Local News – ಜಾರಿ ನಿರ್ದೇಶನಾಲಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಬೆಂಗಳೂರಿನ ನಿವಾಸ, ಕಚೇರಿಗಳು ಮತ್ತು ಅವರ ವ್ಯಾಪಾರ ಪಾಲುದಾರರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಈ ಪರಿಶೀಲನೆ ನಡೆಸಲಾಗುತ್ತಿದೆ. ಈ ದಾಳಿ ರಾಜಕೀಯ ಪ್ರೇರಿತ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕಾಂಗ್ರೇಸ್ ಮುಖಂಡರು ಪ್ರತಿಭಟನೆ ನಡೆಸಿದರು.
Local News – ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಕಾಂಗ್ರೇಸ್ ಮುಖಂಡರು
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಕಾಂಗ್ರೇಸ್ ಮುಖಂಡರು, ಕೇಂದ್ರ ನಾಯಕರಾದ ನರೇಂದ್ರ ಮೋದಿ, ಅಮಿತ್ ಷಾ ಹಾಗೂ ಇ.ಡಿ ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆಗಳನ್ನುಕೂಗೂತ್ತಾ ಕೆಲ ಸಮಯ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಷವನ್ನು ಹೊರಹಾಕಿದರು.
Local News – ಬಿಜೆಪಿಯವರು ದ್ವೇಷ ರಾಜಕಾರಣ ಮಾಡುತ್ತಾರೆ : ಪ್ರಕಾಶ್
ಈ ಸಮಯದಲ್ಲಿ ಮುಖಂಡ ಯರ್ರಹಳ್ಳಿ ಪ್ರಕಾಶ್ ಮಾತನಾಡಿ, ಎಸ್.ಎನ್ ಸುಬ್ಬಾರೆಡ್ಡಿ ರವರ ಮನೆಯ ಮೇಲೆ ಇಡಿ ದಾಳಿ ಮಾಡಿರುವುದು ರಾಜಕೀಯ ಷಡ್ಯಂತರ. ನಮ್ಮ ಶಾಸಕರು 2018 ರಲ್ಲಿ ಅಪರೇಷನ್ ಕಮಲಕ್ಕೆ ತುತ್ತಾಗದೇ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಶಾಸಕರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ್ದಾರೆ. ಆದ್ದರಿಂದ ಬಿಜೆಪಿ ಪಕ್ಷದವರು ಇಡಿ ಮತ್ತು ಐಟಿಯನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡುವುದರ ಮೂಲಕ ಸೇಡನ್ನು ತಿರಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.
Local News – ರಾಜಕೀಯ ಪ್ರೇರಿತ ದಾಳಿ ನಿಲ್ಲಿಸಿ, ಇಲ್ಲ ಬೃಹತ್ ಹೋರಾಟದ ಎಚ್ಚರಿಕೆ
ಬಳಿಕ ಮುಖಂಡ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಸಮಾಜ ಸೇವೆಯ ಮೂಲಕ ರಾಜಕೀಯಕ್ಕೆ ಬಂದ ಎಸ್.ಎನ್.ಸುಬ್ಬಾರೆಡ್ಡಿಯವರಿಗೆ ಹಣ ಸಂಪಾದನೆ ಮಾಡುವ ಉದ್ದೇಶವಿಲ್ಲ. ಅವರ ಮೂಲತಃ ವ್ಯಾಪರಸ್ಥರು. ಎಲ್ಲಾ ಕಾನೂನು ಬದ್ದವಾಗಿಯೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ ಕೆಲ ಕುತಂತ್ರಿಗಳು ಸುಬ್ಬಾರೆಡ್ಡಿಯವರ ಬೆಳವಣಿಗೆಯನ್ನು ಕಾಣದೇ ಹಾಗೂ ಒಂದು ವೇಳೆ ಅವರಿಗೆ ಸಚಿವ ಸ್ಥಾನ ಕೊಟ್ಟರೇ ಇಡೀ ಜಿಲ್ಲೆಯಲ್ಲಿ ಬಿಜೆಪಿಯ ಪ್ರಭಾವ ಕುಗ್ಗತ್ತದೆ ಎಂದು ಹೇಳಿ ಈ ರೀತಿಯಾಗಿ ಧಾಳಿಗಳನ್ನು ನಡೆಸುತ್ತಿದೆ. ಈ ರೀತಿಯ ದಾಳಿಗಳನ್ನು ನಿಲ್ಲಿಸದೇ ಇದ್ದರೇ ರಾಜ್ಯವ್ಯಾಪಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Local News – ಇಡಿ ದಾಳಿ ಸಂಪೂರ್ಣವಾಗಿ ರಾಜಕೀಯ ಪ್ರೇರಿತ
ಇದೇ ಸಮಯದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಡೇಹಳ್ಳಿ ಆದಿರೆಡ್ಡಿ, ಮುಖಂಡ ದಪ್ಪರ್ತಿ ನಂಜುಂಡ ಹಾಗೂ ಹಿರಿಯ ಮುಖಂಡ ಕೃಷ್ಣೆಗೌಡ, ರಿಯಾಜ್ ಪಾಷ ಇಡಿ ದಾಳಿ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ. ಈ ದಾಳಿಗಳು ಸುಬ್ಬಾರೆಡ್ಡಿಯವರ ಪ್ರತಿಷ್ಠೆಯನ್ನು ಕುಗ್ಗಿಸುವುದಿಲ್ಲ. ಸುಬ್ಬಾರೆಡ್ಡಿಯವರೊಂದಿಗೆ ಕ್ಷೇತ್ರದ ಜನತೆ ಹಾಗೂ ಕಾಂಗ್ರೇಸ್ ಕಾರ್ಯಕರ್ತರಿದ್ದಾರೆ ಎಂದರು.
Read this also : ಕಾಂಗ್ರೇಸ್ ಶಾಸಕ ಸುಬ್ಬಾರೆಡ್ಡಿ ಮೇಲೆ ಇಡಿ ದಾಳಿ, ಈ ದಾಳಿ ರಾಜಕೀಯ ಪ್ರೇರಿತ, ಕಾಂಗ್ರೇಸ್ ಮುಖಂಡರ ಪ್ರತಿಭಟನೆ…!
ಈ ವೇಳೆ ಪ.ಪಂ ಅಧ್ಯಕ್ಷ ಎ.ವಿಕಾಸ್, ಕೋಚಿಮುಲ್ ಮಾಜಿ ನಿರ್ದೇಶಕ ಆದಿನಾರಾಯಣರೆಡ್ಡಿ, ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಯುವಕಾಂಗ್ರೆಸ್ ಅಧ್ಯಕ್ಷ ನವೀನ್, ನರಸಿಂಹಮೂರ್ತಿ, ರಿಯಾಜ್, ಬಾಬು, ರಿಜ್ವಾನ್, ಗಂಗಿರೆಡ್ಡಿ, ಮುರಳಿ, ಕೃಷ್ಣೆಗೌಡ, ಚಿನ್ನಹಳ್ಳಿ ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.