ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ (National Institute of Mental Health and Neuro Sciences- NIMHANS) ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. NIMHANS ಬೆಂಗಳೂರಿನಲ್ಲಿ ಖಾಲಿಯಿರುವ ಪ್ರೋಗ್ರಾಂ ಮ್ಯಾನೇಜರ್, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ (ಒಟ್ಟು 4 ಹುದ್ದೆಗಳು) ನೇಮಕಾತಿ ನಡೆಯಲಿದೆ. ಮೇ.27 ರಂದು ಬೇಂಗಳೂರಿನಲ್ಲಿ ನೇರ ಸಂದರ್ಶನ ನಡೆಯಲಿದೆ. ಮೇ.27 ಬೆಳಿಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದ್ದು, ಕೋಲಾರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಬೆಂಗಳೂರು NIMHANS ನಲ್ಲಿ ಪ್ರೋಗ್ರಾಂ ಮ್ಯಾನೇಜರ್, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೇ.27 ರಂದು ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇನ್ನೂ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು, ವಿದ್ಯಾರ್ಹತೆ, ಸಂಬಳ, ವಯೋಮಿತಿ ಹಾಗೂ ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿಯಲು ಮುಂದೆ ಓದಿ…
ಹುದ್ದೆಗಳು ಹಾಗೂ ವಿದ್ಯಾರ್ಹತೆಯ ಮಾಹಿತಿ:
- ಪ್ರೋಗ್ರಾಮ್ ಮ್ಯಾನೇಜರ್-1, ವಿದ್ಯಾರ್ಹತೆ: ಪ್ರೋಗ್ರಾಮ್ ಮ್ಯಾನೇಜರ್- ಎಂ.ಎಸ್ಸಿ, MSW, ಎಂ.ಫಿಲ್
- ಗ್ರಾಫಿಕ್ಸ್/ವಿಶ್ಯುಯಲ್ ಡಿಸೈನರ್- 1, ವಿದ್ಯಾರ್ಹತೆ: ಗ್ರಾಫಿಕ್ಸ್/ವಿಶ್ಯುಯಲ್ ಡಿಸೈನರ್- ಬಿ.ಎಸ್ಸಿ, ಎಂ.ಎಸ್ಸಿ
- ಪ್ರಾಜೆಕ್ಟ್ ಅಸಿಸ್ಟೆಂಟ್- 1, ವಿದ್ಯಾರ್ಹತೆ: ಪ್ರಾಜೆಕ್ಟ್ ಅಸಿಸ್ಟೆಂಟ್- ಬಿ.ಎಸ್ಸಿ, ಬಿಬಿಎ, ಬಿ.ಕಾಂ, ಬಿಸಿಎ
- ಯೋಗ ಥೆರಪಿಸ್ಟ್-1, ವಿದ್ಯಾರ್ಹತೆ: ಯೋಗ ಥೆರಪಿಸ್ಟ್- ಎಂ.ಎಸ್ಸಿ
ವಯೋಮಿತಿ: ಮೀಸಲಾತಿ ಅನುಸಾರವಾಗಿ ವಯೋಮಿತಿ ಸಡಿಲಿಕೆ ಸಹ ನೀಡಲಾಗಿದೆ.
- ಪ್ರೋಗ್ರಾಮ್ ಮ್ಯಾನೇಜರ್- 50 ವರ್ಷ
- ಗ್ರಾಫಿಕ್ಸ್/ವಿಶ್ಯುಯಲ್ ಡಿಸೈನರ್- 40 ವರ್ಷ
- ಪ್ರಾಜೆಕ್ಟ್ ಅಸಿಸ್ಟೆಂಟ್- 40 ವರ್ಷ
- ಯೋಗ ಥೆರಪಿಸ್ಟ್- 40 ವರ್ಷ
ವೇತನ: ಆಯ್ಕೆಯಾದ ಅಭ್ಯರ್ಥಿಗಳ ಮಾಹೇಯಾನ ಈ ಕೆಳಗಿನಂತೆ ವೇತನ ನಿಗಧಿ ಪಡಿಸಲಾಗಿದೆ.
- ಪ್ರೋಗ್ರಾಮ್ ಮ್ಯಾನೇಜರ್- ಮಾಸಿಕ ₹ 1,00,000
- ಗ್ರಾಫಿಕ್ಸ್/ವಿಶ್ಯುಯಲ್ ಡಿಸೈನರ್- ಮಾಸಿಕ ₹ 50,000
- ಪ್ರಾಜೆಕ್ಟ್ ಅಸಿಸ್ಟೆಂಟ್- ಮಾಸಿಕ ₹ 30,000
- ಯೋಗ ಥೆರಪಿಸ್ಟ್- ಮಾಸಿಕ ₹ 50,000
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಬಳಿಕ, ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕೋಲಾರದಲ್ಲಿ ಕೆಲಸ ನಿರ್ವಹಿಸಬೇಕಿದೆ. ಇನ್ನೂ ಸಂದರ್ಶನವನ್ನು ಬೋರ್ಡ್ ರೂಮ್ & ಪರೀಕ್ಷಾ ಹಾಲ್, NBRC 4ನೇ ಮಹಡಿ, ನಿಮ್ಹಾನ್ಸ್, ಬೆಂಗಳೂರು-29 ಇಲ್ಲಿ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು NIMHANS ನ ಅಧಿಕೃತ ವೆಬ್ ಸೈಟ್ https://nimhans.ac.in/vacancy-announcements/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.