Love Case : ಪ್ರೀತಿ ಯಾವಾಗ ಯಾರಿಗೆ ಹೇಗೆ ಹುಟ್ಟುತ್ತದೆ ಎಂಬುದು ಹೇಳೋಕೆ ಆಗೊಲ್ಲ. ಆದರೆ ಬಹುತೇಕ ಪ್ರೇಮ ಕಥೆಗಳು ದುರಂತ ಅಂತ್ಯ ಕಾಣುತ್ತವೆ. (Love Case) ಪ್ರೀತಿಸಿ ಜೀವನ ಕಂಡುಕೊಂಡವರಿಗಿಂತ ಪ್ರೀತಿಸಿ ಮೋಸ ಹೋದವರೇ ಜಾಸ್ತಿ ಎಂದು ಹೇಳಬಹುದಾಗಿದೆ. ಇದೀಗ ಪೊಲೀಸ್ ಪೇದೆಯೋರ್ವ ಯುವತಿಯನ್ನು ಪ್ರೀತಿಸಿ ಮೋಸ ಮಾಡಿದ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ (Love Case)ನಡೆದಿದೆ. ಪೊಲೀಸ್ ಪೇದೆ ತಿಮ್ಮಣ್ಣ ರಾಮಪ್ಪ ಭೂಸರೆಡ್ಡಿ (Love Case) ಎಂಬಾತನಿಂದ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ತಿಮ್ಮಣ್ಣ ರಾಮಪ್ಪ ಭೂಸರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಪೇದೆಯಾಗಿದ್ದಾರೆ. ಪೊಲೀಸ್ ಪೇದೆ ವಿದ್ಯಾರ್ಥಿನಿಗೆ ಮೋಸ ಮಾಡಿದ್ದಾರೆ (Love Case)ಎಂಬ ಆರೋಪ ಕೇಳಿಬಂದಿದೆ. ಪೇದೆ ವಂಚಿಸಿದ್ದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ (Love Case)ಯತ್ನಿಸಿದ್ದಾಳೆ ಎನ್ನಲಾಗಿದೆ. ಯುವತಿ ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿಯುತ್ತಿದ್ದಂತೆ ಅತ್ತ (Love Case)ಪೊಲೀಸ್ ಪೇದೆ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೊಲೀಸ್ ಪೇದೆ ಹಾಗೂ ಯುವತಿ ಇಬ್ಬರನ್ನೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ (Love Case) ಚಿಕ್ಕಬಳ್ಳಾಪುರ ಎಸ್.ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪೇದೆ ತಿಮ್ಮಣ್ಣ (Love Case)ರಾಮಪ್ಪ ಭೂಸರೆಡ್ಡಿ ಹಾಗೂ ಗುಡಿಬಂಡೆ ತಾಲೂಕಿನ ಯುವತಿ ಪ್ರೀತಿಸಿಕೊಳ್ಳುತ್ತಿದ್ದರಂತೆ. ಇಬ್ಬರೂ ಚಿಕ್ಕಬಳ್ಳಾಪುರ ನಗರದ ಮುನಿಸಿಪಲ್ ಕಾಲೇಜಿನಲ್ಲಿ ಕರೆಸ್ಪಾಂಡೆನ್ಸ್ ಮೂಲಕ ಪದವಿ ಓದುತ್ತಿದ್ದರು (Love Case)ಎನ್ನಲಾಗಿದೆ. ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮೂಲಕ ಇಬ್ಬರ ನಡುವೆ ಸ್ನೇಹ ಏರ್ಪಟ್ಟಿದ್ದು, ಪ್ರೀತಿಗೆ ತಿರುಗಿದೆ. ಬಳಿಕ ದೈಹಿಕ ಸಂಪರ್ಕ ಸಹ ನಡೆದಿದೆ ಎನ್ನಲಾಗಿದೆ. (Love Case)ಬಳಿಕ ಸಂತ್ರಸ್ತೆಯ ಜಾತಿ ಬೇರೆ ಎಂದು ಪೊಲೀಸ್ ಪೇದೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನಂತೆ. ಇದರಿಂದ ಮನನೊಂದ ಸಂತ್ರಸ್ತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. (Love Case) ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಪೇದೆ ಸಹ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಸದ್ಯ ಇಬ್ಬರೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ (Love Case)ಎಂದು ತಿಳಿದುಬಂದಿದೆ.