Tuesday, June 24, 2025
HomeStateTirupati Laddu: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ, ಕಿಡಿಕಾರಿದ ಪೇಜಾವರ ಶ್ರೀ….!

Tirupati Laddu: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ, ಕಿಡಿಕಾರಿದ ಪೇಜಾವರ ಶ್ರೀ….!

ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ತಿರುಮಲದಲ್ಲಿ ನೀಡುವಂತಹ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಬೆರಕೆ ಮಾಡಿದ ವಿಚಾರ ಹಿಂದೂಗಳನ್ನು ಕೆರಳಿಸಿದೆ. ಜೊತೆಗೆ ಇದು ಆಂಧ್ರದಲ್ಲಿ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೀಗ ಈ ಕುರಿತು ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀ ಗಳು ಪ್ರತಿಕ್ರಿಯೆ ನೀಡಿದ್ದು, ತಿರುಪತಿಯ ಶ್ರೀನಿವಾಸ ದೇವರು ಗೋರಕ್ಷಣೆಗಾಗಿ ಅವತಾರ ತಾಳಿದವರು. ಅಂತಹ ದೇವರಿಗೆ ಹಸುವಿನ ಕೊಬ್ಬಿನ (Tirupati Laddu) ಪ್ರಸಾದ ನೀಡಿದ್ದೀರಿ ಎಂದು ಕಿಡಿಕಾರಿದ್ದಾರೆ.

pejavara shree comments about tirupati laddu 1

ಈ ಸಂಬಂಧ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಮಾತನಾಡಿದ್ದು, ತಿರುಮಲದಲ್ಲಿನ ತಿರುಪತಿ ಲಡ್ಡು ಪ್ರಸಾದಕ್ಕೆ ಹಸುವಿನ ತುಪ್ಪದ ಬದಲು ಕೃತಕ ತುಪ್ಪ ಹಾಕಿದ್ದಾರೆ. ಮೀನಿನ ಎಣ್ಣೆ, ಹಸು ಹಾಗೂ ಹಂದಿಯ ಕೊಬ್ಬು ಮಿಶ್ರಣದಿಂದ ಲಡ್ಡು ಪ್ರಸಾದ ತಯಾರಿಸಿ ವಿತರಿಸಿದ್ದಾರೆ. ಇದು ಸನಾತನ ಹಿಂದೂ ಸಮಾಜಕ್ಕೆ ಬಗೆದ ದೊಡ್ಡ ಅಪಚಾರ ಎನ್ನಬಹುದು. ಆಂಧ್ರದ ಈ ಹಿಂದಿನ ಸರ್ಕಾರ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಖಂಡನಾರ್ಹ ವಿಚಾರ. ಇದೊಂದು ದೇವರಿಗೆ ಬಗೆದಿರುವ ಅಪಚಾರ ಎಂದೇ ಪೇಜಾವರ ಶ್ರೀ ವಾಗ್ದಾಳಿ ನಡೆಸಿದ ಅವರು, ಇದೊಂದು ದೊಡ್ಡ ಅಪರಾಧ, ಹಿಂದೂಗಳ ಧಾರ್ಮಿಕ ಶ್ರದ್ದೆಯ ಮೇಲಿನಹಲ್ಲೆ, ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಕೆ ಮಾಡಿದ್ದೀರಾ. ಧಾರ್ಮಿಕ ಶ್ರದ್ದಾ ಕೇಂದ್ರಗಳು ಸರ್ಕಾರದ ಹಿಡಿತದಲ್ಲಿರವಾರದು. ಶ್ರದ್ದಾ ಕೇಂದ್ರಗಳೂ ಹಿಂದೂ ಸಮಾಜದ ಕೈಯಲ್ಲಿರಬೇಕು. ಸುಪ್ರೀಕೋರ್ಟ್ ತೀರ್ಪು ಸಹ ನೀಡಿದೆ. ತಡ ಮಾಡದೇ ಸರ್ಕಾರದ ಸ್ವಾಧೀನದಲ್ಲಿದ್ದ ಶ್ರದ್ದಾ ಕೇಂದ್ರ ಮುಕ್ತಗೊಳಿಸಿ ತಿರುಪತಿ ದೇವಾಲಯದ ಆಡಳಿತವನ್ನು ಹಿಂದೂಗಳ ಸಂಸ್ಥೆಗೆ ನೀಡಿ ಎಂದು ಒತ್ತಾಯಿಸಿದ್ದಾರೆ.

ಇನ್ನೂ ಈ ಕುರಿತು ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಉಡುಪಿಯಲ್ಲಿ ಈ ಕುರಿತು ಮಾತನಾಡಿದ್ದಾರೆ. ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಎಣ್ಣೆ ಬಳಕೆ ಮಾಡಿರುವುದು ಖಂಡನೀಯ. ಇದೊಂದು ಅಕ್ಷಮ್ಯ ಅಪರಾಧವಾಗಿದೆ. ತಿರುಪತಿ ಹಿಂದೂ ಧರ್ಮೀಯರ ಪ್ರಮುಖ ಶ್ರದ್ದಾಕೇಂದ್ರ ಆಗಿದೆ. ಶ್ರೀ ವೆಂಕಟೇಶ್ವರ ದೇವರ ಪರಮ ಪಾವನವಾದ ನೈವೇದ್ಯ ಲಡ್ಡು ಪ್ರಸಾದಕ್ಕೆ ಕಲಬೆರಕೆ ಮಾಡಿ ದೊಡ್ಡ ಅಪಪ್ರಚಾರ ಮಾಡಿದ್ದಾರೆ. ಇದು ಬಹುದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಲಾಗಿದೆ. ಹಿಂದೂಗಳ ದೇವಾಲಯದ, ಮಠ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣ ತಡೆಯಬೇಕು. ಅಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕಿದೆ. ರಾಜಕೀಯ ಪಕ್ಷಗಳ ಹಿಡಿತದಿಂದ ದೇವಾಸ್ಥಾನ ಹಾಗೂ ಮಠಗಳನ್ನು ಮುಕ್ತಗೊಳಿಸಬೇಕು. ಜೊತೆಗೆ ಸನಾತನ ಧರ್ಮದ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ಪೀಠಾಧಿಪತಿಗಳು, ಸಂತರ ನೇತೃತ್ವದ ಮಾರ್ಗದರ್ಶಕ ಮಂಡಳಿ ರಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular