Viral Video – ಪಂಜಾಬ್ ನ ಲುಧಿಯಾನದಲ್ಲಿ ನಡೆದ ಭೀಕರ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜಲಂಧರ್ ಬೈಪಾಸ್ ಬಳಿ ಚಲಿಸುತ್ತಿದ್ದ ಆಟೋದಲ್ಲಿ ಮೂವರು ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ದರೋಡೆ ಮಾಡಲು ಯತ್ನಿಸಿದ್ದಾರೆ. ಆದರೆ, ಆ ಮಹಿಳೆಯ ಸಾಹಸ ಮತ್ತು ಸಮಯೋಚಿತ ವರ್ತನೆಯಿಂದ ಆಕೆ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video – ಘಟನೆಗೆ ಕಾರಣವೇನು?
ಕೆಲವೊಂದು ಸುದ್ದಿ ಮೂಲಗಳ ಪ್ರಕಾರ ಮೀನಾ ಕುಮಾರ್ ಎಂಬ ಮಹಿಳೆ, ಜಲಂಧರ್ ಬೈಪಾಸ್‌ನಿಂದ ಫಿಲ್ಲೌರ್‌ಗೆ ಬಸ್ ಹಿಡಿಯಲು ಆಟೋ ಹತ್ತಿದ್ದಾರೆ. ಆಟೋದಲ್ಲಿ ಈಗಾಗಲೇ ಚಾಲಕನ ಹೊರತಾಗಿ ಇಬ್ಬರು ಪ್ರಯಾಣಿಕರು ಇದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಮೀನಾಗೆ ಆ ಮೂವರು ಕಳ್ಳರು ಎಂಬುದು ಅರ್ಥವಾಗಿದೆ. ಆಟೋ ತನ್ನ ಗಮ್ಯಸ್ಥಾನ ತಲುಪುವ ಮೊದಲು, ಹಿಂದಿನ ಸೀಟ್‌ನಲ್ಲಿದ್ದ ಒಬ್ಬ ಕಳ್ಳ, ಆಟೋ ನಿಧಾನಗೊಳಿಸುವಂತೆ ಚಾಲಕನಿಗೆ ಹೇಳಿದ್ದಾನೆ. ಬಳಿಕ, ಇಬ್ಬರು ಕಳ್ಳರು ಸೇರಿ ಮೀನಾಳ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ವರದಿಗಳು ಹೇಳಿವೆ. Read this also : ಆಸ್ತಿ ಆಸೆಗೆ ಬಿದ್ದ ಸೊಸೆ ಮಾವನಿಗೆ ಮಾಡಿದ್ದೇನು ಗೊತ್ತಾ? ವೈರಲ್ ಆದ ವಿಡಿಯೋ…!
Viral Video – ಮೀನಾಳ ಕೈಗಳನ್ನು ಕಟ್ಟಿ, ಚಾಕು ತೋರಿಸಿ ಬೆದರಿಕೆ!
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಕಳ್ಳರು ಮೀನಾಳ ಕೈಗಳನ್ನು ಸ್ಕಾರ್ಫ್‌ನಿಂದ ಕಟ್ಟಿ, ಚೂಪಾದ ಆಯುಧಗಳಿಂದ ಬೆದರಿಸಿದ್ದಾರೆ. ಆದರೆ, ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಮೀನಾ ಕುಮಾರ್ ಎದೆಗುಂದಿಲ್ಲ. ಆಕೆ ಜೋರಾಗಿ ಕೂಗಲು ಆರಂಭಿಸಿ, ಆಟೋದ ಹೊರಗೆ ನೇತಾಡಿದ್ದಾಳೆ. ಅರ್ಧ ಕಿಲೋಮೀಟರ್ ದೂರದವರೆಗೂ ಆಕೆ ಹೀಗೆ ನೇತಾಡಿದ್ದಾಳೆ. ಇದನ್ನು ನೋಡಿದ ಒಬ್ಬ ವ್ಯಕ್ತಿ ಕೂಡಲೇ ಆಟೋವನ್ನು ತಡೆದು, ಮೂವರು ಕಳ್ಳರನ್ನು ಹಿಡಿದಿದ್ದಾನೆ. ಆ ಕಳ್ಳರಲ್ಲಿ ಒಬ್ಬ ಓಡಿ ಹೋಗಿದ್ದಾನೆ, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಮೂರನೇ ಆರೋಪಿಯ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral Video – ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶ
ಈ ಘಟನೆಯ ನಂತರ, ಸೋಷಿಯಲ್ ಮೀಡಿಯಾದಲ್ಲಿ ಜನ ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. X (ಹಿಂದಿನ ಟ್ವಿಟರ್) ನಲ್ಲಿ ಒಬ್ಬ ಬಳಕೆದಾರ “ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೆಟ್ಟ ಸ್ಥಿತಿಯಲ್ಲಿದೆ. ಲೂಟಿ ಮತ್ತು ಸರಪಳಿ ಕಳ್ಳತನ ಸಾಮಾನ್ಯವಾಗಿಬಿಟ್ಟಿದೆ. ಎಷ್ಟೋ ಹೆಂಗಸರು ಆಭರಣ ಧರಿಸುವುದನ್ನೇ ನಿಲ್ಲಿಸಿದ್ದಾರೆ. ಆಪ್ ಸರ್ಕಾರದಿಂದ ದೊಡ್ಡ ನಿರೀಕ್ಷೆಯಿತ್ತು, ಆದರೆ 400-500 ರೂಪಾಯಿ ವಿದ್ಯುತ್ ಬಿಲ್ ಮನ್ನಾಕ್ಕಾಗಿ ಪಂಜಾಬ್ ಹಾಳಾಗಲು ಬಿಟ್ಟರು” ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, “ಮಹಿಳೆ ಹಾಗೂ ಆಕೆಯ ಸಹಾಯಕ್ಕೆ ಬಂದವರಿಗೆ ದೊಡ್ಡ ಶಹಬ್ಬಾಸ್!” ಎಂದು ಬರೆದಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಈ ಮೂವರ ವಿರುದ್ಧ FIR ದಾಖಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
