Thursday, February 5, 2026
HomeStateLocal News : ಸಮಗ್ರ ಪರಿಸರ ಮತ್ತು ಕೆರೆಯ ಸಂರಕ್ಷಣೆ ಬಗ್ಗೆ ಜಾಗೃತಿ ಅಗತ್ಯ :...

Local News : ಸಮಗ್ರ ಪರಿಸರ ಮತ್ತು ಕೆರೆಯ ಸಂರಕ್ಷಣೆ ಬಗ್ಗೆ ಜಾಗೃತಿ ಅಗತ್ಯ : ವಿನಾಯಕ ಪೈ

Local News – ಭೂಮಿಯ ಮೇಲಿನ ಜೀವಿಗಳು ಪರಿಸರದ ಮೇಲೆ ಅವಲಂಬಿತವಾಗಿದ್ದು, ಪ್ರತಿಯೊಬ್ಬರಿಗೂ ಪರಿಸರ ಸೇರಿದಂತೆ ಕೆರೆಗಳ ಸಂರಕ್ಷಣೆಯ ಕುರಿತು ಜಾಗೃತಿ ಅತ್ಯಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿನಾಯಕ ಪೈ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೋರೇನಹಳ್ಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದ ಅಂಗವಾಗಿ ಕೆರೆಯ ಸುತ್ತಲೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Tree plantation drive near lake under Our Village Our Lake program in Korenahalli, Gudibande, Chikkaballapur - Local News

Local News – ನಮ್ಮ ಊರು, ನಮ್ಮ ಕೆರೆ: ಒಂದು ಮಹತ್ವದ ಹೆಜ್ಜೆ

ಜನರಿಗೆ ಪರಿಸರ ಸಂರಕ್ಷಣೆ ಹಾಗೂ ಕೆರೆಗಳ ಮಹತ್ವ ತಿಳಿಸುವ ಉದ್ದೇಶದಿಂದ ಯೋಜನೆಯ ವತಿಯಿಂದ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕೆರೆಗಳು ಊರುಗಳಿಗೆ ನೀರಿನ ಮೂಲವಾಗಿದೆ. ಕೆರೆಯನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳಬೇಕು ಜೊತೆಗೆ ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಬೇಕು. ಕೆರೆಯ ಅಭಿವೃದ್ದಿಯಿಂದ ಅನೇಕ ಅನುಕೂಲಗಳಿವೆ. ಇದರಿಂದ ನಾವು ನೀರಿನ ಸಂಪನ್ಮೂಲವನ್ನು ಸಂರಕ್ಷಣೆ ಮಾಡಬಹುದು ಎಂದರು.

Read this also : Japan ನಲ್ಲಿ ಭಾರತೀಯ ರೆಸ್ಟೋರೆಂಟ್‌, ಬಾಳೆ ಎಲೆ ಮೇಲೆ ಊಟ: ದಂಪತಿಗಳ ಪ್ರೀತಿ ಕಂಡರೆ ಖಂಡಿತ ಅಚ್ಚರಿಪಡುತ್ತೀರಿ…!

Local News – ಕೆರೆ ಅಭಿವೃದ್ಧಿಯಿಂದ ರೈತರಿಗೆ ಹೊಸ ಆಶಾಕಿರಣ

ಬಳಿಕ ಕೋರೆನಹಳ್ಳಿ ಕೆರೆ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಶ್ರೀನಿವಾಸರೆಡ್ಡಿ ಮಾತನಾಡಿ, ನಮ್ಮ ಊರಿನಲ್ಲಿ ಧರ್ಮಸ್ಥಳ ಯೋಜನೆಯ ಸಹಯೋಗದೊಂದಿಗೆ ಕೆರೆಯನ್ನು ಹೂಳೆತ್ತುವ ಮತ್ತು ಏರಿ ನಿರ್ಮಿಸುವ ಕಾರ್ಯ ನಡೆದಿರುವುದನ್ನು ಶ್ಲಾಘಿಸಿದರು. ಈ ಕೆಲಸದಿಂದಾಗಿ ಗ್ರಾಮದ ರೈತರಿಗೆ ಉತ್ತಮ ಗುಣಮಟ್ಟದ ಮಣ್ಣು ದೊರೆತಿದೆ ಮತ್ತು ಅಂತರ್ಜಲ ಮಟ್ಟವೂ ಸುಧಾರಿಸಿದೆ. ಇಂತಹ ಉಪಯುಕ್ತ ಕಾರ್ಯಗಳಿಂದ ಇಡೀ ಗ್ರಾಮಕ್ಕೆ ಸಂತೋಷವಾಗಿದೆ ಎಂದರು.

Tree plantation drive near lake under Our Village Our Lake program in Korenahalli, Gudibande, Chikkaballapur - Local News

ಈ ವೇಳೆ ಕೋರೆನಹಳ್ಳಿ ಕೆರೆ ಅಭಿವೃದ್ದಿ ಸಮಿತಿಯ ಸದಸ್ಯರಾದ ನಂದೀಶ್, ಶಂಕರ್‍, ಅಂಗನವಾಡಿ ಕಾರ್ಯಕರ್ತೆ ಗೀತಾ ಸೇರಿದಂತೆ ಯೋಜನೆಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಊರಿನ ಗ್ರಾಮಸ್ಥರು ಹಾಜರಿದ್ದರು.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular