Matrimony Fraud – ಆನ್‌ಲೈನ್ ಮ್ಯಾಟ್ರಿಮೋನಿಯಲ್ ಸೈಟ್‌ಗಳ ಮೂಲಕ ಮಹಿಳೆಯರನ್ನು ವಂಚಿಸುತ್ತಿದ್ದ 61 ವರ್ಷದ ವೃದ್ಧನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಹಾದೇವಪುರ ನಿವಾಸಿಯಾದ ಸುರೇಶ್ ನಾಯ್ಡು ಎಂಬಾತ ಈ ವಂಚನೆಯ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಚಿಕ್ಕಬಳ್ಳಾಪುರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
Matrimony Fraud – ಡಿವೋರ್ಸ್ ಮ್ಯಾಟ್ರಿಮೋನಿ ಸೈಟ್ ಮೂಲಕ ವಂಚನೆ?
ಆರೋಪಿ ಸುರೇಶ ನಾಯ್ಡು ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಆದರೂ ಸಹ, ಡೈವರ್ಸಿ ಮ್ಯಾಟ್ರಿಮೋನಿ ಸೈಟ್‌ನಲ್ಲಿ (Divorce Matrimony site) ಮರುಮದುವೆಯಾಗಲು ನೋಂದಾಯಿಸಿಕೊಂಡಿದ್ದ. ಆತ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದನು. ನಂತರ ಅವರಿಗೆ ವಂಚನೆ ಮಾಡುತ್ತಿದ್ದನು. ಇತ್ತೀಚೆಗೆ, ಚಿಕ್ಕಬಳ್ಳಾಪುರದ ಲೇಡಿ ನರ್ಸಿಂಗ್ ಅಧಿಕಾರಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಆತನಿಂದ ಬರೋಬ್ಬರಿ 2.80 ಲಕ್ಷ ರೂಪಾಯಿಗಳನ್ನು ಪಡೆದಿದ್ದ. ಅಷ್ಟೇ ಅಲ್ಲದೆ, ಆ ಮಹಿಳೆಗೆ ಬ್ಲಾಕ್‌ಮೇಲ್ (Blackmail) ಮಾಡಿ ಬೆದರಿಕೆ ಹಾಕಿದ್ದನು ಎಂದು ತಿಳಿದುಬಂದಿದೆ.
Matrimony Fraud – ಸೈಬರ್ ಠಾಣೆಗೆ ದೂರು: ಆರೋಪಿ ಬಂಧನ
ನೊಂದ ಮಹಿಳೆ ಚಿಕ್ಕಬಳ್ಳಾಪುರದ ಸೈಬರ್ ಠಾಣೆಯಲ್ಲಿ (Cyber Police Station) ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸುರೇಶ ನಾಯ್ಡುನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ, ಬೆಂಗಳೂರಿನ ಯಶವಂತಪುರದಲ್ಲಿ ಓರ್ವ ಮಹಿಳೆ, ಮಲೇಷ್ಯಾದಲ್ಲಿ ಓರ್ವ ಮಹಿಳೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಓರ್ವ ಮಹಿಳೆ ಸೇರಿದಂತೆ ಹಲವು ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. Read this also : ಮೂರು ವರ್ಷಕ್ಕೆ ನಾಲ್ಕು ಮದುವೆಯಾದ ಖತರ್ನಾಕ್ ಲೇಡಿ, ಹೆಣ್ಣು ಸಿಗದ ಗಂಡಸರೇ ಈಕೆಗೆ ಟಾರ್ಗೆಟ್?
Matrimony Fraud – ಆರ್ಥಿಕ ಸಂಕಷ್ಟವೇ ವಂಚನೆಗೆ ಕಾರಣ?
ವಿಚಾರಣೆ ವೇಳೆ ಆರೋಪಿ ಸುರೇಶ ನಾಯ್ಡು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತನ್ನ ತಂದೆ ತೀರಿಕೊಂಡ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದೆ. ಆ ಸಾಲವನ್ನು ತೀರಿಸಲು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದೆ ಎಂದು ಆತ ಬಾಯ್ಬಿಟ್ಟಿದ್ದಾನೆ. ಸದ್ಯಕ್ಕೆ ವಂಚಕ ಸುರೇಶ ನಾಯ್ಡು ಪೊಲೀಸರ ಅತಿಥಿಯಾಗಿದ್ದಾನೆ. ಈ ಸಂಬಂಧ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.