Wednesday, September 3, 2025
HomeInternationalನೂತನ ಬ್ರಿಟನ್ ಪ್ರಧಾನಿಗೆ (Keir Starmer) ಹಿಂದುತ್ವದ ಮೇಲಿದೆ ಅಪಾರ ನಂಬಿಕೆ….!

ನೂತನ ಬ್ರಿಟನ್ ಪ್ರಧಾನಿಗೆ (Keir Starmer) ಹಿಂದುತ್ವದ ಮೇಲಿದೆ ಅಪಾರ ನಂಬಿಕೆ….!

ಬ್ರಿಟನ್ ದೇಶಕ್ಕೆ ನೂತನ ಪ್ರಧಾನಿಯಾಗಲಿರುವ ಕೀರ್ ಸ್ಟಾರ್ಮರ್ (Keir Starmer) ರವರಿಗೆ ಹಿಂದುತ್ವದ ಮೇಲೆ ತುಂಬಾ ನಂಬಿಕೆಯಿದೆ ಎನ್ನಲಾಗಿದೆ. ಬ್ರಿಟನ್ ನ ಚುನಾವಣೆಯಲ್ಲಿ 650 ಸ್ಥಾನಗಳ ಪೈಕಿ ಲೇಬರ್ ಪಕ್ಷ 410 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕನ್ಸರ್ವೇಟಿವ್ ಪಾರ್ಟಿ 118 ಸ್ಥಾನಗಳಿಗೆ ಕುಸಿದಿದೆ ಎಂದು ಹೇಳಲಾಗುತ್ತಿದೆ. 1997ರ ಬಳಿಕ ದೊಡ್ಡ ಗೆಲುವು ಸಾಧಿಸಿದ ಪಕ್ಷ ಎಂದು ಲೇಬರ್‍ ಪಕ್ಷ ರೆಕಾರ್ಡ್ ಮಾಡಿದೆ ಎನ್ನಲಾಗುತ್ತಿದೆ.

UK PM Keir Starmer like hinduism 1

ಸದ್ಯ ಲೇಬರ್‍ ಪಾರ್ಟಿಯನ್ನು ಮುನ್ನೆಡೆಸುತ್ತಿರುವ  ಕೀರ್ ಸ್ಟಾರ್ಮರ್ (Keir Starmer) ಬ್ರಿಟನ್ ದೇಶದ ಮುಂದಿನ ಪ್ರಧಾನಿ ಯಾಗಿದ್ದಾರೆ. ಇದೀಗ ಅವರ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ಜೋರಾಗಿದೆ. ಅವರ ಬಗ್ಗೆ ಹೇಳುವುದಾದರೇ ಕೀರ್ ಸ್ಟಾರ್ಮರ್ (Keir Starmer) ರವರಿಗೆ ಸದ್ಯ 61 ವರ್ಷ ವಯಸ್ಸಾಗಿದೆ. 1962 September 2 ರಂದು ಸರೆಯ ಅಕ್ಸೈಡ್ ಎಂಬಲ್ಲಿ ಕಾರ್ಮಿಕ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ದಾದಿಯಾಗಿದ್ದರಂತೆ. ಅವರ ತಂದೆ ಉಪಕರಣ ತಯಾರಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

UK PM Keir Starmer like hinduism 0

ಇನ್ನೂ ಕೀರ್ ಸ್ಟಾರ್ಮರ್ (Keir Starmer) ರಿಗೇಟ್ ಗ್ರಾಮರ್‍ ಎಂಬ ಶಾಲೆಯಲ್ಲಿ ವ್ಯಾಸಂಗ ಮುಗಿಸಿದ್ದರು. ಅವರ ಕುಟುಂಬದಿಂದ ವಿಶ್ವವಿದ್ಯಾಲಯಕ್ಕೆ ಕಾಲಿಟ್ಟ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಸಹ ಪಾತ್ರರಾಗಿದ್ದಾರೆ. ವಕೀಲರಾಗಿ ಅಪಾರ ಕೆಲಸ ಮಾಡಿದ ಅನುಭವ ಸಹ ಹೊಂದಿದ್ದಾಋಎ. ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಮುಗಿಸಿದ್ದಾರೆ. ಸದ್ಯ ಲಭ್ಯವಿರುವ ಮಾಹಿತಿಯಂತೆ  ಕೀರ್ ಸ್ಟಾರ್ಮರ್ (Keir Starmer) 1987 ರಲ್ಲಿ ಬ್ಯಾರಿಸ್ಟರ್‍ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು, ಜೊತೆಗೆ ಬ್ರಿಟನ್ ನಲ್ಲಿ ಖ್ಯಾತ ಮಾನವ ಹಕ್ಕುಗಳ ವಕೀಲರಲ್ಲಿ ಒಬ್ಬರಾಗಿದ್ದರು ಎಂದು ತಿಳಿದುಬಂದಿದೆ.

UK PM Keir Starmer like hinduism 2

ಇನ್ನೂ ಮಾಜಿ ವಕೀಲ ಕೀರ್ ಸ್ಟಾರ್ಮರ್ (Keir Starmer) 2015 ರಲ್ಲಿ ಸಂಸತ್ತಿಗೆ ಎಂಟ್ರಿ ಕೊಟ್ಟರು.  2020 ರಲ್ಲಿ ಲೇಬರ್‍ ಪಕ್ಷದ ನಾಯಕತ್ವ ವಹಿಸಿಕೊಂಡರು. ಇದೀಗ ಅವರ ನಾಯಕತ್ವದಲ್ಲೇ ಲೇಬರ್‍ ಪಾರ್ಟಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. 14 ವರ್ಷಗಳ ಬಳಿಕ ಬ್ರಿಟನ್ ದೇಶದಲ್ಲಿ ಲೇಬರ್‍ ಪಾರ್ಟಿ ಮತ್ತೆ ಅಧಿಕಾರಕ್ಕೆ ಬಂದಿದೆ. ಇನ್ನೂ ಕೀರ್ ಸ್ಟಾರ್ಮರ್ (Keir Starmer) ರವರಿಗೆ ಹಿಂದುತ್ವದ ಮೇಲೆ ಅಪಾರ ನಂಬಿಯಿದೆ ಎನ್ನಲಾಗಿದೆ. ಅವರು ಹಿಂದೂಗಳ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರಂತೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಖುದ್ದು ಅವರೇ ಪೂಜೆ ಮಾಡಿದ್ದಾರೆ ಎನ್ನಲಾಗಿದೆ. ರಿಷಿ ಸುನುಕ್ ರವರಂತೆ ಕೀರ್ ಸ್ಟಾರ್ಮರ್ (Keir Starmer) ರವರಿಗೂ ಹಿಂದೂಗಳ ಮೇಲೆ ಗೌರವವಿದ್ದು, ಅನೇಕ ಬಾರಿ ಪ್ರಚಾರದಲ್ಲಿ ಹಿಂದೂ ಪರ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದೆ. ಸದ್ಯ ಅವರು ಕೆಲವೊಂದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular