Local News ಮಾನಸಿಕ ಆರೋಗ್ಯ ಎಂಬುದು ಅಭಿವೃದ್ದಿಯನ್ನು ಅವಲಂಭಿಸಿದ್ದು, ಎಲ್ಲರೂ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಕಾಳಜಿ ಹೊಂದವುದರ ಜೊತೆಗೆ ಮಾನಸಿಕ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ನಾಗಭೂಷಣ್ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Local News – ‘ಮಾನಸಿಕ ಖಿನ್ನತೆ’ ಒಂದು ದೊಡ್ಡ ಸಮಸ್ಯೆ
ಮಾನಸಿಕ ಖಿನ್ನತೆ ಎಂಬುದು ಪೆಡಂಬೂತವಿದ್ದಂತೆ. ಇದು ಎಲ್ಲರಲ್ಲೂ ಕಂಡು ಬರುತ್ತದೆ ಅದರಲ್ಲೂ ಇತ್ತೀಚಿಗೆ ಯುವಜನತೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹಲವಾರು ವಿಚಾರಗಳಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಾನಸಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮಾನಸಿಕ ಆರೋಗ್ಯದ ಕುರಿತು ಅರಿವು ಪಡೆದುಕೊಳ್ಳಬೇಕು ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ನಾಗಭೂಷಣ್ ತಿಳಿಸಿದರು.
Local News – ಸಮಾಜದ ಸಹಕಾರ ಅನಿವಾರ್ಯ
ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಮನೋರೋಗ ತಜ್ಞ ಡಾ.ಹೇಮಂತ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಹಲವಾರು ಮಂದಿ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದಾರೆ. ಭಯಂಕರ ಸುದ್ಧಿಗಳು, ಅಪಘಾತಗಳು, ಕುಟುಂಬದಲ್ಲಿನ ಸಾವು ನೋವು ಮುಂತಾದ ಘಟನೆಗಳಿಂದ ಕೆಲ ವ್ಯಕ್ತಿಗಳು ಖಿನ್ನತೆಗೆ ಒಳಗಾಗಿ ಮನೋ ರೋಗಿಗಳಾಗಿ ಬದಲಾಗುತ್ತಾರೆ. ವೈದ್ಯ ಕ್ಷೇತ್ರದಲ್ಲಿ ಇಂತಹ ವ್ಯಾಧಿಗಳಿಗೆ ಅನೇಕ ಬಗೆಯ ಚಿಕಿತ್ಸಾ ವಿಧಾನಗಳಿದ್ದರೂ ಕುಟುಂಬ ಹಾಗೂ ಸಮಾಜ ಇವರ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಇಂತಹವರನ್ನು ತಜ್ಞರ ಬಳಿ ಕರೆ ತಂದು ಚಿಕಿತ್ಸೆ ಕೊಡಿಸುವುದು ಅಗತ್ಯವಾಗಿದೆ ಜೊತೆಗೆ ಹಳ್ಳಿಗಳಲ್ಲಿ ಮಾನಸಿಕ ಅಸ್ವಸ್ಥತೆಯ ಕುರಿತು ಯುವಜನತೆ ಜಾಗೃತಿ ಮೂಡಿಸಬೇಕು ಎಂದರು. Read this also : ಭಾರತದ ಯುವಕರಿಗೆ ಬಂಪರ್ ಆಫರ್! ಉಚಿತ AI ತರಬೇತಿ ನೀಡಲು ಮುಂದಾದ EY ಮತ್ತು ಮೈಕ್ರೋಸಾಫ್ಟ್
Local News – ಜನೌಷಧಿ ಕೇಂದ್ರ ಉದ್ಘಾಟನೆ
ಕಾರ್ಯಕ್ರಮವನ್ನು ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಸವಿತಾ ರುದ್ರಗೌಡ ಚಿಕ್ಕನಗೌಡರ್ ರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಾರ್ವಜನಿಕ ಆಸ್ಪತ್ರೆಯ ಬಳಿ ನೂತನ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಅಕ್ಷಯ್ ಶ್ರೀನಿವಾಸ್, ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್, ಡಾ.ಉಮೇಶ್, ವಕೀಲರಾದ ಎನ್ ನರಸಿಂಹಪ್ಪ, ನರೇಂದ್ರ, ಆಸ್ಪತ್ರೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ನ್ಯಾಯಾಲಯದ ಸಿಬ್ಬಂದಿ ಸುರೇಶ್ ಸೇರಿದಂತೆ ಹಲವರು ಇದ್ದರು.

