ದೇಶದಾದ್ಯಂತ ಕೆಲವು ದಿನಗಳಿಂದ ತಿರುಪತಿ ಲಡ್ಡು ವಿವಾದ ಭಾರಿ ಸದ್ದು ಮಾಡಿತ್ತು. ಈ ವಿವಾದ ಬಳಿಕ ಕರ್ನಾಟಕದ ನಂದಿನಿ ತುಪ್ಪಕ್ಕೆ (Nandini Ghee) ಡಿಮ್ಯಾಂಡ್ ಹೆಚ್ಚಾಗಿದೆ. ತಿರುಪತಿ ಲಡ್ಡುವಿನಲ್ಲಿ ಈ ಹಿಂದೆ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಮಿಶ್ರಣವಾಗಿತ್ತು ಎಂಬ ವಿವಾದದ ಬಳಿಕ ಕೆ.ಎಂ.ಎಫ್. ನಂದಿನಿ ತುಪ್ಪದ (Nandini Ghee) ಬಗ್ಗೆ ಹೆಚ್ಚು ಚರ್ಚೆಯಾಯ್ತು. ಪಾರದರ್ಶಕ ಹಾಗೂ ಗುಣಮಟ್ಟ ತುಪ್ಪಕ್ಕೆ ನಂದಿನಿ ತುಪ್ಪ ಫೇಮಸ್ ಆಗಿದ್ದು, ಪ್ರಸಿದ್ದ ದೇವಾಲಯಗಳಿಂದ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಂದಿನಿ ತುಪ್ಪ (Nandini Ghee) ಮಾರಾಟದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಾಲಯದ ಲಡ್ಡು ಪ್ರಸಾದದ ಕುರಿತ ವಿವಾದದ ಬಳಿಕ ನಂದಿನಿ ತುಪ್ಪಕ್ಕೆ (Nandini Ghee) ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ. ನಂದಿನಿ ತುಪ್ಪದಲ್ಲಿರುವ ಗುಣಮಟ್ಟ ಇದಕ್ಕೆ ಕಾರಣ ಎಂದು ಹೇಳಬಹುದಾಗಿದೆ. ಈ ಕಾರಣದಿಂದ ಕೇವಲ ತಿರುಪತಿ ಮಾತ್ರವಲ್ಲದೇ ಹಲವಾರು ದೇವಾಲಯಗಳು ನಂದಿನಿ ತುಪ್ಪಕ್ಕೆ (Nandini Ghee) ಬೇಡಿಕೆಯಿಟ್ಟಿದೆ. ತಿರುಪತಿ ಲಡ್ಡು ಪ್ರಸಾದ ವಿವಾದದ ಬಳಿಕ ರಾಜ್ಯದ ಎಲ್ಲಾ ದೇಗುಲಗಳ ಪ್ರಸಾದದಲ್ಲಿ ನಂದಿನಿ ತುಪ್ಪ ಬಳಸುವಂತೆ ಸರ್ಕಾರವೇ ಆದೇಶ ಮಾಡಿದೆ. ಅಂದರೇ ಆಂಧ್ರಪ್ರದೇಶದ ಎಲ್ಲಾ ದೇವಾಲಯಗಳಲ್ಲಿ ನಂದಿನಿ ತುಪ್ಪವನ್ನೇ (Nandini Ghee) ಬಳಕೆ ಮಾಡುವಂತೆ ನಿರ್ಧಾರ ಮಾಡಲಾಗಿದೆ. ಆಂಧ್ರಪ್ರದೇಶ ಎಲ್ಲಾ ದೇವಾಲಯಗಳಲ್ಲಿ ಯಾವುದೇ ಪ್ರಸಾದ ತಯಾರಿಸಬೇಕೆಂದರೂ ನಂದಿನಿ ತುಪ್ಪವನ್ನೆ (Nandini Ghee) ಬಳಕೆ ಮಾಡಲಾಗುತ್ತದೆ. ಈ ಸಂಬಂಧ ಅಗತ್ಯವಾಗುವಂತಹ ನಂದಿನಿ ತುಪ್ಪ ಪೂರೈಕೆ ಮಾಡುವಂತೆ ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಕರ್ನಾಟಕದ ಕೆ.ಎಂ.ಎಫ್. ಸಂಸ್ಥೆಗೆ ಮನವಿ ಮಾಡಿದೆ ಎನ್ನಲಾಗಿದೆ.
ಇನ್ನೂ ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಕೆ.ಎಂ.ಎಫ್ ಗೆ 150 ಮೆಟ್ರಿಕ್ ಟನ್ ನಂದಿನಿ ತುಪ್ಪ (Nandini Ghee) ಸರಬರಾಜು ಮಾಡುವಂತೆ ಬೇಡಿಕೆ ಕಳುಹಿಸಿದೆ. ಈಗಾಗಲೇ ಕೆ.ಎಂ.ಎಫ್ ತಿಂಗಳಿಗೆ 350 ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡುತ್ತಿದೆ. ಇದೀಗ 350 ಮೆಟ್ರಿಕ್ ಟನ್ ತುಪ್ಪ ಸಾಲದು ಮತಷ್ಟು ತುಪ್ಪ (Nandini Ghee) ಪೂರೈಕೆ ಮಾಡುವಂತೆ ಟಿಟಿಡಿ ಮನವಿ ಸಹ ಮಾಡಿದೆ. ಆಂಧ್ರದ ಎಲ್ಲಾ ದೇವಾಲಯದಲ್ಲಿ ನಂದಿನಿ ತುಪ್ಪ ಬಳಸಿ ಪ್ರಸಾದ ತಯಾರಿಸಲು ನಿರ್ಧಾರ ಕೈಗೊಂಡಿದ್ದು, ಮುಜರಾಯಿ ಇಲಾಖೆ ಕೆ.ಎಂ.ಎಫ್ ಗೆ ಮನವಿ ಮಾಡಿದ್ದು, ಅದಕ್ಕೆ ಕೆ.ಎಂ.ಎಫ್ (Nandini Ghee) ಸಹ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.