇರೆಯವರಿಗೆ ಮಾರಾಟ ಮಾಡುವ ಮೂಲಕ ಹಣ ಗಳಿಸಲು ಸಾಧ್ಯವಿದೆ.
- ಸೌರ ಫಲಕ ಅಳವಡಿಕೆ ಮಾಡಿದರೆ ಯಾವುದೇ ಹೆಚ್ಚಿನ ಖರ್ಚು ಇಲ್ಲದೆಯೇ ಎಲೆಕ್ಟಿಕ್ ವಾಹನಗಳು ಹಾಗೂ ಎಲೆಕ್ಟ್ರಿಕ್ ಬ್ಯಾಟರಿ ಹಾಗೂ ಮೊಬೈಲ್‌ಗಳಿಗೆ ಚಾರ್ಜ್ ಹಾಕಲು ಸಹಾಯವಾಗುತ್ತದೆ.
PM Surya Ghar Yojana – ಪಿಎಂ ಸೂರ್ಯ ಘರ್ ಯೋಜನೆಯ ಪ್ರಯೋಜನ ಪಡೆಯುವ ವಿಧಾನ:
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: pmsuryaghar.gov.in/
- ಅಲ್ಲಿ ಮೊದಲಿಗೆ ನೊಂದಣಿ ಮಾಡಿಕೊಳ್ಳಿ. ಅದಕ್ಕೆ ರಿಜಿಸ್ಟ್ರೇಶನ್ ಟ್ಯಾಬ್ ಕ್ಲಿಕ್ ಮಾಡಿ.
- ನಿಮ್ಮ ರಾಜ್ಯ, ಜಿಲ್ಲೆ, ನಿಮ್ಮ ಡಿಸ್ಕಾಂ ಕಂಪನಿ ಹಾಗೂ ನಿಮ್ಮ ಮನೆಯ ವಿದ್ಯುತ್ ಬಿಲ್ನಲ್ಲಿರುವ ಅಕೌಂಟ್ ನಂಬರ್ ನಮೂದಿಸಿ.
- ಬಳಿಕ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ನಮೂದಿಸಿ, ಬಳಿಕ ಪೋರ್ಟಲ್ನ ನಿರ್ದೇಶನವನ್ನು ಅನುಸರಿಸಿ.
- ಇದಾದ ಬಳಿಕ ಮುಂದಿನ ಹಂತದ್ದು…
- ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು
- ರೂಫ್‌ಟಾಪ್ ಸೋಲಾರ್‌ಗಾಗಿ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ನಿಮ್ಮ ಡಿಸ್ಕಾಂ ಕಂಪನಿಯು ಅರ್ಜಿಯನ್ನು ಪರಿಶೀಲಿಸಿ ಕಾರ್ಯಸಾಧ್ಯತೆಯ (Feasibility report) ಅನುಮೋದನೆಗಾಗಿ ನಿರೀಕ್ಷಿಸಿ. ಒಮ್ಮೆ ನಿಮಗೆ ಈ ಅನುಮೋದನೆ ಸಿಕ್ಕ ನಂತರ ನಿಮ್ಮ ಡಿಸ್ಕಮ್‌ನಲ್ಲಿ ನೋಂದಾಯಿತ ಮಾರಾಟಗಾರರು ಬಂದು ಸೌರಫಲಕಗಳನ್ನು ಸ್ಥಾಪಿಸುತ್ತಾರೆ.
- ಅನುಸ್ಥಾಪನೆಯು (Installation) ಮುಗಿದ ನಂತರ ಸೌರಸ್ಥಾವರದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಿ.
- ನೆಟ್ ಮೀಟರ್ ಅನ್ನು ಸ್ಥಾಪಿಸಿದ ನಂತರ ಮತ್ತು ಡಿಸ್ಕಾಂನಿಂದ ಪರಿಶೀಲನೆ ನಡೆಯುತ್ತದೆ. ಅದಾದ ಬಳಿಕ ಪೋರ್ಟಲ್‌ನಿಂದ ಕಮಿಷನಿಂಗ್ ಸರ್ಟಿಫಿಕೇಟ್ ನಿರ್ಮಾಣ ಆಗುತ್ತದೆ.
* ಒಮ್ಮೆ ನೀವು ವರದಿಯನ್ನು ಪಡೆದ ನಂತರ ಪೋರ್ಟಲ್ ಮೂಲಕ ಬ್ಯಾಂಕ್ ಖಾತೆ ವಿವರಗಳು ಮತ್ತು ರದ್ದುಗೊಂಡ ಚೆಕ್ ಅನ್ನು ಸಲ್ಲಿಸಿ. 30 ದಿನಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿಯನ್ನು ಪಡೆಯಬಹುದು.
PM Surya Ghar Yojana – ಪಿಎಂ ಸೂರ್ಯ ಘರ್ ಯೋಜನೆ, ಅರ್ಜಿಗೆ ಅಗತ್ಯವಿರುವ ದಾಖಲೆಗಳು:
- ಗುರುತಿನ ಪುರಾವೆ
- ವಿಳಾಸದ ಪುರಾವೆ
- ವಿದ್ಯುತ್ ಬಿಲ್
- ಛಾವಣಿಯ ಮಾಲೀಕತ್ವದ ಪ್ರಮಾಣಪತ್ರ