Matrimony Scam – ಇಂದಿನ ಕಾಲದಲ್ಲಿ ಮದುವೆಗಾಗಿ ಬಹುತೇಕರು ಮ್ಯಾಟ್ರಿಮೋನಿ ತಾಣಗಳ ಮೊರೆ ಹೋಗುತ್ತಾರೆ. ಹಲವಾರು ಮ್ಯಾಟ್ರಿಮೋನಿ ಸೈಟ್ ಗಳು ಚಾಲ್ತಿಯಲ್ಲಿದ್ದು, (Matrimony Scam) ಇಂತಿಷ್ಟು ಹಣ ಅಂತಾ ಪಾವತಿಸಿ ನೊಂದಣಿಯಾಗುತ್ತಾರೆ. ಆದರೆ ಕೆಲವೊಮ್ಮೆ ಈ ಮ್ಯಾಟ್ರಿಮೋನಿ ತಾಣಗಳಲ್ಲಿ ರಿಜಿಸ್ಟರ್ ಮಾಡಿಕೊಂಡ ಕೆಲವರು ಹಣ ದೋಚುವ ಉದ್ದೇಶದಿಂದ ಅಮಾಯಕರನ್ನು ಮೋಸ ಮಾಡುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದ್ದು, ಮ್ಯಾಟ್ರಿಮೋನಿಯಲ್ಲಿ (Matrimony Scam) ಮದುವೆಯಾಗುವುದಾಗಿ ನಂಬಿಸಿದ ಮಹಿಳೆಯೊಬ್ಬರು ಬರೊಬ್ಬರಿ 7.50 ಲಕ್ಷ ವಂಚನೆ ಮಾಡಿದ್ದು, ಈ ಸಂಬಂಧ ಮೋಸ ಹೋದ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾನೆ.
ಮ್ಯಾಟ್ರಿಮೋನಿ ತಾಣದ ಮೂಲಕ ಮೋಸ:
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದ ರಾಘವೇಂದ್ರ ಎಂಬುವವರು ಪ್ರಸಿದ್ದ ಮ್ಯಾಟ್ರಿಮೋನಿ (Matrimony Scam) ತಾಣದಲ್ಲಿ ಮಹಿಳೆಯೊಬ್ಬರಿಂದ ಮೋಸಹೋಗಿದ್ದಾರೆ. ಇತ್ತೀಚಿಗೆ ಹೆಂಡತಿಯನ್ನು ಕಳೆದುಕೊಂಡಿದ್ದ ರಾಘವೇಂದ್ರ ಎರಡನೇ ಮದುವೆಯಾಗಲು (Matrimony Scam) ಮಾಟ್ರಿಮೋನಿ ತಾಣವೊಂದರಲ್ಲಿ ನೊಂದಣಿಯಾಗಿದ್ದ. ಈ ತಾಣದಲ್ಲಿ ಕೋಮಲ ಎಂಬಾಕೆಯ ಐಡಿಗೆ ರಿಕ್ವೆಸ್ಟ್ ಕಳುಹಿಸಿದ್ದಾನೆ. (Matrimony Scam) ಬಳಿಕ ಕೋಮಲ ತನ್ನ ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಮಾಡಿದ್ದಾಳೆ. ತನ್ನ ಗಂಡ ಸಹ ಮೃತಪಟ್ಟಿದ್ದು, ಮಕ್ಕಳು ಸಹ ಇಲ್ಲ. ನಾನು ನಿಮ್ಮನ್ನು ಮದುವೆಯಾಗಲು ಒಪ್ಪಿದ್ದೇನೆ (Matrimony Scam) ಎಂದು ಚಾಟಿಂಗ್ ಮಾಡಿ ತನ್ನ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಾಳೆ. (Matrimony Scam) ಆ ಮೂಲಕ ರಾಘವೇಂದ್ರನಿಗೆ ತನ್ನ ಮೇಲೆ ನಂಬಿಕೆ ಬರುವಂತೆ ಮಾಡಿದ್ದಾಳೆ.
ಕಷ್ಟ-ಸುಖ ಹೇಳಿಕೊಂಡ ಮಹಿಳೆ ಲಕ್ಷ ಲಕ್ಷ ದೋಚಿದಳು:
ಬಳಿಕ ಕೋಮಲ ತನ್ನ (Matrimony Scam) ಗಂಡನಿಗೆ ಮೃತ ಪರಿಹಾರದ ಆರು ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟದ ಕಾರಣದಿಂದ ಬ್ಯಾಂಕ್ ಖಾತೆಯಲ್ಲಿಯೇ ಇದೆ. ಖಾತೆ ಬ್ಲಾಕ್ ಆಗಿದೆ. ಟ್ಯಾಕ್ಸ್ ಹಣ ಕಟ್ಟಬೇಕು ಎಂದು ಹೇಳಿ ರಾಘವೇಂದ್ರ ಬಳಿ 7 ಲಕ್ಷ 40 ಸಾವಿರ ರೂಪಾಯಿಗಳನ್ನು ಕೋಮಲ ತಾಯಿ ರಾಧ ಎಂಬುವವರ ಖಾತೆಗೆ ಹಾಕಿಸಿಕೊಂಡಿದ್ದಾಳೆ. (Matrimony Scam) ರಾಘವೇಂದ್ರ ಹಣ ಕೊಡುತ್ತಿದ್ದಂತೆ ಕೋಮಲ ತನ್ನ ಸೋಷಿಯಲ್ ಮಿಡಿಯಾ ಖಾತೆಗಳನ್ನು ಬ್ಲಾಕ್ ಮಾಡಿದ್ದಾಳೆ. (Matrimony Scam) ಜೊತೆಗೆ ಮೊಬೈಲ್ ಸಹ ನಾಟ್ ರೀಚಬಲ್ ಮಾಡಿಕೊಂಡಿದ್ದಾಳೆ. ಮೊದಲಿಗೆ ಬೇರೆ ಏನೋ ಸಮಸ್ಯೆಯಾಗಿರಬಹುದು ಎಂದು (Matrimony Scam) ರಾಘವೇಂದ್ರ ಕೋಮಲ ಕಡೆಯಿಂದ ಪ್ರತಿಕ್ರಿಯೆಗಾಗಿ ಕಾದಿದ್ದ. (Matrimony Scam) ಬಳಿಕ ತಾನು ಮೋಸ ಹೋಗಿರುವುದಾಗಿ ಅರಿತುಕೊಂಡಿದ್ದಾನೆ. ಕೂಡಲೇ ಚಿಕ್ಕಬಳ್ಳಾಪುರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಹಳಷ್ಟು ಮಂದಿಗೆ ಮೋಸ ಮಾಡಿದ್ದಾಳಂತೆ ಈ ಕೋಮಲ:
ಇನ್ನೂ ದೂರು ದಾಖಲಿಸಿಕೊಂಡ (Matrimony Scam) ಪೊಲೀಸರು ತನಿಖೆ ನಡೆಸಿ ಕೋಮಲ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ವಂಚಕಿ ಕೋಮಲ ಗುಜರಾತ್ ನಲ್ಲಿ ನೆಲೆಸಿರುವ ಕುಂದಾಪುರ ಮೂಲದ ರಾಘವೇಂದ್ರ ಎಂಬುವವರಿಗೆ ಮೋಸ ಮಾಡಿ 25 ಸಾವಿರ ಹಣ ಹಾಕಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ (Matrimony Scam) ಗುಜರಾತ್ ನ ವಲಸಾಡ್ ನ ಧರಮ್ ಪುರ್ ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚನೆಯ ಪ್ರಕರಣ ದಾಖಲಾಗಿದೆ. ಜೊತೆಗೆ ಬೆಂಗಳೂರಿನ ನಾಗರಾಜು (Matrimony Scam) ಎಂಬುವವರಿಗೂ ಸಹ ಒಂದೂವರೆ ಲಕ್ಷ ಹಣ ಹಾಕಿಸಿಕೊಂಡ ಮೋಸ ಮಾಡಿದ ಸಂಬಂಧ ಬೆಂಗಳೂರಿನ ಅನ್ನಪೂರ್ಣೆಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ (Matrimony Scam) ಚಿಕ್ಕಬಳ್ಳಾಪುರದಲ್ಲಿ ಕೋಮಲ ವಿರುದ್ದ ದಾಖಲಾದ ದೂರಿನ ಮೇರೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿಕೊಂಡಿದ್ದು, ತನಿಖೆ ನಡೆಸಿ ಆರೋಪಿ ಕೋಮಲ ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಮಲ ಳನ್ನು ವಶಕ್ಕೆ ಪಡೆದ ಪೊಲೀಸರು:
ಇನ್ನೂ (Matrimony Scam) ಬಂಧಿತ ಮಹಿಳೆಯ ಬಳಿ ಆಪಲ್ ಪೋನ್, ಆಪಲ್ ವಾಚ್ ಹಾಗೂ ಇಪ್ಪತ್ತು ಸಾವಿರ ನಗದು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಕೋಮಲಗೆ (Matrimony Scam) ಈಗಾಗಲೇ ಮದುವೆಯಾಗಿ 20 ವರ್ಷ ಗಂಡು ಮಗ ಹಾಗೂ 16 ವರ್ಷದ ಹೆಣ್ಣು ಮಗಳಿದ್ದಾಳಂತೆ. ಶಿವಮೊಗ್ಗದಲ್ಲಿ ಕೆ.ಪಿ.ಟಿ.ಸಿ.ಎಲ್ ನೌಕರನಾಗಿದ್ದ ರಮೇಶ್ ಎಂಬಾತನನ್ನು ಮದುವೆಯಾಗಿದ್ದಳು. ಕಳೆದ 2017 ರಲ್ಲಿ ರಮೇಶ್ ಮೃತಪಟ್ಟಿದ್ದು. (Matrimony Scam) ವಿಲಾಸಿ ಜೀವನ ನಡೆಸಲು ಆರೋಪಿ ಕೋಮಲ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜನರಿಗೆ ಈ ರೀತಿಯಾಗಿ ಮೋಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.