HomeNationalShocking News: ಅಯ್ಯೋ ಇಂತಹ ತಾಯಿನೂ ಇರ್ತಾಳಾ, ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿದ ಕ್ರೂರಿ….!

Shocking News: ಅಯ್ಯೋ ಇಂತಹ ತಾಯಿನೂ ಇರ್ತಾಳಾ, ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿದ ಕ್ರೂರಿ….!

ತಾಯಿ ದೇವರಿಗೆ ಸಮಾನ, ತನ್ನ ಮಗುವಿಗಾಗಿ ತಾಯಿಯಾದವಳು ಏನಾದರೂ ತ್ಯಾಗ ಮಾಡಲು ಸಿದ್ದ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಪ್ರಕರಣಗಳು ಅದಕ್ಕೆ ತದ್ವಿರುದ್ದವಾಗಿರುತ್ತದೆ. ಈ ಘಟನೆ ಸಹ ಅದಕ್ಕೆ ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ಇಲ್ಲೊಬ್ಬ ಕ್ರೂರಿ ತಾಯಿ ತನ್ನ ನವಜಾತ ಶಿಶುವಿನ ಬಾಯಿಗೆ ಮೆಣಸಿಣ ಪುಡಿಹಾಕಿ ನಿರ್ದಯಿಯಾಗಿ ಥಳಿಸಿರುವ (Shocking News) ಘಟನೆ ನಡೆದಿದೆ. ಈ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದ್ದು, ಈ ಕೃತ್ಯವನ್ನು ಮಹಿಳೆಯ ಪತಿ ವಿಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಯನ್ನು ಆಜ್ ತಕ್ ವರದಿ ಮಾಡಿದ್ದು, ಅದರಂತೆ ಉತ್ತರ ಪ್ರದೇಶದ ಮಂಜನ್ ಪುರ ಕೊಟ್ಟಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಭಾಗದ ನಿವಾಸಿ ಸತ್ಯೇಂದ್ರ ಕುಮಾರ್‍ ಎರಡು ವರ್ಷಗಳ ಹಿಂದೆ ಶ್ವೇತಾ ಎಂಬ ಮಹಿಳೆಯನ್ನು ವಿವಾಹವಾಗಿದ್ದರಂತೆ. ಬಳಕ ಶ್ವೇತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇನ್ನೂ ಸತ್ಯೇಂದ್ರ ಕುಮಾರ್‍ ಬಹ್ರೈಚ್ ನಲ್ಲಿ ಸರ್ಕಾರಿ ಶಾಲೆಯೊಂದರ ಶಿಕ್ಷಕರಾಗಿದ್ದರಂತೆ. ಅವರು ಕೆಲಸಕ್ಕೆಂದು ಹೋದಾಗ ಪತ್ನಿ ಮಗುವಿಗೆ ಥಳಿಸುತ್ತಿದ್ದಳಂತೆ. ಈ ಕುರಿತು ಸತ್ಯೇಂದ್ರರವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

mother tarcherd kid

ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದಾಗ ಯಾರೂ ನಂಬಿರಲಿಲ್ಲ ಎನ್ನಲಾಗಿದೆ. ಇದಾದ ನಂತರ ಸತ್ಯೇಂದ್ರ ಪತ್ನಿಯ ವಿಡಿಯೋವನ್ನು ರಹಸ್ಯವಾಗಿ  ಚಿತ್ರೀಕರಿಸಿದ್ದಾರೆ. ಪತ್ನಿಯ ಈ ಕೃತ್ಯದ ಬಗ್ಗೆ ಕೇಳಿದಾಗ ಪತಿಗೆ ಜೀವ ಬೆದರಿಕೆ ಹಾಕಿದ್ದಳೆ ಎಂದು ಪತಿ ಸಂತ್ಯೇಂದ್ರ ಆರೋಪ ಮಾಡಿದ್ದಾರೆ. ಸದ್ಯ ಸತ್ಯೇಂದ್ರ ನೀಡಿದ ದೂರಿನಂತೆ ಮಂಜನಪುರ್‍ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular