HomeStateLove Marriage : ಗುಡಿಬಂಡೆಯಲ್ಲಿ ಪೋಷಕರ ವಿರೋಧದ ನಡುವೆ ನಡೆದ ಅಂತರ್ಜಾತಿ ವಿವಾಹ....!

Love Marriage : ಗುಡಿಬಂಡೆಯಲ್ಲಿ ಪೋಷಕರ ವಿರೋಧದ ನಡುವೆ ನಡೆದ ಅಂತರ್ಜಾತಿ ವಿವಾಹ….!

Love Marriage – ಯುವತಿಯ ಪೋಷಕರ ವಿರೋಧದ ನಡುವೆ ಸೂಕ್ತ ಪೊಲೀಸ್ ಬಂದೋಬಸ್ತ್ ನೊಂದಿಗೆ ಪ್ರೇಮಿಗಳ ಅಂತರ್ಜಾತಿ ವಿವಾಹ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗಂಧಂನಾಗೇನಹಳ್ಳಿ ಗ್ರಾಮದ ಯುವಕ ಮುನಿಅಂಜಿನೇಯ್ಯ ಮತ್ತು ಗೌರಿಬಿದನೂರು ತಾಲೂಕಿನ ಹಳೇ ಉಪ್ಪಾರಹಳ್ಳಿ ಗ್ರಾಮದ ದೀವ್ಯಶ್ರೀ ಪರಸ್ಪರ ಒಂದು ವರ್ಷಗಳಿಂದ ಪ್ರತಿಸಿಕೊಳ್ಳುತ್ತಿದ್ದು, ಇವರ ವಿವಾಹಕ್ಕೆ ಯುವತಿಯ ಪೋಷಕರ ಅಡ್ಡಿ ಇದ್ದ ಕಾರಣ ಪ್ರೇಮಿಗಳಿಬ್ಬರು ಮನೆಯನ್ನು ಬಿಟ್ಟು ಹೋಗಿ ವಿವಾಹವಾಗಿದ್ದರು.

Young couple registers inter-caste love marriage at Gudibande sub-registrar office under police protection and public support

Love Marriage – ಪ್ರೇಮಿಗಳ ಮದುವೆ ಮಾಡಿಸಿದ ದಲಿತ ಮುಖಂಡರು

ಪ್ರೇಮಿಗಳಿಬ್ಬರ ವಿವಾಹದ ನಂತರ ಇಬ್ಬರು ಗುಡಿಬಂಡೆ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಕೊಳ್ಳಲು ಆಗಮಿಸುತ್ತಿದ್ದಂತೆ ತಾಲೂಕು ಕಚೇರಿ ಆವರಣದಲ್ಲಿದ್ದ ಯುವತಿಯ ಸಂಬಂಧಿಕರು ಯುವತಿಯ ಕೈ ಹಿಡಿದುಕೊಂಡು ಕಾರಿನಲ್ಲಿ ಕರೆದು ಕೊಂಡು ಹೋಗುತ್ತಿದ್ದ ಸಮಯದಲ್ಲಿ ತಾಲೂಕು ಕಚೇರಿ ಆವರಣದಲ್ಲಿದ್ದ ಸಾರ್ವಜನಿಕರು ತಡೆದು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಲಾಯಿತು.

Read this also : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!

Love Marriage – ಗುಡಿಬಂಡೆ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಯುವತಿ ಮತ್ತು ಯವಕನ್ನು ಠಾಣೆಗೆ ಕರೆದುಕೊಂಡು ಬಂದು ರಕ್ಷಣೆ ನೀಡಿದರು. ನಂತರ ತಾಲೂಕು ದಲಿತ ಹಾಗೂ ವಾಲ್ಮೀಕಿ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನೊಂದಿಗೆ ಉಪನೊಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಿ ವಿವಾಹ ನೊಂದಣಿ ಮಾಡಿಸಿದರು. ನಂತರ ತಹಶೀಲ್ದಾರ್ ಸಿಗ್ಬತ್ ವುಲ್ಲಾ ಮದುವೆ ವಿವಾಹ ಪತ್ರವನ್ನು ನೀಡಿ ಪ್ರೇಮಿಗಳಿಗೆ ಉತ್ತಮವಾಗಿ ಬದುಕಿ ಬಾಳುವಂತೆ ಕಿವಿ ಮಾತು ಹೇಳಿದರು.

Young couple registers inter-caste love marriage at Gudibande sub-registrar office under police protection and public support

Love Marriage – ಗೌರಿಬಿದನೂರಿನಲ್ಲಿ ದೂರು ದಾಖಲಾಗಿತ್ತು

ಇನ್ನು ಈ ಬಗ್ಗೆ ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರಿಗೆ ಯುವತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದು, ಅ ದೂರನ್ನು ಮುಕ್ತಾಯ ಗೊಳಿಸಲು ಗೌರಿಬಿದನೂರಿಗೆ ಹೋಗಲು ಭಯ ಆಗುತ್ತದೆಂದು ಪ್ರೇಮಿಗಳು ತಿಳಿಸಿದ ಹಿನ್ನೆಲೆ ಗೌರಿಬಿದನೂರು ಠಾಣೆಯ ಸಿಬ್ಬಂದಿ ಗುಡಿಬಂಡೆ ಪೊಲೀಸ್ ಠಾಣೆಗೆ ಆಗಮಿಸಿ ಯುವತಿಯ ಅಭಿಪ್ರಾಯ ಸಂಗ್ರಹಿಸಿ ದೂರು ಮುಕ್ತಾಯ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular