ಪಾಕಿಸ್ತಾನದಲ್ಲಿ ಆದರೇ ನಿನ್ನ ಟಚ್ ಮಾಡೋಕೆ ಕಿಡ್ನಾಪ್ ಮಾಡಬಹುದಿತ್ತು ಎಂದ ಉಬರ್ ಕ್ಯಾಬ್ ಡ್ರೈವರ್, ಶಾಕ್ ಆದ ಮಹಿಳೆ….!

ಇತ್ತೀಚಿಗೆ ಕ್ಯಾಬ್ ಗಳಲ್ಲಿ ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿದಂತಹ ಘಟನೆಗಳು ತುಂಬಾನೆ ನಡೆದಿದೆ. ಚಾಲಕರು ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ಮಾತನಾಡುವುದು, ಅವರ ಮುಂದೆ ಹಸ್ತಮೈಥುನ ಮಾಡಿಕೊಳ್ಳುವುದು, ಅಶ್ಲೀಲವಾಗಿ ಮಾತನಾಡುವುದು ಮಾಡಿದ್ದು, ಈ ಬಗ್ಗೆ ಮಹಿಳೆಯರು ದೂರು ನೀಡಿರುವಂತಹ ಘಟನೆಗಳು ತುಂಬಾನೆ ನಡೆದಿದೆ. ಅಂತಹುದೇ ಘಟನೆಯೊಂದು ಕೆನಡಾದಲ್ಲಿ ನಡೆದಿದ್ದು, ಕ್ಯಾಬ್ ಚಾಲಕನ ಮಾತು ಕೇಳಿ ಮಹಿಳೆ ಶಾಕ್ ಆಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಘಟನೆ ಕೆನಡಾದ ಟೊರೊಂಟೋದಲ್ಲಿ ನಡೆದಿದೆ ಎನ್ನಲಾಗಿದ್ದು, ಕ್ಯಾಬ್ ಚಾಲಕನ ವಿರುದ್ದ ಭಾರಿ ಆಕ್ರೋಷ ವ್ಯಕ್ತವಾಗಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಚಾಲಕ ಹಾಗೂ ಮಹಿಳೆಯ ನಡುವೆ ನಡೆದಂತಹ ಸಂಭಾಷಣೆ ವೀಕ್ಷಣೆ ಮಾಡಬಹುದಾಗಿದೆ. ಚಾಲಕ ಮಾತನಾಡುತ್ತಾ, ನಾನು ಪಾಕಿಸ್ತಾನದವನು, ನೀನು ಏನಾದರೂ ಪಾಕಿಸ್ತಾನದಲ್ಲಿ ಹುಟ್ಟಿದ್ದರೇ, ಇಷ್ಟೊತ್ತಿಗೆ ನಾನು ನಿನ್ನನ್ನು ಕಿಡ್ನಾಪ್ ಮಾಡಿರುತ್ತಿದ್ದೆ ಎಂದು ಹೇಳುತ್ತಾನೆ. ಅದಕ್ಕೆ ಮಹಿಳೆ ನನ್ನನ್ನು ಕಿಡ್ನಾಪ್ ಮಾಡ್ತಿದ್ರಾ ಎಂದು ಪ್ರಶ್ನೆ ಮಾಡಿದ್ದಾಳೆ. ಎಸ್ ಅಫ್ ಕೋರ್ಸ್ ಏಕೆಂದರೇ ಅಲ್ಲಿ ನಿಮ್ಮನ್ನು ಪಡೆಯಲು ನಿನ್ನ ಟಚ್ ಮಾಡಲು ಬೇರೆ ದಾರಿಯಿಲ್ಲ ಹಾಗಾಗಿ ಕಿಡ್ನಾಪ್ ಮಾಡುತ್ತಿದ್ದೆ ಎಂದಿದ್ದಾಣೆ ಚಾಲಕ. ನೀವು ಕೆನಡಾದಲ್ಲಿರುವುದರಿಂದ ನಾನು ನಿಮಗೆ ಏನನ್ನು ಹೇಳಲಾರೆ, ನಿಮ್ಮನ್ನು ಮುಟ್ಟಲಾರೆ ನಾನು ಹೇಳಿದ್ದು ನಿಮಗೆ ಅರ್ಥವಾಯ್ತಾ ಎಂದು ಹೇಳಿದ್ದಾನೆ.

ಇನ್ನೂ ಇದಕ್ಕೆ ಮಹಿಳೆ ಸಹ ರಿಯಾಕ್ಟ್ ಆಗಿದ್ದು, ಇದು ತಮಾಷೆಯಂತೆ ಅನ್ನಿಸುತ್ತಿಲ್ಲ, ತುಂಬಾ ಭಯಾನಕವಾಗಿದೆ ಎಂದು ಕ್ಯಾಬ್ ನಿಂದ ಮಹಿಳೆ ಇಳಿಯುತ್ತಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಓರ್ವ ನೆಟ್ಟಿಗ ಈ ಪಾಕಿಸ್ತಾನಿ ವಲಸಿಗನನ್ನು ಕೂಡಲೇ ಬಂಧನ ಮಾಡಿ, ಗಡಿಪಾರು ಮಾಡಬೇಕು ಎಂದು ಹೇಳಿದ್ದರೇ, ಮತ್ತೋರ್ವ ಮಹಿಳೆಯರು ಇಂತಹ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಮತ್ತೋರ್ವ ಆತ ತಪ್ಪಾಗಿ ಹೇಳುತ್ತಿಲ್ಲ. ಪಾಕಿಸ್ತಾನದಲ್ಲಿ ಡ್ರೈವರ್‍ ಗಳು ಮಹಿಳೆಯರನ್ನು ಕಿಡ್ನಾಪ್ ಮಾಡುತ್ತಾರೆ. ಕೆನಡಾದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

Leave a Comment

Your email address will not be published. Required fields are marked *

Scroll to Top