Local News – ಪದೇ ಪದೇ ಸಭೆಗೆ ಗೈರುಹಾಜರಾಗಿರುವ, ವರದಿ ನೀಡದೆ ನಿರ್ಲಕ್ಷ್ಯ ತೋರುವ ಇಲಾಖೆಗಳ ಅಧಿಕಾರಿಗಳ ವಿರುದ್ದ ಕೆಂಡಾಮಂಡಲರಾದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಭೆಗೆ ಬರಲು ಪುರಸತ್ತಿಲ್ಲದ ಅಧಿಕಾರಿಗಳಿಗೆ ಸಂಬಂಧಿಸಿದ ಇಲಾಖೆಗಳ ಕಚೇರಿಯಲ್ಲಿಯೇ ನಾವೇ ಹೋಗಿ ಸಭೆ ನಡೆಸುವಂತೆ ತಹಸೀಲ್ದಾರ್ ರವರಿಗೆ ಸೂಚನೆ ನೀಡಿದ ಘಟನೆ ಬುಧುವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಬಾಗೇಪಲ್ಲಿ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.

ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಅನುಪಾತ ವರಧಿ ಸಭೆಗೆ ಕೊಡಬೇಕಾ ಇಲ್ಲವಾ ಎನ್ನುವುದರ ಬಗ್ಗೆ ಡಿ.ಎಸ್ ರವರು ನಿರ್ದೇಶನ ನೀಡಬೇಕು, ಬಹುತೇಕ ಇಲಾಖೆಗಳ ಅಧಿಕಾರಿಗಳು ನೀಡಿಲ್ಲ, ವರಧಿ ಇಲ್ಲದೆ ಸಭೆ ನಡೆಸುವ ಅವಶ್ಯಕತೆ ಇದಿಯೇ, ಯಾವ ಇಲಾಖೆ ವರಧಿ ನೀಡಿಲ್ಲ ಅವರ ವಿರುದ್ದ ಕ್ರಮ ತೆಗೆದುಕೊಂಡಿಲ್ಲ ಏಕೆ, ಅದರ ವಿಚಾರದ ಬಗ್ಗೆ ಚರ್ಚೆ ಮಾಡಿ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ಪಿ.ಮಂಜುನಾಥರೆಡ್ಡಿ ಪ್ರಶ್ನಿಸಿದರು. ಸಭೆಗೆ ಬಹುತೇಕ ಇಲಾಖೆ ಅಧಿಕಾರಿಗಳು ಗೈರುಹಾರಾಗಿದ್ದಾರೆ, ಇಲಾಖೆಗೆ ಸಂಬಂಧಿಸಿದ ಪ್ರಗತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಸಹ ನೀಡದೆ ಅಸಡ್ಡೆ ತೋರುತ್ತಿದ್ದಾರೆ. ಅನುಪಾತ ವರಧಿ ನೀಡಿದರೆ ಮಾತ್ರ ಸಭೆಗೆ ಬನ್ನಿ ಇಲ್ಲವಾದರೇ ಸಭೆಗೆ ಬರಬೇಡಿ. ಪ್ರತಿ ಸಭೆಗೆ ಬರುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಪೋನ್ ಮಾಡಬೇಕು, ಬಲವಂತ ಮಾಡಬೇಕು, ಅಧಿಕಾರಿಗಳಿಗೆ ತುಂಬಾ ಕೆಲಸ ಇರುತ್ತೆ ಎಂದು ಸಭೆಗೆ ಬಾರದ ಅಧಿಕಾರಿಗಳ ವಿರುದ್ದ ಗರಂ ಆದ ಶಾಸಕರು ಸಭೆಗೆ ಗೈರು ಆಗುವ ಇಲಾಖೆ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಸಭೆಗೆ ಕರೆಯಬೇಡಿ, ನಾವೇ ಹೋಗಿ ಅವರ ಇಲಾಖೆಯ ಕಚೇರಿಯಲ್ಲಿಯೇ ಸಭೆ ನಡೆಸೋಣ ಎಂದರು.

ಕೃಷಿ ಇಲಾಖೆವತಿಯಿಂದ ಎಷ್ಟು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ ಎಂಬ ಶಾಸಕರ ಪ್ರಶ್ನೆಗೆ ಕೃಷಿ ಇಲಾಖೆ ಅಧಿಕಾರಿ ಈ ವರ್ಷದಲ್ಲಿ 2 ಚೆಕ್ ಡ್ಯಾಂಗಳು ಮಾತ್ರ ಬಂದಿವೆ ಎಂದಾಗ 2024ರಲ್ಲಿ ಎಷ್ಟು ಚೆಕ್ ಡ್ಯಾಂಗಳು ಬಂದಿವೆ ಎಂಬ ಶಾಸಕರ ಪ್ರಶ್ನೆಗೆ ಕೃಷಿ ಇಲಾಖೆ ಅಧಿಕಾರಿ ಮಾಹಿತಿ ಇಲ್ಲ ಎಂದರು. ತಾಲೂಕಿನ ಚೆನ್ನರಾಯನಪಲ್ಲಿ ಗ್ರಾಮದ ಬಳಿ ಒಂದು ಚೆಕ್ ಡ್ಯಾಂ ಕಾಮಗಾರಿ ಪ್ರಾರಂಭಿಸಿದ ಕೇವಲ 15 ದಿನಗಳಲ್ಲಿ ಕಾಮಗಾರಿ ಪೋಟೋ ತೆಗೆದುಕೊಂಡು ಬಿಲ್ ಮಾಡಲಾಗಿದೆ. ಚೆಕ್ ಡ್ಯಾಂ ಕೇವಲ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವೇ ಎಂಬ ಶಾಸಕರ ಪ್ರಶ್ನೆಗೆ ಅಧಿಕಾರಿಯೇ ಸಾಧ್ಯವಿಲ್ಲ ಎಂದು ಸಣ್ಣಧ್ವನಿಯಲ್ಲಿ ಹೆಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಚೆಕ್ ಡ್ಯಾಂ ಕಾಮಗಾರಿಕೆಯಲ್ಲಿ ನಿಮ್ಮ ಇಲಾಖೆಯಲ್ಲಿ ನಡೆದಿರುವಷ್ಠು ಅವ್ಯವಹಾರ ಯಾವುದೇ ಇಲಾಖೆಯಲ್ಲಿ ನಡೆದಿಲ್ಲ. ನರೆಗಾ ಸೇರಿದಂತೆ ಬೇರೆ ಇಲಾಖೆ ನಿರ್ಮಾಣ ಮಾಡಿರುವ ಚೆಕ್ ಡ್ಯಾಂ ನಿಮ್ಮ ಇಲಾಖೆಯವರು ಬಿಲ್ ಮಾಡಿಕೊಂಡಿದ್ದಿರಾ. ಇದಕ್ಕೆ ಸಾಕ್ಷಿ ಎಂಬಂತೆ ಗುಡಿಬಂಡೆ ತಾಲೂಕಿನ ಹಂಪಸಂದ್ರದಲ್ಲಿನ ಚೆಕ್ ಡ್ಯಾಂನ ಬಿಲ್‍ನ್ನು ಬಾಗೇಪಲ್ಲಿ ತಾಲೂಕಿನ ಮಲ್ಲಸಂದ್ರದಲ್ಲಿ ಬಿಲ್ ಮಾಡಿಕೊಂಡಿದ್ದೇರೆ ನಿಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ. ನಿಮ್ಮ ಇಲಾಖೆಯ ಅಧಿಕಾರಿಗೆ ಬೇರೆ ಏನು ಕೆಲಸ ಇಲ್ಲವಾ ಕಾಮಗಾರಿ ನಡೆಯುವ ಸ್ಥಳ ಪರಿಶೀಲನೆ ಮಾಡಲ್ಲ, ಕೇವಲ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಹೋಗುತ್ತಿದ್ದಾರೆ, ಬಡ ರೈತರಿಗೆ ಒಂದು ಟಾರ್‍ಪಲ್ ಕೋಡಲು ನೂರಾರು ಕಾನೂನು ಹೇಳುತ್ತಾರೆ ಆದರೆ ಈ ರೀತಿಯಾಗಿ ಬಿಲ್‍ಗಳನ್ನು ಮಾಡಿಕೊಳ್ಳಲು ಕಾನೂನು ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡ ಶಾಸಕರು ಚೆಕ್ ಡ್ಯಾಂ ವಿಚಾರದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಇಒ ರವರಿಗೆ ಸೂಚಿಸಿದರು.
ಸರ್ಕಾರ ಬಿಪಿಎಲ್ ಹೊಂದಿರುವ ಬಡ ರೋಗಿಗಳಿಗೆ ಉಚಿತವಾಗಿ ಅಂಬುಲೇನ್ಸ್ ನಲ್ಲಿ ಸಾಗಿಸುವ ಅವಕಾಶ ಕಲ್ಪಿಸಿದೆ ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರಿನ ಆಸ್ಪ್ರತೆಗೆ 108 ವಾಹನದಲ್ಲಿ ರೋಗಿಗಳನ್ನು ಸಾಗಿಲಸಲು ಬಡರೋಗಿಗಳಿಂದ ಡೀಸಲ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ ಏಕೆ ನೀವು ಬಡವರಿಂದ ಡೀಸಲ್‍ಗೆ ಹಣ ಕೇಳುತ್ತಿದ್ದೀರಿ ಎಂದು ಶಾಸಕರು ಟಿಹೆಚ್‍ಒ ಡಾ.ಸತ್ಯನಾರಾಯಣರೆಡ್ಡಿ ರವರನ್ನು ತರಾಟೆಗೆ ತೆಗೆದುಕೊಂಡರು. ಟಿಹೆಚ್‍ಓ ಪ್ರತಿಕ್ರಿಯಿಸಿ ಅಗತ್ಯ ಅನುದಾನ ಇಲ್ಲದ ಹಿನ್ನಲೆಯಲ್ಲಿ ರೋಗಿಗಳಿಂದ ಡೀಸಲ್ ಗಾಗಿ ಹಣ ಪಡೆಯುತ್ತಿದ್ದೇವೆ. ಪೆಟ್ರೋಲ್ ಬಂಕ್‍ನಲ್ಲಿ ತಾವು 3 ಲಕ್ಷ ಹಣದಷ್ಟು ಡೀಸಲ್ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಿದರೆ ರೋಗಿಗಳಿಂದ ಒಂದು ರೂಪಾಯಿ ಹಣ ತೆಗೆದುಕೊಳ್ಳಲ್ಲ ಅನುದಾನ ಬಂದ ತಕ್ಷಣವೇ ಅವರಿಗೆ ಹಣ ನೀಡುತ್ತೇವೆ. ಇದಕ್ಕೆ ಶಾಸಕರು ನೀವು ಆರೋಗ್ಯ ಇಲಾಖೆವತಿಯಿಂದ ವಾಹನಕ್ಕೆ ಡೀಸಲ್ ಹಾಕಿಸಲು ಆಗುತ್ತಿಲ್ಲ ಎಂಬುದಾಗಿ ಸರ್ಕಾರಕ್ಕೆ ಒಂದು ಪತ್ರವನ್ನು ಬರೆಯಿರಿ ನಾನು ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ಹಲವು ವೈದ್ಯರು ಸಂಜೆ ವೇಳೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗೆ ಬರುವಂತೆ ತಿಳಿಸುತ್ತಿದ್ದಾರೆ. ಖಾಸಗಿ ಆಸ್ಪತ್ರಗೆ ರೋಗಿಗಳನ್ನು ಕಳಹಿಸುವುದಾದರೆ ಸರ್ಕಾರ ಏಕೆ ಆಸ್ಪತ್ರೆಗಳನ್ನು ನಡೆಸಬೇಕು ಎಂಬ ಪ್ರಶ್ನೆಗೆ ಇಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗೆ ಕಳುಹಿಸುವುದಕ್ಕೆ ಕಡಿವಾಣ ಹಾಕುವುದಾಗಿ ತಿಳಿಸಿದರು.

ನಂತರ ಶಾಸಕರು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇಲಾಖಾವಾರು ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಾನಿಷಾ ಎನ್ ಪತ್ರಿ, ತಾ.ಪಂ ಇಒ ರಮೇಶ್ ಕುಮಾರ್, ತಾ.ಪಂ ನಾಮನಿರ್ದೇಶನ ಸದಸ್ಯರಾದ ಪಿ.ಮಂಜುನಾಥರೆಡ್ಡಿ, ರಘುನಾಥರೆಡ್ಡಿ, ರಾಮಕೃಷ್ಣ(ಹೆಗ್ಗಡೆ), ಸರಿತಾ.ಎನ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.