Tuesday, November 5, 2024

Mobile Tips: ಮಳೆಯಿಂದಾಗಿ ನಿಮ್ಮ ಮೊಬೈಲ್ ಒದ್ದೆಯಾಗುತ್ತಾ? ಹಾಗಾದರೇ ಈ ಟಿಪ್ಸ್ ಫಾಲೋ ಮಾಡಿ…..!

ಸದ್ಯ ದೇಶದಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕೆಲವೊಂದು ಕಡೆಯಂತೂ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೆಲವೊಂದು ಪ್ರದೇಶಗಳು ಜಲಾವೃತಗೊಂಡಿದೆ. ಆದರೂ ಸಹ ಕೆಲವರು ಕೆಲಸಗಳ ನಿಮಿತ್ತ ಹೊರಗೆ ಹೋಗಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಮಳೆಯಲ್ಲಿ ತಮ್ಮ ಮೊಬೈಲ್ ನೀರಿಗೆ ಒದ್ದೆಯಾಗದಂತೆ ನೋಡಿಕೊಳ್ಳುವುದು ತುಂಬಾನೆ ಕಷ್ಟಕರವಾಗಿರುತ್ತದೆ. ತಮ್ಮ ಮೊಬೈಲ್ ನೀರಿನಲ್ಲಿ ಒದ್ದೆಯಾದರೆ ನೀವು ಈ (Mobile Tips) ಟ್ರಿಕ್ಸ್ ಫಾಲೋ ಮಾಡಬಹುದಾಗಿದೆ.

Mobile tips in rain

ಮಳೆಯಿರಲಿ ಅಥವಾ ಬೇರೆ ಎಂದತಹುದೇ ಸಮಸ್ಯೆಯಿರಲಿ ಈ ಕಾಲದಲ್ಲಿ ಮೊಬೈಲ್  (Mobile Tips)  ತುಂಬಾನೆ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ. ಮಳೆಗಾಲದಲ್ಲಿ ಮೊಬೈಲ್ ಕ್ಯಾರಿ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ. ನಿಮ್ಮ ಮೊಬೈಲ್ ಮಳೆಗಾಲದಲ್ಲಿ ಏನಾದರೂ ಒದ್ದೆಯಾದರೇ ನೀವು ಈ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಮಳೆಯಲ್ಲಿ ಮೊಬೈಲ್  (Mobile Tips)  ಒದ್ದೆಯಾದರೇ ಕೂಡಲೇ ಈ ಕ್ರಮಗಳನ್ನು ಅನುಸರಿಸಬೇಕಿದೆ. ಜೊತೆಗೆ ಏನು ಮಾಡಬಾರದು ಎಂಬುದನ್ನು ಸಹ ತಿಳಿಸಲಾಗಿದೆ. ಹಲವು ಕಡೆಯಿಂದ ಸಂಗ್ರಹಿಸಿದ ಮಾಹಿತಿಯನ್ನು ಈ ಸ್ಟೋರಿಯಲ್ಲಿ ತಿಳಿಸಲಾಗಿದೆ.

ಗುಣ ಮಟ್ಟದ ಓರಿಯೆಂಟ್ ಫ್ಯಾನ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ ತಮ್ಮ ಮೊಬೈಲ್ ನೀರಿನಿಂದ ಒದ್ದೆಯಾದರೇ ತಕ್ಷಣ ನಿಮ್ಮ ಮೊಬೈಲ್  (Mobile Tips) ಲಾಕ್ ತೆರೆದು ಕೆಲಸ ಮಾಡುತ್ತಿದೆಯಾ ಇಲ್ಲವಾ ಎಂದು ನೋಡುತ್ತಾರೆ, ಆದರೆ ಈ ತಪ್ಪು ಎಂದಿಗೂ ಮಾಡಬಾರದು. ಮೊಬೈಲ್ ನೀರಿನಲ್ಲಿ ಬಿದ್ದು, ನೀರು ಒಳಗೆ ಹೋಗಿದ್ದರೇ, ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಇಲ್ಲವಾದಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಜೊತೆಗೆ ಮೊಬೈಲ್ ಒಳಗೆ ಸಹ ಡ್ಯಾಮೇಜ್ ಆಗಬಹುದು. ಇನ್ನೂ ಮೊಬೈಲ್ ನೀರಿಗೆ ಬಿದ್ದ ಕೂಡಲೇ ಕೆಲವೊಂದು ಮೊಬೈಲ್ ಗಳು ಸ್ವಿಚ್ ಆಫ್ ಆಗುತ್ತವೆ. ಈ ಸಮಯದಲ್ಲಿ ಚಾರ್ಜ್ ಮಾಡಲು ಮುಂದಾಗುತ್ತಾರೆ. ಇದು ಸಹ ತಮ್ಮ ಮೊಬೈಲ್  (Mobile Tips) ಹಾಳಾಗಲು ಕಾರಣವಾಗುತ್ತದೆ. ಸ್ಮಾರ್ಟ್ ಪೋನ್ ನೀರಿನಲ್ಲಿ ಒದ್ದೆಯಾದಾಗ ಸಿಮ್, ಮೆಮೋರಿ ಕಾರ್ಡ್ ತೆಗೆದು ಬಟ್ಟೆಯಿಂದ ಒರೆಸಿ, ಆದರೆ ಯಾವುದೇ ಕಾರಣಕ್ಕೂ ಹೇರ್‍ ಡ್ರೈಯರ್‍ ನಂತಹ ಸಾಧನಗಳನ್ನು ಬಳಸಬಾರದು ಎಂದು ಕೆಲವು ತಜ್ಞರ ಅಭಿಪ್ರಾಯವಾಗಿದೆ.

Mobile tips in rain 0

ತಮ್ಮ ಸ್ಮಾರ್ಟ್ ಪೋನ್ ನೀರಿನಲ್ಲಿ ಒದ್ದೆಯಾದಾಗ ಸಿಮ್, ಮೆಮೊರಿ ಕಾರ್ಡ್ ತೆಗೆದು ಬಟ್ಟೆಯಿಂದ ಒರೆಸಿ, ಬಳಿಕ ಒಂದು ಪಾತ್ರೆಯಲ್ಲಿ ಅಕ್ಕಿ ಸುರಿದು, ನಿಮ್ಮ ಮೊಬೈಲ್ ಅದರಲ್ಲಿಡಿ. ಕನಿಷ್ಟ 24 ಗಂಟೆಗಳ ಕಾಲ ಮೊಬೈಲ್  (Mobile Tips) ಇಡಿ. ಈ ರೀತಿ ಮಾಡುವುದರಿಂದ ಪೋನ್ ನಲ್ಲಿರುವ ತೇವಾಂಶ ಅಕ್ಕಿ ಹಿರೀಕೊಳ್ಳುತ್ತದೆ. ಆದರೂ ಮೊಬೈಲ್ ನಲ್ಲಿ ನೀರು ಇದ್ದರೇ, ಹತ್ತಿರದ ಮೊಬೈಲ್ ಶಾಪ್ ನಲ್ಲಿ ಸರ್ವಿಸ್ ಮಾಡಿಸಿ. ಮಳೆಗಾಲದ ಸಮಯದಲ್ಲಿ ಹೆಚ್ಚು ಹೊರಗೆ ಓಡಾಡುವಂತಹವರು ನೀರಿನಿಂದ ಒದ್ದೆಯಾಗದಂತಹ ಮೊಬೈಲ್  (Mobile Tips)  ಕವರ್‍ ಬಳಸಬೇಕು. ಇಲ್ಲ ಪ್ಲಾಸ್ಟಿಕ್ ಕವರ್‍ ನಲ್ಲಿ ಮೊಬೈಲ್ ಇಟ್ಟುಕೊಂಡರೂ ಮೊಬೈಲ್ ಒದ್ದೆಯಾಗುವುದಿಲ್ಲ. ಈ ಮಾಹಿತಿಯನ್ನು ಕೆಲವೊಂದು ಮೂಲಗಳಿಂದ ಸಂಗ್ರಹಿಸಲಾಗಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!