ದೇಶದ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದಂತಹ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸೇರಿದಂತೆ ಹಲವು ಕಡೆ SIT ತನಿಖೆ ನಡೆಸುತ್ತಿದ್ದು, ಈ ಹಾದಿಯಲ್ಲೇ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 ಪೆನ್ ಡ್ರೈವ್ ಗಳು, ಹಾರ್ಡ್ ಡಿಸ್ಕ್ ಪತ್ತೆಯಾಗಿದೆ. ಈಗಾಗಲೇ ಎಸ್.ಐ.ಟಿ ಪ್ರೀತಂ ಗೌಡ ಆಪ್ತರು ಸೇರಿದಂತೆ ಪ್ರಕರಣದ ಸಂಬಂಧ ಬಂಧನವಾಗಿರುವಂತಹ ಮನೆಗಳಲ್ಲಿ ಎಸ್.ಐ.ಟಿ ದಾಳಿ ನಡೆಸಿದೆ.
ಹಾಸನದ ಹಲವು ಕಡೆ ಎಸ್.ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಮುಖಂಡ ಪ್ರೀತಂ ಗೌಡ ರವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದ್ದು, ಈ ಸಮಯದಲ್ಲಿ ಹತ್ತು ಪೆನ್ ಡ್ರೈವ್ ಗಳು ಹಾಗೂ ಹಾರ್ಡ್ ಡಿಸ್ಕ್ ಪತ್ತೆಯಾಗಿದೆ. ಅವುಗಳನ್ನು ವಶಕ್ಕೆ ಪಡೆದುಕೊಂಡಿರುವ ಎಸ್.ಐ.ಟಿ ಅಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಿದೆ. ಇನ್ನೂ ಈ ಪೆನ್ ಡ್ರೈವ್ ಹಾಗೂ ಹಾರ್ಡ್ ಡಿಸ್ಕ್ ಗಳು ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದ್ದೇ ಅಥವಾ ಇಲ್ಲವೇ ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಬಳಿಕ ತಿಳಿದುಬರಲಿದೆ.
ಇನ್ನೂ ಎಸ್.ಐ.ಟಿ ಹಾಸನದ 18 ಕಡೆ ದಾಳಿ ನಡೆಸಿದ್ದು, ಕೆಲವೊಂದು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ದಾಳಿ ನಡೆಸಿದ ಎಲ್ಲಾ ಕಡೆ ಸಿಕ್ಕಿದಂತಹ ಸಿ.ಸಿ. ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪತ್ತೆಯಾದ ಹಾರ್ಡ್ ಡಿಸ್ಕ್ ಹಾಗೂ ಪೆನ್ ಡ್ರೈವ್ ಗಳಲ್ಲಿರುವ ವಿಡಿಯೋಗಳನ್ನು ಸಹ ಪರಿಶೀಲನೆ ಮಾಡಲಾಗುತ್ತಿದ್ದು, ಈ ವಿಡಿಯೋಗಳನ್ನು ಪೆನ್ ಡ್ರೈವ್, ಡೆಸ್ಕ್ ಟಾಪ್ ಹಾಗೂ ಲ್ಯಾಪ್ ಟಾಲ್ ಗಳಿಗೆ ಕಾಪಿ ಮಾಡಿ ಬಳಿಕ ಇತರರಿಗೆ ಹಂಚಿರುವ ಆರೋಪ ಸಹ ಇದೆ. ಈ ನಿಟ್ಟಿನಲ್ಲಿ ಪೆನ್ ಡ್ರೈವ್ ಹಂಚಿಕೆಯ ಆರೋಪ ಎದುರಿಸುತ್ತಿರುವ ಮನೆ, ಕಚೇರಿಗೆ ಬಂದು ಹೋದಂತಹ ಎಲ್ಲರ ಕುರಿತು ಎಸ್.ಐ.ಟಿ ಮಾಹಿತಿ ಸಂಗ್ರಹ ಮಾಡುತ್ತಿದೆ.