ಜಗತ್ತಿನಲ್ಲಿ ಆಗಾಗ ಕೆಲವೊಂದು ಅಪರೂಪದ ಘಟನೆಗಳು ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರು ಒಂದೇ ಬಾರಿ ಮಗುವಿಗೆ ಜನ್ಮ ನೀಡುತ್ತಾರೆ, ಅವಳಿ, ತ್ರಿವಳಿ ಹಾಗೂ ಕೆಲವೊಂದು ಕಡೆ ಐದು ಮಕ್ಕಳಿಗೆ ಜನ್ಮ ನೀಡಿದಂತಹ ಸುದ್ದಿಯನ್ನು ಕೇಳಿರುತ್ತೇವೆ. ಆದರೆ ಇದೀಗ ಇಂಗ್ಲೇಡ್ ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಒಂದು ಮಗುವಿಗೆ ಜನ್ಮ ನೀಡಿದ 22 ದಿನಗಳ ಬಳಿಕ ಮತ್ತೊಂದು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಇದೀಗ ಈ ಸುದ್ದಿ ಚರ್ಚನೀಯವಾದ ವಿಚಾರವಾಗಿದೆ.
ಇಂಗ್ಲೇಡ್ ನ ನಿವಾಸಿಯಾದ ಕೈಲಿ ಡಾಯ್ಲ್ ಎಂಬ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರೆಲ್ಲಾ ವಿಚಿತ್ರ, ಅಪರೂಪ ಎಂಬ ಅನುಮಾನ ನಿಮಗೆ ಮೂಡಬಹುದು. ಮೊದಲ ಮಗು ಜನಿಸಿದ 22 ದಿನಗಳ ಬಳಿಕ ಮತ್ತೊಂದು ಮಗುವ ಹುಟ್ಟಿದೆ. 22 ದಿನಗಳ ಅಂತರದಲ್ಲಿ ಮಕ್ಕಳಿಬ್ಬರೂ ಹುಟ್ಟಲು ಹೇಗೆ ಸಾಧ್ಯವಾಯ್ತು ಎಂಬುದು ಇದೀಗ ಚರ್ಚನೀಯ ವಿಚಾರವಾಗಿದೆ. ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೈಲಿ ಮೊದಲ ಮಗುವಿಗೆ ಜನ್ಮ ಕೊಟ್ಟರು. ಮಗು ಅದಾಗಲೇ ಸತ್ತಿರುವುದಾಗಿ ವೈದ್ಯರು ಘೊಷಣೆ ಮಾಡಿದ್ದರು.
ಮೃತಪಟ್ಟ ಮಗು 1.1ಪೌಂಡ್ ತೂಕವಿದ್ದು, ಶಿಶುವಿನ ಹೊಕ್ಕಳ ಬಳ್ಳಿಯಲ್ಲಿ ರಕ್ತ ಹೆಪ್ಪು ಗಟ್ಟಿ ಸಾವನ್ನಪ್ಪಿದೆ ಎನ್ನಲಾಗಿತ್ತು. ಎರಡನೇ ಮಗುವಾದರೂ ಸಂಪೂರ್ಣವಾಗಿ ಆರೋಗ್ಯವಾಗಿ ಜನ್ಮಿಸಲಿ ಎಂದು ಕೈಲಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಳಂತೆ. ಆದರೆ ಕೆಲವೇ ಗಂಟೆಗಳಲ್ಲಿ ಕೈಲಿಗೆ ಹೆರಿಗೆ ನೋವು ನಿಂತಿದೆ. ಎರಡು ದಿನ ಆದರೂ ಹೆರಿಗೆ ನೋವು ಕಾಣಿಸದೇ ಇರುವ ಕಾರಣ ಆಕೆಯನ್ನು ವೈದ್ಯರು ಮನೆಗೆ ಕಳುಹಿಸಿದ್ದರು. ಇದಾದ 22 ದಿನಗಳ ಬಳಿಕ ಕೈಲಿಗೆ ಮತ್ತೆ ಹರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ಸ್ವಲ್ಪ ಹೊತ್ತಲ್ಲೇ ಎರಡನೇ ಮಗು ಹುಟ್ಟಿದೆ.