Love: ಪ್ರೀತಿಗೆ ಯಾವುದೇ ಎಲ್ಲೆ ಇಲ್ಲ ಎಂದು ಹೇಳಲಾಗುತ್ತದೆ. ಯುವಕ/ಯುವತಿ ತಾನು ಪ್ರೀತಿಸಿದ ವ್ಯಕ್ತಿಗಾಗಿ ಏನು ಬೇಕಾದರೂ ಮಾಡಲು ನಿರ್ಧಾರ ಮಾಡುತ್ತಾರೆ. ಕೆಲವೊಂದು ನಿಜವಾದ ಪ್ರೀತಿಯ ಘಟನೆಗಳನ್ನು ನೋಡಿರುತ್ತೇವೆ. ಆದರೆ ನಿಜ ಪ್ರೀತಿಗಿಂತ ಪ್ರೀತಿಯಲ್ಲಿ ಮೋಸಹೋದ ಘಟನೆಗಳನ್ನು ಹೆಚ್ಚಾಗಿ ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆ ನಿಜವಾದ ಪ್ರೀತಿಗೆ ಉದಾಹರಣೆ ಎಂದು ಹೇಳಬಹುದಾಗಿದೆ. ಇಲ್ಲೊಬ್ಬ ಮುಸ್ಲಿಂ ಯುವಕ ತನ್ನ ಪ್ರೇಯಸಿಗಾಗಿ ಮುಸ್ಲೀಂ ಧರ್ಮ ತೊರೆದು ಸನಾತನ ಧರ್ಮಕ್ಕೆ ಮತಾಂತರವಾದ ಘಟನೆಯೊಂದು ನಡೆದಿದೆ.

ಅಂದಹಾಗೆ ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. 34 ವರ್ಷದ ಮುಸ್ಲಿಂ ಯುವಕ ಸದ್ದಾಂ ಹಾಗೂ 30 ವರ್ಷ ವಯಸ್ಸಿನ ಹಿಂದೂ ಯುವತಿ ಸುಮಾರು 10 ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮೊದಲಿಗೆ ವಿವಾಹವಾಗಲು ಒಪ್ಪದ ಸದ್ದಾಂ, ಸದ್ಯ ಮದುವೆಯಾಗಲು ಒಪ್ಪಿ, ತನ್ನ ಪ್ರೇಯಸಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಜೊತೆಗೆ ತನ್ನ ಹೆಸರನ್ನು ಶಿವಶಂಕರ್ ಸೋನಿ ಎಂದು ಬದಲಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಬಜಾರ್ ನಿವಾಸಿಯಾಗಿದ್ದ ಸದ್ದಾಂ (ಶಿವಶಂಕರ್ ಸೋನಿ) ಅದೇ ಬಜಾರ್ ನಿವಾಸಿ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಹಲವು ಬಾರಿ ವಿವಾಹಕ್ಕೆ ಒತ್ತಾಯಿಸಿದ್ದಾಳೆ ಆದರೆ ಇಬ್ಬರೂ ಅನ್ಯ ಧರ್ಮದವರಾದ ಕಾರಣ ಯುವಕನ ಕುಟುಂಬಸ್ಥರು ನಿರಾರಕರಣೆ ಮಾಡಿದ್ದರು ಎನ್ನಲಾಗಿದೆ.

ಆದರೆ ಯುವತಿಯ ಕುಟುಂಬಸ್ಥರು ಕೆಲವು ದಿನಗಳ ಹಿಂದೆಯಷ್ಟೆ ಸದ್ದಾಂ ಹಾಗೂ ಆತನ ಕುಟುಂಬಸ್ಥರ ವಿರುದ್ದ ಮದುವೆಯ ನೆಪದಲ್ಲಿ ಅತ್ಯಾಚಾರ, ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದಾರೆ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೇ ಸ್ವ ಇಚ್ಚೇಯಿಂದ ಇಬ್ಬರೂ ವಿವಾಹವಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ದೇವೇಂದ್ರ ಸಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ. ಮುಸ್ಲೀಂ ಧರ್ಮದ ಸದ್ದಾಂ ಇದೀಗ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು, ಶಿವಶಂಕರ್ ಸೋನಿ ಎಂದು ನಾಮಕರಣ ಮಾಡಿಕೊಂಡಿದ್ದಾನೆ. ಹಿಂದೂ ಸಂಪ್ರದಾಯದಂತೆ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಇಬ್ಬರೂ ಸಪ್ತಪದಿ ತುಳಿದು ಜೀವನವನ್ನು ಒಟ್ಟಿಗೆ ಕಳೆಯಲು ಪ್ರತಿಜ್ಞೆ ಮಾಡಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರ ಹಾಗೂ ಮದುವೆ ತನ್ನ ಸ್ವ ಇಚ್ಚೆಯಿಂದ ನಿರ್ಧಾರ ಮಾಡಿದ್ದೇವೆ ಎಂದು ನವದಂಪತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.