1.5 C
New York
Sunday, February 16, 2025

Buy now

ಕಲ್ಯಾಣಿ ಉಳಿದರೆ ಅಂತರ್ಜಲ ಅಭಿವೃದ್ಧಿ, ಐತಿಹಾಸಿಕ ಕಲ್ಯಾಣಿಯನ್ನು ಸ್ವಚ್ಚಗೊಳಿಸಿದ ಯೂತ್ ಫಾರ್ ಸೇವಾ ಯುವಕರು

ಗುಡಿಬಂಡೆ: ಪರಿಸರ ನಾಶದಿಂದ ಹವಾಮಾನ ವೈಪರಿತ್ಯ ಉಂಟಾಗಿ ಮಳೆ ಇಲ್ಲದೆ ಬರಗಾಲದ ಛಾಯೆ ಆವರಿಸಿದ್ದರಿಂದ, ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಿರಿಯರು ನಿರ್ಮಸಿರುವ ಕಲ್ಯಾಣಿಗಳಿಗೆ ಮರು ಜೀವ ಕೊಡುವ ಆಗಬೇಕೆಂದು ಯೂತ್ ಫಾರ್ ಸೇವಾ ತಂಡದ ಸದಸ್ಯ ಮನೋಜ್ ಅಭಿಪ್ರಾಯ ಪಟ್ಟರು.

ಪಟ್ಟಣದ ಸಂತೆ ಮೈದಾನದ ಪಕ್ಕದಲ್ಲಿರುವ ಬೆಳಗಿರಿ ರಂಗನ ಬಾವಿಯಲ್ಲಿ ಗ್ರಾಮವಿಕಾಸ್, ಯೂತ್ ಫಾರ್ ಸೇವಾ ಸಂಸ್ಥೆಯ ಸದಸ್ಯರು ಹೂಳೆತ್ತುವ ಕೆಲಸವನ್ನು ಮಾಡಿದರು, ಈ ಸಂಧರ್ಬದಲ್ಲಿ ಮಾತನಾಡಿದ ಅವರು, ಬರಗಾಲದಿಂದ ಎಲ್ಲೆಲ್ಲೂ ಕುಡಿವ ನೀರಿಗೂ ಹಾಹಾಕಾರ ಎದುರಾಗಿದೆ, ಅಂತರ್ಜಾಲ ಮಟ್ಟ ಪಾತಾಳಕ್ಕೆ ಕುಸಿದಿದೆ, ಪ್ರತಿಯೊಬ್ಬರು ಅಂತರ್ಜಾಲ ಮಟ್ಟ ಕುಸಿಯುತ್ತಿರುವ ಬಗ್ಗೆ ಮಾತನಾಡುತ್ತಿದ್ದಾರೆಯೇ ವಿನಃ, ಹೆಚ್ಚಿಸಲು ಬೇಕಾದ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲ ರಾಗುತ್ತಿದ್ದು, ಹಿಂದಿನ ಕಾಲದಲ್ಲಿ ಯಾವುದೇ ಕೊಳವೆ ಬಾವಿಗಳು ಇರಲಿಲ್ಲ, ಆಗ ಕಲ್ಯಾಣಿಗಳು, ಬಾವಿಗಳು, ಕೆರೆ ಕುಂಟೆಗಳೇ ಜನರಿಗೆ ನೀರಿನ ಮೂಲವಾಗಿತ್ತು, ಈಗ ಬಾವಿ, ಕಲ್ಯಾಣಿಗಳನ್ನು ಮುಚ್ಚಿ ಅದರ ಮೇಲೆ ಕಾಂಕ್ರೀಟ್ ಕಟ್ಟಡಗಳು ಏಳುತ್ತಿವೆ, ಇವು ಸಹ ಅಂತರ್ಜಾಲ ಮಟ್ಟ ಕುಸಿಯಲು ಕಾರಣವಾಗಿದೆ,  ಮುಂದಿನ ಪೀಳಿಗೆಯು ಶುದ್ದ ನೀರನ್ನು ಕುಡಿಯುವ ಬೇಕಾದರೆ ಇರುವು ಬಾವಿ, ಕಲ್ಯಾಣಿ, ಕೆರೆ ಕುಂಟೆಗಳ ಅಭಿವೃದ್ದಿಯಾಗಿ ನೀರು ಶೇಖರಣೆ ಆದರೆ ಮಾತ್ರ ಮುಂದಿನ ಪೀಳಿಗೆ ಬದುಕಲು ಸಾದ್ಯ, ಇಲ್ಲವಾದರೆ ಪೆಟ್ರೋಲ್‌ನ ರೀತಿಯಲ್ಲಿ ನೀರನ್ನು ಖರೀದಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಎಂದರು.

Kalyani cleanness

ಈ ವೇಳೆ ಮುಖಂಡ ಜಿ.ಎಸ್.ನಾಗರಾಜು ಮಾತನಾಡಿ, ನಮ್ಮ ಪೂರ್ವಜರು ನಿರ್ಮಾಣ ಮಾಡಿದಂತಹ ಐತಿಹಾಸಕ ಸ್ಮಾರಕಗಳನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸುಮಾರು ವರ್ಷಗಳಿಂದ ಈ ಐತಿಹಾಸಿಕ ಹಿನ್ನೆಲೆಯ ಕಲ್ಯಾಣಿಯನ್ನು ಸ್ವಚ್ಚಗೊಳಿಸಲು ಸ್ಥಳೀಯರು ಸೇರಿದಂತೆ ಅನೇಕರು ಸಾಥ್ ನೀಡುತ್ತಿದ್ದರು. ಕೆಲವು ವರ್ಷಗಳಿಂದ ಈ ಬಾವಿಯಲ್ಲಿ ನೀರಿದ್ದ ಕಾರಣ ಸ್ವಚ್ಚಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಸ್ಥಳೀಯರು ಸೇರಿದಂತೆ ಅನೇಕರು ಬಂದು ಕಲ್ಯಾಣಿಯನ್ನು ಸ್ವಚ್ಚಗೊಳಿಸಲು ಮುಂದಾಗಿದ್ದರು. ಸಾಕಷ್ಟು ಇತಿಹಾಸ ಹೊಂದಿರುವ ಈ ಕಲ್ಯಾಣಿ ಮುಜರಾಯಿ ಇಲಾಖೆಗೆ ಸೇರಿದ ಜಾಗವಾಗಿದೆ. ಆದರೇ ಯಾರೂ ಸಹ ಈ ಕಲ್ಯಾಣಿಯನ್ನು ಯಾರೂ ಸ್ವಚ್ಚಗೊಳಿಸಲು ಮುಂದಾಗುತ್ತಿಲ್ಲ. ಊರಿನ ಹೊರವಲಯದಲ್ಲಿರುವ ಕಾರಣ ಕೆಲ ಕುಡುಕರು ಸಂಜೆ ಸಮಯದಲ್ಲಿ ಕುಡಿದು ಬಾಟಲಿಗಳನ್ನು ಹೊಡೆದುಹಾಕಿ ಕಲುಷಿತಗೊಳಿಸುತ್ತಿರುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಅಗತ್ಯ ಕ್ರಮ ತೆಗೆದುಕೊಂಡು ಐತಿಹಾಸಿಕ ಸ್ಮಾರಕವನ್ನು ಉಳಿಸಲು ಮುಂದಾಗಬೇಕೆಂದರು.

ನಂತರ ಮುಖಂಡ ಜಿ.ಕೆ.ಜಗನ್ನಾಥ್ ಮಾತನಾಡಿ ಹಿರಿಯರು ಪರಿಸರ ಉಳಿಸಲು ಅನೇಕ ಮಾರ್ಗಗಳಲ್ಲಿ ಅನೇಕ ಮಾರ್ಗಗಳನ್ನು ನಮಗೆ ಬಿಟ್ಟು ಕೊಟ್ಟಿದ್ದಾರೆ, ಆದರೆ ಅವುಗಳನ್ನು ನಾವು ಅಭಿವೃದ್ದಿಯ ನೆಪದಲ್ಲಿ ಹಾಳು ಮಾಡಿ, ನಮ್ಮ ವಿನಾಶವನ್ನು ನಾವೇ ತಂದು ಕೊಳ್ಳುತ್ತಿದ್ದೇವೆ, ಹಿರಿಯರು ಕೊಟ್ಟಿರುವ ಅಲ್ಲಲ್ಲಿ ಉಳಿದಿರುವ ಕಲ್ಯಾಣಿಗಳನ್ನು ನಾವು ಉಳಿಸಿಕೊಳ್ಳದೆ ಮುಚ್ಚಿದ ಪಕ್ಷದಲ್ಲಿ ಕುಡಿಯುವ ನೀರಿಗೆ ಮತ್ತಷ್ಟು ಅಹಾಕಾರ ಎದುರಿಸಬೇಕಾಗುತ್ತದೆ ಎಂದರು.   ನಂತರ ಗುಂಪು ಮರದ ಆನಂದ್ ಮಾತನಾಡಿ, ಹಿರಿಯರು ನದಿ ಮೂಲಗಳಿಲ್ಲದ ಜಾಗಗಳಲ್ಲಿ ಅಂತರ್ಜಲ ಹೆಚ್ಚಿಸಲು ಕಲ್ಯಾಣಿಗಳು, ಕೆರೆ, ಕುಂಟೆಗಳನ್ನು  ನಿರ್ಮಾಣ ಮಾಡಿದ್ದು, ಅಂತಹ ಪ್ರದೇಶಗಳಿಗೆ ಕಲ್ಯಾಣಿಗಳು, ಕೆರೆ ಕುಂಟೆಗಳೇ ಪ್ರಮುಖ ಜಲ ಮೂಲಗಳಾಗಿದ್ದು, ಅಂತರ್ಜಲ ಹೆಚ್ಚಳ ಮಾಡುವ ಸಲುವಾಗಿ ಜಲ ಮೂಲಗಳ ಪುನಶ್ಚೇತನ ಮಾಡಬೇಕು ಎಂದರು.

Kalyani cleanness 0

ಈ ಸಮಯದಲ್ಲಿ ಮುಖಂಡರಾದ ರಾಜಗೋಪಾಲ್, ರವಿಕುಮಾರ್, ಚಿರಂಜೀವಿ, ಶಿಕ್ಷಕ ರಾಮಾಂಜಿನಪ್ಪ, ಎನ್.ನವೀನ್, ಯೂತ್ ಫಾರ್ ಸೇವ ಸಂಸ್ಥೆಯ ರಾಜ್ಯ ಸಂಚಾಲಕ ರಾಘವೇಂದ್ರ, ಸುರೇಶ್ ಕುಮಾರ್, ಬೇಶಾಜರ್, ಚಂದನ್ ಕುಮಾರ್, ದೀರಜ್, ಚಿನ್ಮಯ್, ಕುಸುಮ ಸೇರಿದಂತೆ ಮುಂತಾದವರು ಹಾಜರಿದ್ದರು.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles