ನಮ್ಮ ದೇಶದಲ್ಲಿ ಹಾವುಗಳು ಮತ್ತು ಶಿವನಿಗೆ ಅವಿನಾಭಾವ ಸಂಬಂಧವಿದೆ. ಈ ನಂಬಿಕೆಯನ್ನು ನಿಜವಾಗಿಸುವಂತೆ, ಪ್ರಸಿದ್ಧ ಧಾರ್ಮಿಕ ಕ್ಷೇತ್ರವೊಂದರಲ್ಲಿ ಅದ್ಭುತ ಘಟನೆಯೊಂದು ನಡೆದಿದೆ. ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪ್ರಸಿದ್ಧ ಮಹಾನಂದಿ ಶಿವನ ದೇವಾಲಯದ (Mahanandi Temple Snake Video) ಆವರಣದಲ್ಲಿ, ಶಿವನ ವಿಗ್ರಹದ ಮೇಲೆ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕಾಡುಗಳು ನಾಶವಾಗುತ್ತಿರುವುದರಿಂದ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುವುದು ಸಾಮಾನ್ಯವಾಗಿದೆ. ಆದರೆ, ಮಹಾನಂದಿಯಲ್ಲಿ ನಡೆದಿರುವ ಈ ಘಟನೆ ಕೇವಲ ಸಾಮಾನ್ಯ ಸಂಗತಿಯಲ್ಲ, ಇದು ಈಶ್ವರನ ಲೀಲೆ ಎಂದು ಭಕ್ತರು ಭಾವಿಸುತ್ತಿದ್ದಾರೆ.
Mahanandi Temple Snake Video – ಮಹಾನಂದಿ ಶಿವನ ವಿಗ್ರಹದ ಮೇಲೆ ನಾಗರಹಾವು
ಮಹಾನಂದಿ ದೇವಾಲಯದ ಸಮೀಪದಲ್ಲಿರುವ ‘ಪೆದ್ದ ನಂದಿ ಪಾರ್ಕ್’ನಲ್ಲಿ ಶಿವನ ಬೃಹತ್ ವಿಗ್ರಹವಿದೆ. ಈ ವಿಗ್ರಹದ ಮೇಲೆ ಇದ್ದಕ್ಕಿದ್ದಂತೆ ದೊಡ್ಡ ನಾಗರಹಾವೊಂದು ಕಾಣಿಸಿಕೊಂಡಿದೆ. ಶಿವನ ಕೊರಳಿನಲ್ಲಿ ಹಾರವಾಗಿ ಸುತ್ತಿಕೊಂಡಂತೆ ಭಾಸವಾಗುತ್ತಿದ್ದ ಆ ಹಾವು, ನಂತರ ಶಿವನ ಜಟೆಯ ಮೇಲೆ ಏರಿ ಕುಳಿತುಕೊಂಡಿದೆ. ಅಷ್ಟೇ ಅಲ್ಲದೆ, ಶಿವನ ತಲೆಯ ಮೇಲೆ ಬಹಳ ಸಮಯದವರೆಗೆ ಹೆಡೆ ಬಿಚ್ಚಿ ನಿಂತಿದೆ.
ದೇವತಾ ಸರ್ಪ ಎಂದು ಕೈಮುಗಿದ ಭಕ್ತರು
ಈ ದೃಶ್ಯವನ್ನು ನೋಡಿದ ತಕ್ಷಣ ಸುತ್ತಮುತ್ತಲಿನ ಭಕ್ತರು ಆನಂದ ಪರವಶರಾಗಿದ್ದಾರೆ. ಇದು ಸಾಕ್ಷಾತ್ ಶಿವನ ಪವಾಡ (Mahanandi Temple Snake Video) ಎಂದು ಭಾವಿಸಿ, ಸ್ಥಳದಲ್ಲಿದ್ದವರು ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದ್ದಾರೆ. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ (Viral Video Link Here) ಹಂಚಿಕೊಂಡಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಈ ‘ಸ್ನೇಕ್ ವಿಡಿಯೋ’ ಧೂಳೆಬ್ಬಿಸುತ್ತಿದೆ.
ಚಾಕಚಕ್ಯತೆಯಿಂದ ಹಾವನ್ನು ರಕ್ಷಿಸಿದ ಸ್ನೇಕರ್ ಕ್ಯಾಚರ್
ಶಿವನ ವಿಗ್ರಹದ ಮೇಲಿದ್ದ ಹಾವನ್ನು ನೋಡಲು ಜನಜಂಗುಳಿ ಹೆಚ್ಚಾದ ಹಿನ್ನೆಲೆಯಲ್ಲಿ, ತಕ್ಷಣವೇ ಉರಗ ರಕ್ಷಕರಿಗೆ (Snake Catcher) ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಸ್ನೇಕರ್ ಕ್ಯಾಚರ್, ಅತ್ಯಂತ ಚಾಕಚಕ್ಯತೆಯಿಂದ ನಾಗರಹಾವನ್ನು ಯಾವುದೇ ಗಾಯವಾಗದಂತೆ ಹಿಡಿದಿದ್ದಾರೆ. ಬಳಿಕ ಆ ಹಾವನ್ನು ಯಾರಿಗೂ ತೊಂದರೆಯಾಗದಂತೆ (Mahanandi Temple Snake Video) ಹತ್ತಿರದ ದಟ್ಟ ಅರಣ್ಯಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಟ್ಟಿದ್ದಾರೆ. ಇದರಿಂದಾಗಿ ಭಕ್ತರು ಮತ್ತು ದೇವಾಲಯದ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟಿದೆ. Read this also : ಮೊಬೈಲ್ ಬಳಸುತ್ತಾ ನಾಗರಹಾವು ಹಿಡಿಯಲು ಹೋದ ಯುವಕನಿಗೆ ಕಚ್ಚಿದ ಹಾವು, ವೈರಲ್ ಆದ ವಿಡಿಯೋ…!

ಧಾರ್ಮಿಕ ಮತ್ತು ವೈಜ್ಞಾನಿಕ ಹಿನ್ನೆಲೆ
ನಮ್ಮ ಸನಾತನ ಧರ್ಮದಲ್ಲಿ ಹಾವುಗಳಿಗೆ ವಿಶೇಷ ಸ್ಥಾನವಿದೆ. ಹಾವುಗಳನ್ನು ಸುಬ್ರಹ್ಮಣ್ಯ ಸ್ವಾಮಿಯ ಸ್ವರೂಪವೆಂದು ಭಕ್ತಿಯಿಂದ ಪೂಜಿಸಲಾಗುತ್ತದೆ. ಹಿರಿಯರು ಮತ್ತು ಜ್ಯೋತಿಷ್ಯ ಪಂಡಿತರ ಪ್ರಕಾರ, (Mahanandi Temple Snake Video) ನಾಗರಹಾವುಗಳಿಗೆ ಯಾವುದೇ ಕಾರಣಕ್ಕೂ ಹಾನಿ ಮಾಡಬಾರದು. ತಿಳಿಯದೆಯೋ ಅಥವಾ ಬೇಕೆಂತಲೋ ನಾಗರಹಾವುಗಳನ್ನು ಕೊಂದರೆ ಅಥವಾ ಅವುಗಳಿಗೆ ತೊಂದರೆ ಕೊಟ್ಟರೆ ‘ಕಾಲಸರ್ಪ ದೋಷ’ ಅಥವಾ ‘ನಾಗ ದೋಷ’ ಸುತ್ತಿಕೊಳ್ಳುತ್ತದೆ ಎಂಬ ಬಲವಾದ ನಂಬಿಕೆ ಇದೆ.
ನಾವೇನು ಮಾಡಬೇಕು? ಒಂದು ವೇಳೆ ನಿಮ್ಮ ಮನೆ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಂಡರೆ, ಅವುಗಳ ಮೇಲೆ ಹಲ್ಲೆ ಮಾಡಲು ಅಥವಾ ಕೊಲ್ಲಲು ಹೋಗಬೇಡಿ. ತಕ್ಷಣವೇ ಅರಣ್ಯ ಇಲಾಖೆಗೆ ಅಥವಾ ವೃತ್ತಿಪರ ಉರಗ ರಕ್ಷಕರಿಗೆ ಮಾಹಿತಿ ನೀಡಿ. ಇದು ಪ್ರಕೃತಿಯ ಸಮತೋಲನಕ್ಕೂ ಒಳ್ಳೆಯದು, ನಿಮಗೂ ಸುರಕ್ಷಿತ.
