ಪಂಚಗಿರಿ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಕೆ ವಿ ನವೀನ್ ಕಿರಣ್ ಅವರ 46ನೇ ಹುಟ್ಟುಹಬ್ಬದ ಪ್ರಯುಕ್ತ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಪರಿಸರ ವೇದಿಕೆ ಮತ್ತು ಗುಡಿಬಂಡೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ (Local News) ಸೀರೆಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಸರ ವೇದಿಕೆಯ ಅಧ್ಯಕ್ಷರಾದ ಡಾಕ್ಟರ್ ಗುಂಪು ಮರದ ಆನಂದ ಮಾತನಾಡಿ, ಕೆ ವಿ ನವೀನ್ ಕಿರಣ್ ರವರು ತಮ್ಮ ಜೀವನವನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮುಡುಪಾಗಿಟ್ಟಿದ್ದಾರೆ. ಬಡವರು, ದೀನ ದಲಿತರು, ಬಡ ವಿದ್ಯಾರ್ಥಿಗಳು ಕಂಡರೆ ಅವರಿಗೆ ತುಂಬಾ ಪ್ರಾಣ ಅವರಿಗೆ ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡುವುದು ಅವರ ದೊಡ್ಡ ಗುಣವಾಗಿದೆ. ಅವರ ನಡೆ-ನುಡಿ ಇತರರಿಗೆ ಮಾದರಿಯಾಗಿದೆ ಅವರ ಗುಣಗಳನ್ನು ನಾವು ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ನರಸಿಂಹಮೂರ್ತಿ ರವರು ಉದ್ಘಾಟನೆ ಮಾಡಿ ಹಾಗೂ ಮಾತನಾಡಿ, ಕೆ ವಿ ನವೀನ್ ಕಿರಣ್ ರವರು ಜಿಲ್ಲೆಯಲ್ಲಿ ಜನಾನುರಾಗಿ, ಅನ್ನದಾನಿ, ರಕ್ತದಾನಿ, ವಿದ್ಯಾದಾನಿ ಗಳಾಗಿ ಜಿಲ್ಲಾಧ್ಯಂತ ಹಲವಾರು ಸೇವಾ ಕಾರ್ಯಗಳನ್ನು ಮಾಡಿ ಹೆಸರು ಮಾಡಿದ್ದಾರೆ, ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಿದ್ದಾರೆ ಅಂಥವರ ಅಂಥವರ ಹುಟ್ಟುಹಬ್ಬವನ್ನು ಏಳು ದಿವಸಗಳ ಕಾಲ ಆಚರಿಸುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಮಂಜುನಾಥ್, ಪ.ಪಂ ಮಾಜಿ ಉಪಾಧ್ಯಕ್ಷ ರಾಜಣ್ಣ, ಪ.ಪಂ ರಾಜೇಶ್, ಪೋಸ್ಟ್ ಬಾಲಪ್ಪ, ಇಂದ್ರ ಕುಮಾರ್ ಸಿಂಗ್, ಬೇಬಿ ನಿಶ್ಚಿತ, ಭಾರತಮ್ಮ ಹಾಗೂ ಸ್ವಚ್ಛತಾ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.