Marriage – ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಹೆಚ್ಚಾಗಿ ಹರಿದಾಡುತ್ತಿವೆ. ಸಾಮಾನ್ಯವಾಗಿ ಸಿನೆಮಾಗಳಲ್ಲಿ ಮದುವೆಯ ವೇಳೆ ವಧು ಅಥವಾ ವರ ಪ್ರೀತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಧುವನ್ನು ಮದುವೆ ಮನೆಯಿಂದ ಓಡಿಸಿಕೊಂಡು ಹೋಗುವಂತಹ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ನಿಜಜೀವನದಲ್ಲೂ ಸಹ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯ ರಿಸೆಪ್ಷನ್ ದಿನದಂದೇ ಸಿನಿಮೀಯ ರೀತಿಯಲ್ಲಿ ವಧು ತನ್ನ ಪ್ರಿಯಕರನ ಜೊತೆಗೆ ಓಡಿಹೋಗಿದ್ದಾಳೆ.

ಇನ್ನೇ ಕೆಲವೇ ಕ್ಷಣಗಳಲ್ಲಿ ನಡೆಯಬೇಕಿರುವ ಮದುವೆಗಳು ವರ ಅಥವಾ ವಧು ಪರಾರಿಯಾದಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇಲ್ಲೊಂದು ಅಂತಹ ಘಟನೆ ನಡೆದಿದೆ. ಆರತಕ್ಷತೆಯ ದಿನದಂದೇ ವಧು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿದ್ದಾಳೆ. ಬ್ಯೂಟಿ ಪಾರ್ಲರ್ ಗೆ ಹೋದ ವಧು ಸೀದಾ ಪ್ರಿಯಕರನ ಜೊತೆಗೆ ಪರಾರಿಯಾಗಿದ್ದಾಳೆ. ಅಂದಹಾಗೆ ಈ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ. ರಿಸೆಪ್ಷನ್ ನಡೆಯೋಕೆ ಕೆಲವೇ ಕ್ಷಣ ಬಾಕಿಯಿದೆ. ಅಷ್ಟರಲ್ಲಿ ವಧು 10 ಲಕ್ಷ ಬೆಲೆ ಬಾಳುವ ಆಭರಣಗಳೊಂದಿಗೆ ತನ್ನ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ.
ಮದುವೆ ಸಂಬಂಧ ಆರತಕ್ಷತೆಯ ದಿನದಂದು ವರ ಆಶಿಶ್ ಹಾಗೂ ರೋಶ್ನಿ ರೆಡಿಯಾಗೋಕೆ ಬ್ಯೂಟಿ ಪಾರ್ಲರ್ ಗೆ ಹೋಗಿದ್ದರು. ಅಲ್ಲಿಂದ ನೇರವಾಗಿ ಮಂಟಪಕ್ಕೆ ಕಾರಿನಲ್ಲಿ ಹೋದರು. ಇನ್ನೇನು ಅವರು ಮಂಟಪ ತಲುಪುವಷ್ಟರಲ್ಲಿ ಅಲ್ಲಿಗೆ ಮತ್ತೊಂದು ಕಾರು ಬಂದಿದೆ. ವರ ಆಶಿಕ್ ನ ಸಹೋದರಿಯನ್ನು ತಳ್ಳಿ ಯುವಕನೊಬ್ಬ ವಧುವನ್ನು ಕಾರಿನಲ್ಲಿ ಕೂರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಎಲ್ಲರೂ ಇದೊಂದು ಅಪಹರಣ ಪ್ರಕರಣವೆಂದು ನಂಬಿದ್ದರು. ಬಳಿಕ ವಧು ಇಚ್ಚೆಯಿಂದಲೇ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ ಎಂದು ಗೊತ್ತಾಗಿದೆ.

ಇನ್ನೂ ವಧು ರೋಶ್ನಿ ಹಾಗೂ ಅಂಕಿತ್ ಎಂಬ ಯುವಕ ಕಳೆದ ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದರಂತೆ. ಆದರೆ ಅವರ ಪ್ರೀತಿಗೆ ಮನೆಯವರ ವಿರೋಧವಿತ್ತು ಎನ್ನಲಾಗಿದೆ. ಅದರ ಜೊತೆಗೆ ರೋಶ್ನಿ ಮನೆಯವರು ಮಗಳಿಗೆ ಬರೊಬ್ಬರ ಜೊತೆಗೆ ಮದುವೆ ಫಿಕ್ಸ್ ಮಾಡಿದ್ದಾರೆ. ಅದರಂತೆ ಮದುವೆಯ ಆರತಕ್ಷತೆಯ ದಿನದಂದೇ ತನ್ನ ಪ್ರಿಯಕರನ ಜೊತೆಗೆ ರೋಶ್ನಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾಳೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದ್ದು, ಓಡಿ ಹೋಗಿರುವಂತಹ ರೋಶ್ನಿ ಹಾಗೂ ಅಂಕಿತ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.