Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ – ಗೌರಿಬಿದನೂರು ಮಾರ್ಗದ ಚಿಮಕಲಹಳ್ಳಿ ಬಳಿ KSRTC ಬಸ್ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ್ದಾಗ ವೇಗವಾಗಿ ಅಜಾಗರೂಕತೆಯಿಂದ ಬಂದ ಟಿಪ್ಪರ್ ಬಸ್ ನ ಹಿಂಬದಿಗೆ ಟಿಪ್ಪರ್ ಡಿಕ್ಕಿಹೊಡೆದ ಪರಿಣಾಮ ksrtc ಬಸ್ ನಲ್ಲಿ ಇರುವ ಕೆಲವು ಪ್ರಯಾಣಿಕರಿಗೆ ಗಾಯವಾಗಿದ್ದು. ಇಬ್ಬರಿಗೆ ಗಂಭೀರವಾದ ಗಾಯಗೊಂಡು ಗುಡಿಬಂಡೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಆಸ್ಪತ್ರೆಗೆ ರವಾನಿಸಲಾಯಿತು.
ಬಾಗೇಪಲ್ಲಿ-ಗುಡಿಬಂಡೆ- ಗೌರಿಬಿದನೂರು ತುಮಕೂರು ಮಾರ್ಗದ KSRTC ಬಸ್ ಎಂದಿನಂತೆ ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಗೌರಿಬಿದನೂರು ಗೆ ಹೋಗುವ ಮಾರ್ಗದಲ್ಲಿ ಚಿಮಕಲಹಳ್ಳಿ ಗ್ರಾಮದಲ್ಲಿ ಬಸ್ ನಲ್ಲಿ ಪ್ರಯಾಣಿಕರನ್ನು ಇಳಿಸುತ್ತಿರುವಾಗ ನಿಂತಿದ್ದ ಬಸ್ ಗೆ ಟಿಪ್ಪರ್ ಏಕಾ ಏಕಿ ಬಸ್ ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲೆಯ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಯಗಳು ಗೌರಿಬಿದನೂರು ತಾಲ್ಲೂಕಿನ ಕೃಷ್ಣರಾಜಪುರ ಗ್ರಾಮದ ನರೇಂದ್ರ, ಮತ್ತು ಕೊಂಡರೆಡ್ಡಿ ಗ್ರಾಮದ ಶಿಲ್ಪ ಎಂದು ಗುರುತಿಸಲಾಗಿದೆ. ಟಿಪ್ಪರ್ ಗಳ ಹಾವಳಿ ಹೆಚ್ಚಾಗಿದ್ದು ಓವರ್ ಸ್ಪೀಡ್, ಓವರ್ ಟನೇಜ್ ಹಾಕಿಕೊಂಡು ಯಮದೂತರಂತೆ ಜೋರಾಗಿ ವಾಹನ ಓಡಿಸುತ್ತಾರೆ. ಈಗಾಗಲೇ ಇದೇ ರಸ್ತೆಯಲ್ಲಿ ಸುಮಾರು 6-7 ಜನರ ಸಾವು ಟಿಪ್ಪರ್ ಗಳಿಂದ ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ರಸ್ತೆಯಲ್ಲಿ ಬರುವ ಟಿಪ್ಪರ್ ಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.