Local Problems – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿನಗರದ ಪದವಿ ಪೂರ್ವ ಕಾಲೇಜಿನ ಬಳಿ ವಾಸಿಸುವ ನಿವಾಸಿಗಳು ಚರಂಡಿ, ರಸ್ತೆ ಸಮಸ್ಯೆ ಸೇರಿದಂತೆ (Local Problems) ಮೂಲಭೂತ ಸೌಕರ್ಯಗಳನ್ನು ಒಗಿಸಿಕೊಡುವಂತೆ ಒತ್ತಾಯಿಸಿ ಸ್ಥಳೀಯ ಪಟ್ಟಣ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳೀಯ ನಿವಾಸಿ ಮುನಿರಾಜು ಮಾತನಾಡಿ, (Local Problems) ಸುಮಾರು ವರ್ಷಗಳಿಂದ ನಾವು ಮೂಲಭೂತ ಸಮಸ್ಯೆಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ಚರಂಡಿ, ರಸ್ತೆಯಿಲ್ಲದ ಕಾರಣ ಪರದಾಡುವಂತಾಗಿದೆ. ಅದರಲ್ಲೂ ಶೌಚದ ಸಮಸ್ಯೆ ತುಂಬಾನೆ ಇದೆ. ಈ ಭಾಗದಲ್ಲಿ ಬಂಡೆ ಇರುವ ಕಾರಣ ಶೌಚಾಲಯಕ್ಕೆ ಗುಂಡಿ ತೋಡುವುದು ಸಹ (Local Problems) ಕಷ್ಟಕರವಾಗಿದೆ. ಈ ಹಿಂದೆ ಪಟ್ಟಣ ಪಂಚಾಯತಿಯಿಂದ ಒಂದು ಶೌಚ ಗುಂಡಿಯನ್ನು ತೋಡಿಸಿಕೊಟ್ಟಿದ್ದರು. ಇದೀಗ ಅದೇ ಜಾಗದಲ್ಲಿ ಮನೆ ನಿರ್ಮಾಣ ಮಾಡಲು (Local Problems) ಮುಂದಾಗಿದ್ದಾರೆ. ಇದರಿಂದ ನಮಗೆ ಮತಷ್ಟು ಸಮಸ್ಯೆಯಾಗಲಿದೆ. ಆದ್ದರಿಂದ ಕೂಡಲೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕೆಂದು (Local Problems) ಒತ್ತಾಯಿಸಿದರು.
ಸ್ಥಳಕ್ಕೆ ಪ.ಪಂ ಮುಖ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪ್ರತಿಭಟನಾಕಾರರ ಮನವಿಯನ್ನು (Local Problems) ಆಲಿಸಿದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು. ಮನೆ ನಿರ್ಮಾಣ ಮಾಡುತ್ತಿರುವವರಿಗೆ ನೊಟೀಸ್ ನೀಡಿ, ಅವರಿಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಂತೆ (Local Problems) ತಿಳಿಸುತ್ತೇನೆ. ಜೊತೆಗೆ ಈ ಭಾಗದಲ್ಲಿ ಕೂಡಲೇ ಸ್ವಚ್ಚತೆ ಗೊಳಿಸುವಂತೆ ಸಿಬ್ಬಂದಿಗೆ ಸೂಚನೆ (Local Problems) ನೀಡುತ್ತೇನೆ ಎಂದು ಭರವಸೆ ನೀಡಿದರು. ಈ ಸಮಯದಲ್ಲಿ ಪ.ಪಂ ಸಿಬ್ಬಂದಿಯಾದ ಬಾಲಪ್ಪ, ಶಿವಣ್ಣ ಸೇರಿದಂತೆ ಬಾಪೂಜಿ ನಗರ (Local Problems) ನಿವಾಸಿಗಳು ಹಾಜರಿದ್ದರು.