ಬೆಳಗ್ಗೆ ಎದ್ದು ಬಾಗಿಲು ತೆಗೆದರೆ ಎದುರಿಗೆ ಚಿರತೆ ಕಂಡರೆ ಪರಿಸ್ಥಿತಿ ಹೇಗಿರುತ್ತೆ ಊಹಿಸಿಕೊಳ್ಳಿ? ಎದೆ ಝಲ್ ಅನ್ಸುತ್ತೆ ಅಲ್ವಾ? ಅಯ್ಯೋ ದೇವರೇ.. ಅಂದುಕೊಳ್ಳುವಷ್ಟರಲ್ಲೇ ಇತ್ತ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂತದ್ದೇ ಒಂದು ಆಘಾತಕಾರಿ ಘಟನೆ ನಡೆದಿದೆ. ಜನನಿಬಿಡ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಜನರ ಮೇಲೆ ಮನಬಂದಂತೆ ದಾಳಿ ಮಾಡಿದೆ. ಈ ದೃಶ್ಯ (Video) ನೋಡಿದ್ರೆ ಎಂಥವರೂ ಬೆಚ್ಚಿಬೀಳೋದು ಗ್ಯಾರಂಟಿ!

Video – ಘಟನೆ ನಡೆದಿದ್ದು ಎಲ್ಲಿ?
ಮಹಾರಾಷ್ಟ್ರದ ನಾಗ್ಪುರದ ಪಾರ್ಡಿ (Pardi) ಪ್ರದೇಶದ ಶಿವನಗರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ಅರಣ್ಯದಿಂದ ದಾರಿ ತಪ್ಪಿ ಊರೊಳಗೆ ಬಂದ ಚಿರತೆಯನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಅದನ್ನ ಊರಿಂದ ಓಡಿಸಲು ಕೆಲವರು ಪ್ರಯತ್ನ ಪಟ್ಟಿದ್ದಾರೆ. ಜನರನ್ನು ನೋಡಿ ಗಾಬರಿಯಾದ ಚಿರತೆ, ತನ್ನ ರಕ್ಷಣೆಗಾಗಿ ಸಿಕ್ಕಸಿಕ್ಕವರ ಮೇಲೆ ಎರಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
Video – ಬರೋಬ್ಬರಿ ಏಳು ಜನರಿಗೆ ಗಾಯ
ಚಿರತೆ ದಾಳಿಯಿಂದಾಗಿ ಸುಮಾರು ಏಳು ಮಂದಿ ಗ್ರಾಮಸ್ಥರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟರೂ, ಅದು ಚಾಕಚಕ್ಯತೆಯಿಂದ ಅಲ್ಲಿಂದ ಎಸ್ಕೇಪ್ ಆಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. Read this also : ಅಮ್ಮನ ಹುಟ್ಟುಹಬ್ಬಕ್ಕೆ ಮಗಳು ಕೊಟ್ಟ ಸರ್ಪ್ರೈಸ್: ಗಿಫ್ಟ್ ಬಾಕ್ಸ್ ತೆರೆದ ತಾಯಿ ಕಣ್ಣೀರು! ವೈರಲ್ ಆಯ್ತು ವಿಡಿಯೋ..!

ಅಧಿಕಾರಿಗಳು ಹೇಳಿದ್ದೇನು?
ಈ ಬಗ್ಗೆ ಮಾತನಾಡಿರುವ ನಾಗ್ಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ವಿನಿತಾ ವ್ಯಾಸ್, “ಶಿವನಗರದಲ್ಲಿ ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ನಮ್ಮ ತಂಡವನ್ನು ಕಳುಹಿಸಿದ್ದೆವು. ಅಷ್ಟರಲ್ಲೇ ಅದು ಏಳು ಜನರನ್ನು ಗಾಯಗೊಳಿಸಿದೆ,” ಎಂದು ತಿಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಭಯದ ನೆರಳಲ್ಲಿ ಗ್ರಾಮಸ್ಥರು
ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಚಿರತೆ ಹಾವಳಿ (Video) ಮಿತಿಮೀರಿದೆ. ಕಳೆದ ಎರಡು ತಿಂಗಳಲ್ಲಿ ನಾಶಿಕ್, ನಾಗ್ಪುರ, ಗೊಂಡಿಯಾ ಮತ್ತು ರಾಯಗಢ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡಿವೆ. ಈಗ ನಾಗ್ಪುರದಲ್ಲೂ ಅದೇ ಮರುಕಳಿಸಿದ್ದು, ಜನರು ರಾತ್ರಿ ಹಗಲು ಎನ್ನದೆ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
