ಆಗಾಗ ಕೆಲ ರಾಜಕಾರಣಿಗಳು ನೀಡುವಂತಹ ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ತವೆ. ಇದೀಗ ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿನಾಯಕ ದಾಮೋದರ್ ಸಾವರ್ಕರ್ (Savarkar) ಒಬ್ಬ ಚಿತ್ಪಾವನ ಬ್ರಾಹ್ಮಣ, ಅವರು ಮಾಂಸಾಹಾರ ಸೇವನೆ ಮಾಡುತ್ತಿದ್ದರು, ಅವರು ಗೋಹತ್ಯೆಗೆ ವಿರುದ್ದವಾಗಿರಲಿಲ್ಲ ಎಂದು ಹೇಳಿದ್ದಾರೆ. ಕಳೆದ ಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸಾವರ್ಕರ್ ಬ್ರಾಹ್ಮಣ, ಆದರೂ ಅವರು ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಸಾವರ್ಕರ್ ಮೂಲಭೂತವಾದಿಯಾಗಿದ್ದರು. ಮಾರ್ಡನ್ ಆಗಿದ್ದರು, ದನದ ಮಾಂಸ ಸೇವನೆ ಮಾಡುತ್ತಿದ್ದರು. ಜೊತೆಗೆ ಬಹಿರಂಗವಾಗಿಯೇ ಮಾಂಸಾಹಾರ ಸೇವನೆ ಬಗ್ಗೆ ಅರಿವು ಸಹ ಮೂಡಿಸುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಇನ್ನೂ ಮಹಾತ್ಮ ಗಾಂಧಿ ಸಸ್ಯಾಹಾರಿ. ಅವರಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಗೌರವ ಇತ್ತು. ಆದರೆ ಅವರ ಅಭಿಪ್ರಾಯ ಬೇರೆ ರೀತಿಯಲ್ಲಿತ್ತು. ಗಾಂಧೀಜಿಯವರು ಡೆಮಾಕ್ರೆಟಿಕ್ ಆಗಿದ್ದರು. ಅಷ್ಟೇಅಲ್ಲದೇ ಮೊಹಮ್ಮದ್ ಅಲಿ ಜಿನ್ನಾ ಕೂಡ ಡೆಮಾಕ್ರೆಟಿಕ್ ಆಗಿದ್ದರು, ಅವರು ಕಟ್ಟ ಇಸ್ಲಾಂವಾದಿಯಾಗಿರಲಿಲ್ಲ. ವೈನ್ ಕುಡಿಯುತ್ತಿದ್ದರು, ಹಂದಿ ಮಾಂಸ ಸೇವನೆ ಮಾಡಿದ್ದರು ಎಂದು ಅನೇಕರು ಹೇಳುತ್ತಾರೆ. ಜಿನ್ನಾ ಮೂಲಭೂಥವಾದಿಯಾಗಿರಲಿಲ್ಲ, ಆದರೆ ಸಾವರ್ಕರ್ ಮೂಲಭೂತವಾದಿಯಾಗಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದರು. ಇದೀಗ ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆ ಭಾರಿ ಆಕ್ರೋಷ ಹಾಗೂ ವಿವಾದಕ್ಕೆ ಕಾರಣವಾಗಿದೆ.
ಇನ್ನೂ ದಿನೇಶ್ ಗುಂಡೂರಾವ್ ರವರ ಹೇಳಿಕೆಗೆ ವಿರೋಧ ಪಕ್ಷದ ನಾಯಕರೂ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೇಸ್ ನವರಿಗೆ ಸದಾ ಹಿಂದೂಗಳನ್ನು ಟೀಕೆ ಮಾಡುವುದಷ್ಟೆ ಧರ್ಮ ಆಗಿದೆ. ಸಾವರ್ಕರ್ ರವರು ಸತ್ತು ಸ್ವರ್ಗದಲ್ಲಿದ್ದಾರೆ. ಇನ್ನಾದರೂ ಅವರನ್ನು ಬಿಡಿ. ಕೊನೆಗೆ ಹೆಣ್ಣು ಮಕ್ಕಳು ಬಳೆಯೂ ಹಾಕಬಾರದೆಂಬ ಮನಸ್ಥಿತಿಗೆ ಕಾಂಗ್ರೇಸ್ ನವರು ಬಂದುಬಿಡುತ್ತಾರೆ. ಇನ್ನಾದರೂ ನಿಮ್ಮ ಮನಃಸ್ಥಿತಿ ಬದಲಿಸಿಕೊಳ್ಳಿ, ಸದಾ ಹಿಂದೂಗಳ ಬಗ್ಗೆ ಟೀಕೆ ಮಾಡುವ ನೀವು ಮುಸ್ಲೀಂರ ಬಗ್ಗೆ ಒಂದು ಮಾತನ್ನಾದರೂ ಮಾತಾಡಿದ್ದೀರಾ ಎಂದು ಅಶೋಕ್ ಆಕ್ರೋಷ ಹೊರಹಾಕಿದ್ದಾರೆ.