Sunday, January 18, 2026
HomeNationalViral Video : ಅಮ್ಮನ ಪ್ರೀತಿ ಅಂದ್ರೆ ಇದೇ ಅಲ್ವಾ? ಮರಿಯಾನೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ತಾಯಿ...

Viral Video : ಅಮ್ಮನ ಪ್ರೀತಿ ಅಂದ್ರೆ ಇದೇ ಅಲ್ವಾ? ಮರಿಯಾನೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ತಾಯಿ ಆನೆ…!

ತಾಯಿ ಎಂಬ ಪದಕ್ಕೆ ಬೆಲೆ ಕಟ್ಟಲಾಗದು. ತನ್ನ ಕಂದಮ್ಮನ ರಕ್ಷಣೆಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ. ಅದು ಮನುಷ್ಯರಿರಲಿ ಅಥವಾ ಪ್ರಾಣಿಗಳಿರಲಿ, ಮಮತೆಯ ಗುಣ ಮಾತ್ರ ಒಂದೇ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದ್ದು, ನೆಟ್ಟಿಗರ ಕಣ್ಣಾಲಿಗಳು ತೇವವಾಗುತ್ತಿವೆ.

Viral video captures an emotional moment as a mother elephant saves her calf from dangerous floodwaters

Viral Video – ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮರಿಯಾನೆ

ಸಾಮಾನ್ಯವಾಗಿ ಆನೆಗಳು ಗುಂಪಿನಲ್ಲಿ ಅಥವಾ ಜೋಡಿಯಾಗಿ ಚಲಿಸುತ್ತವೆ. ಆದರೆ ಇಲ್ಲೊಂದು ಆನೆ ಮತ್ತು ಅದರ ಮರಿ ನದಿಯ ರಭಸದ ಪ್ರವಾಹಕ್ಕೆ ಸಿಲುಕಿದ್ದವು. ನೀರಿನ ವೇಗ ಎಷ್ಟಿತ್ತೆಂದರೆ ದೊಡ್ಡ ಆನೆಯೇ ಸಮತೋಲನ ಕಾಯ್ದುಕೊಳ್ಳಲು ಕಷ್ಟಪಡುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ ಸಣ್ಣ ಮರಿಯಾನೆ ನೀರಿನ ರಭಸಕ್ಕೆ ಕೊಚ್ಚಿ ಹೋಗಲು ಶುರು ಮಾಡಿತು. ಒಂದು ಕ್ಷಣ ತಡವಾಗಿದ್ದರೂ ಮರಿಯಾನೆ ನೀರಿನ ಪಾಲಾಗುತ್ತಿತ್ತು. ಆದರೆ ಸಮಯಪ್ರಜ್ಞೆ ಮೆರೆದ ತಾಯಿ ಆನೆ, ತನ್ನ ಪ್ರಾಣದ ಹಂಗು ತೊರೆದು ಮರಿಯನ್ನು ಗಟ್ಟಿಯಾಗಿ ಹಿಡಿದು ದಡಕ್ಕೆ ಎಳೆದು ತಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ

ಈ ಘಟನೆ ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕ್ರುಗರ್ ನ್ಯಾಷನಲ್ ಪಾರ್ಕ್ (Kruger National Park) ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಟ್ವಿಟರ್‌ನಲ್ಲಿ (X) @AMAZlNGNATURE ಎಂಬ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, “ತನ್ನ ಮರಿಯನ್ನು ಉಕ್ಕಿ ಹರಿಯುವ ನದಿಯಿಂದ ತಾಯಿ ಆನೆ ರಕ್ಷಿಸಿದ ಕ್ಷಣ” ಎಂದು ಕ್ಯಾಪ್ಶನ್ ನೀಡಲಾಗಿದೆ. ಕೇವಲ 28 ಸೆಕೆಂಡ್‌ಗಳ ಈ ವಿಡಿಯೋ ಈಗಾಗಲೆ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, (Viral Video) ಸಾವಿರಾರು ಜನರು ಲೈಕ್ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ.

Viral video captures an emotional moment as a mother elephant saves her calf from dangerous floodwaters

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಈ ವಿಡಿಯೋ ನೋಡಿದ ಜನ ಪ್ರಕೃತಿಯ ವಿಸ್ಮಯ ಮತ್ತು ತಾಯಿಯ ಪ್ರೇಮಕ್ಕೆ ಫಿದಾ ಆಗಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ಸುರಕ್ಷಿತವಾಗಿ ದಡ ಸೇರಿದ ಆನೆ ಮತ್ತು ಮರಿ ನಂತರ ಕಾಡಿನೊಳಗೆ ತೆರಳಿವೆ. ಪ್ರಕೃತಿಯ ಮಡಿಲಲ್ಲಿ ನಡೆಯುವ ಇಂತಹ ಘಟನೆಗಳು ನಮಗೆ ಜೀವನದ ದೊಡ್ಡ ಪಾಠಗಳನ್ನು ಕಲಿಸುತ್ತವೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular