ಬಹುತೇಕರಿಗೆ ಅಣಬೆ (Mushroom) ಎಂದರೇ ತುಂಭಾನೆ ಇಷ್ಟ ಎಂದು ಹೇಳಬಹುದು. ಅಣಭೆಗಳಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡುತ್ತಾರೆ. ಆದರೆ ಮ್ಯಾಜಿಕ್ ಮಶ್ರೂಮ್ (Magic Mushroom) ಬಗ್ಗೆ ತುಂಬಾನೆ ಕಡಿಮೆ ಮಂದಿಗೆ ಗೊತ್ತಿರುತ್ತದೆ. ಈ ಮ್ಯಾಜಿಕ್ ಮಶ್ರೂಮ್ ತುಂಬಾನೆ ಡೇಂಜರ್ ಎಂದು ಹೇಳಲಾಗುತ್ತೆ. ಖಿನ್ನತೆ ಮತ್ತು ಇತರೆ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿರುವ ಈ ಮ್ಯಾಜಿಕ್ ಮಶ್ರೂಮ್ ಅನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದೂ ಎಂದು ಕೂಡಾ ಹೇಳಲಾಗಿದೆ. ಆದರೆ ವ್ಯಕ್ತಿಯೋರ್ವ ಈ ಮ್ಯಾಜಿಕ್ ಮಶ್ರೂಮ್ (Magic Mushroom) ಸೇವನೆ ಮಾಡಿ ಮಾಡಬಾರದ ಕೆಲಸ ಮಾಡಿಕೊಂಡಿದ್ದಾನೆ.
ಈ ಭೂಮಿಯ ಮೇಲೆ ಅನೇಕ ಚಿತ್ರ ವಿಚಿತ್ರ ವಸ್ತುಗಳು ಇರುತ್ತವೆ. ಅವುಗಳ ಸೇವನೆ ಅಪಾಯಕಾರಿ ಸಹ ಆಗಿರುತ್ತದೆ. ಹೀಗೆ ತಿನ್ನಬಾರದಂತಹ ಪದಾರ್ಥಗಳನ್ನು ತಿಂದು ಪಜೀತಿಗೆ ಸಿಲುಕಿದಂತಹ ಸನ್ನಿವೇಶಗಳೂ ಸಹ ನಡೆದಿರುವ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ಮ್ಯಾಜಿಕ್ ಮಶ್ರೂಮ್ (Magic Mushroom)ತಿಂದು ತನ್ನ ಖಾಸಗಿ ಅಂಗವನ್ನು ತಾನೇ ಕತ್ತಿಸಿಕೊಂಡಿದ್ದಾನೆ. ಮ್ಯಾಜಿಕ್ ಮಶ್ರೂಮ್ ಎಂದು ಕರೆಯಲಾಗುವ ಸೈಲೋಸಿಬಿನ್ ಅಣಬೆ (Magic Mushroom) ತಿಂದ ವ್ಯಕ್ತಿ ಭ್ರಮೆಯಿಂದಾಗಿ ಆಸ್ಟ್ರೀಯಾದ ವ್ಯಕ್ತಿ ಕೊಡಲಿಯಿಂದ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿಯೊಂದನ್ನು ಮಾಡಿದೆ. ಆ ವರದಿಯಂತೆ ಮದ್ಯಪಾನ ಹಾಗೂ ಖಿನ್ನತೆಗೆ ಒಳಗಾಗಿದ್ದ 37 ವರ್ಷದ ಆಸ್ತ್ರಿಯಾ ಮೂಲದ ವ್ಯಕ್ತಿ ಮನೆಯಲ್ಲಿದ್ದಾಗ ನಾಲ್ಕೈದು ಸೈಲೋಸಿಬಿನ್ ಅಣಬೆಗಳನ್ನು ತಿಂದಿದ್ದಾನೆ. ಈ ಅಣಬೆಯನ್ನು ತಿಂದ ಬಳಿಕ ಆತನಿಗೆ ತಲೆ ತಿರುಗಲಾರಂಭಿಸಿದೆ. ಇದೇ ಭ್ರಮೆಯಿಂದಾಗಿ ಮಾನಸಿಕ ಸ್ಥಿರತೆಯನ್ನು ಸಹ ಕಳೆದುಕೊಂಡಿದ್ದಾನೆ. ಅದೇ ಭ್ರಮೆಯಲ್ಲಿ ತನ್ನ ಖಾಸಗಿ ಅಂಗವನ್ನು ಕೊಡಲಿಯಿಂದ ಕತ್ತರಿಸಿಕೊಂಡಿದ್ದಾನೆ. ಬಳಿಕ ತುಂಬಾನೆ ರಕ್ತಸ್ರಾವವಾಗಿದೆ. ಬಟ್ಟೆ ಕಟ್ಟುವ ಮೂಲಕ ರಕ್ತಸ್ರಾವ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ನಂತರ ತುಂಡಾದ ಗುಪ್ತಾಂಗದ ಭಾಗವನ್ನು ಐಸ್ ತುಂಬಿದ ಬಾಕ್ಸ್ ನಲ್ಲಿ ಇರಿಸಿ ಮನೆಯಿಂದ ಹೊರಗೆ ಬಂದಿದ್ದಾನೆ.
ಆತನ ಸ್ಥಿತಿಯನ್ನು ಕಂಡ ಸ್ಥಳೀಯರೊಬ್ಬರು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಮಣ್ಣು ಮತ್ತು ತಣ್ಣಗಿರುವ ನೀರು ಗುಪ್ತಾಂಗಕ್ಕೆ ತಗುಲಿದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ಕಷ್ಟಕರವಾಗಿದೆ. ಆದರೂ ಸಹ ವೈದ್ಯರು ಚಿಕಿತ್ಸೆ ಮಾಡಿ ಜನನಾಂಗವನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆ ವ್ಯಕ್ತಿಯನ್ನು ಮನೋವೈದ್ಯಕೀಯ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿದೆ. ಸದ್ಯ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಾ ವ್ಯಕ್ತಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ.
ಅಷ್ಟಕ್ಕೂ ಮ್ಯಾಜಿಕ್ ಮಶ್ರೂಮ್ ಅಂದ್ರೇ ಏನು ಎಂಬ ವಿಚಾರಕ್ಕೆ ಬಂದರೇ, ಮ್ಯಾಜಿಕ್ ಮಶ್ರೂಮ್ ಎಂಬುದು ಒಂದು ಅಣಬೆಯ ಪ್ರಭೇದವಾಗಿದೆ. ಇದರಲ್ಲಿ ನೈಸರ್ಗಿಕವಾಗಿ ಸೈಲೋಸಿಬಿನ್ ಎಂಬ ಸಂಯುಕ್ತವಿದ್ದು, ಅದನ್ನು ಸೇವನೆ ಮಾಡಿದರೇ ಮೆದುಳಿನ ಮೇಲೆ ಕೆಟ್ಟದಾದ ಪರಿಣಾಮ ಬೀರುತ್ತದೆ. ಇದರಿಂದಾಗಿ ತಿಂದ ಮನುಷ್ಯ ಭ್ರಮೆಯ ಸ್ಥಿತಿಗೆ ತಲುಪುವಂತೆ ಮಾಡುತ್ತದೆಯೆಂತೆ. ಜೊತೆಗೆ ಆ ಅಣಭೆ ಸೇವನೆ ಮಾಡುವ ವ್ಯಕ್ತಿಯು ಯೋಚಿಸುವ ಹಾಗೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಸಹ ಕಳೆದುಕೊಳ್ಳುತ್ತಾರಂತೆ. ಆದರೆ ಈ ಅಣಬೆಯನ್ನು ಹಲವಾರು ರೋಗಗಳಿಗೆ ಔಷಧವಾಗಿಯೂ ಬಳಸುತ್ತಾರೆ ಎನ್ನಲಾಗಿದೆ. ವೈದ್ಯರ ಸಲಹೆ ಇಲ್ಲದೇ ಈ ಅಣಬೆ ಸೇವನೆ ಮಾಡುವುದು ತುಂಬಾನೆ ಅಪಾಯಕಾರಿ ಎಂದು ಹೇಳಲಾಗಿದೆ.