Tuesday, July 1, 2025
HomeStateLocal News: ಛಲವಿದ್ದರೇ ಏನಾದರೂ ಸಾಧನೆ ಮಾಡಲು ಸಾಧ್ಯ: ಪ್ರೊ.ಡಿ.ಶಿವಣ್ಣ

Local News: ಛಲವಿದ್ದರೇ ಏನಾದರೂ ಸಾಧನೆ ಮಾಡಲು ಸಾಧ್ಯ: ಪ್ರೊ.ಡಿ.ಶಿವಣ್ಣ

Local News: ಶಿಕ್ಷಣ, ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ ಆದರೆ ಶ್ರದ್ದೆ, ಕಠಿಣ ಪರಿಶ್ರಮ, ಸಾಧನೆ ಮಾಡಬೇಕೆಂಬ ಛಲ ಇದ್ದರೆ ಖಂಡಿತವಾಗಿ ಒಂದಲ್ಲ ಒಂದು ದಿನ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತೆ ಎಂದು ಯಂಗ್ ಇಂಡಿಯಾ ಶಾಲೆಯ ಸಂಸ್ಥಾಪಕರಾದ ಪ್ರೋ. ಡಿ.ಶಿವಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ (Local News) ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಮಕ್ಕಳಿಗೆ ಪಟ್ಟಣದ ಶಾಲೆ ಆವರಣದಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ಪತ್ರ್ರ ಮತ್ತು ಟ್ರೋಫಿಗಳನ್ನು ವಿತರಿಸಿ ಮಾತನಾಡಿ,  ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು ಅದೇ ರೀತಿಯಲ್ಲಿ ಮಕ್ಕಳ ಪೋಷಕರ ಪಾತ್ರವೂ ಸಹ ಅಷ್ಟೇ ಮುಖ್ಯ ಮತ್ತು ಜವಾಬ್ದಾರಿ ಇರುತ್ತೆ. ವಿದ್ಯೆ ಎಂಬುದು ಸಾಧಕರ ಸ್ವತ್ತು, ಕೃಷಿ,ಕ್ರೀಡೆ,ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಆಸಕ್ತಿ ಮತ್ತು ಗುರಿ ಸಾಧಿಸಬೇಕೆಂಬ ಛಲ ಇರಬೇಕು ಎಂದ ಅವರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಶಾಲೆಯ ಮಕ್ಕಳನ್ನು ಅಭಿನಂಧಿಸಿದರು.

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವಿದ ಕ್ರೀಡೆಗಳಲ್ಲಿ (Local News) ಭಾಗವಹಿಸಿ ವಿಜೇತರಾದ ಯಂಗ್ ಇಂಡಿಯಾ ಶಾಲೆ ಮಕ್ಕಳು: 200 ಮೀಟರ್ ಓಟದಲ್ಲಿ ಜಯಶ್ರೀ (ಪ್ರಥಮ ಸ್ಥಾನ), ಡಿಸ್ಕಸ್ ಥ್ರೋ-ಹೇಮಶ್ರೀ(ಪ್ರಥಮ ಸ್ಥಾನ), ಜಾವಲಿನ್ ಥ್ರೋ-ಧನುಷ್ (ಪ್ರಥಮ ಸ್ಥಾನ), ಉದ್ದ ಜಿಗಿತ-ಜೋಯ(ಪ್ರಥಮ ಸ್ಥಾನ), ಷಟಲ್ ಬ್ಯಾಟ್‌ಮಿಟನ್, ವಾಲಿಬಾಲ್, ಹ್ಯಾಂಡ್ ಬಾಲ್ ಇತ್ಯಾಧಿ ಕ್ರೀಡೆಗಳಲ್ಲಿ ವಿಜೇತರಾಗಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪಟ್ಟಣದ ಯಂಗ್ ಇಂಡಿಯಾ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡೆಗಳಲ್ಲಿ ಸ್ಪರ್ಧಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಟಿ. ರಾಮಾಂಜಿನಪ್ಪ ಮತ್ತು ಅಮರನಾಥ್ ಕೆ.ರವರನ್ನು ಶಾಲೆಯ ಸಂಸ್ಥಾಪಕ ಪ್ರೋ.ಡಿ.ಶಿವಣ್ಣ, ಮುಖ್ಯ ಶಿಕ್ಷಕಿ ಕಲ್ಪನಾ ಆರ್ ರವರು ಅಭಿನಂಧಿಸಿದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular