ಬಾಗೇಪಲ್ಲಿ ತಾಲೂಕಿನ ಪರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರಮಾದೇವಿ ರವರ ಮಗಳು ಹುಟ್ಟಿದ ಹಬ್ಬದ ಪ್ರಯುಕ್ತ (Local News) ಶಿಕ್ಷಕಿ ರಮಾದೇವಿ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ತಮ್ಮ ಮಗಳ ಹುಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಮುಖ್ಯ ಶಿಕ್ಷಕ ಸಿ.ವೆಂಕಟರಾಯಪ್ಪ ಮಾತನಾಡಿ ನಮ್ಮ ಶಾಲೆಯ ಶಿಕ್ಷಕಿ ರಮಾದೇವಿ ರವರ ಮಗಳ ಹುಟ್ಟಿದ ಹಬ್ಬದ ಪ್ರಯುಕ್ತ ಶಾಲೆಯ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸರಳವಾಗಿ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಣೆ ಮಾಡಿರುವುದಕ್ಕೆ ಅಭಿನಂಧಿಸಿದ ಅವರು ಉಚಿತವಾಗಿ ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡುವುದರಿಂದ ಗ್ರಾಮೀಣ ಭಾಗದಲ್ಲಿ ಅನೇಕ ಬಡ ಪ್ರತಿಭಾವಂತ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ದಿಗೆ ಸಹಕಾರಿಯಾಗುತ್ತೆ ಎಂದರು.
ಶಾಲೆಯ ಎಲ್ಲಾ 80 ಮಕ್ಕಳಿಗೆ ಲೇಖನಾ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ತನ್ನ ಮಗಳ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದ ಶಾಲೆಯ ಶಿಕ್ಷಕಿ ಕೆ. ರಮಾದೇವಿ ರವರನ್ನು ಶಾಲೆಯ ಸಹ ಶಿಕ್ಷಕರು, ಪೋಷಕರು ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂಧಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಪ್ಪ, ಪೋಷಕರಾದ ಗಂಗರಾಜು, ಚಾಂದ್ ಭಾಷಾ, ಕವಿತಾ, ನರೇಶ, ಶಿವಕುಮಾರ್, ಶಾಲೆಯ ಶಿಕ್ಷಕರಾದ ಸತ್ಯನಾರಾಯಣ ಜಿ.ಎಸ್, ಗೋವಿಂದರಾಜು, ಲಕ್ಷ್ಮಿ, ರೇಷ್ಮಾ ಮತ್ತಿತರರು ಇದ್ದರು.
ಸಕಾಲಕ್ಕೆ ಸಾಲ ಮರುಪಾವತಿಸಿ ಮಾಡಿದರೇ ಬಡ್ಡಿ ಮನ್ನಾ: ಪ್ರಭಾಕರರೆಡ್ಡಿ
ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಬಡ್ಡಿ ಮನ್ನಾ ಆಡಲು ಸಾಧ್ಯವಾಗುತ್ತೆ ಇಲ್ಲದಿದ್ದರೆ ಬಡ್ಡಿ ಕಟ್ಟಬೇಕಾಗುತ್ತೆ ಎಂದು ಬಾಗೇಪಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ವಿ.ಪ್ರಭಾಕರರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆವರಣದಲ್ಲಿ ಅಯೋಜಿಸಲಾಗಿದ್ದ 84ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಬ್ಯಾಂಕ್‍ನಿಂದ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಬಡ್ಡಿ ಮತ್ತು ಸಾಲದ ಹಣವನ್ನು ಪಾವತಿಸಿದಾಗ ಮಾತ್ರ ಬ್ಯಾಂಕ್ ಅಭಿವೃದ್ದಿ ಹೊಂದುವ ಜೊತೆಗೆ ಮತ್ತೇ ರೈತರಿಗೆ ಸಾಲವನ್ನು ನೀಡಲು ಅನುಕೂಲವಾಗುತ್ತೆ ಎಂದ ಅವರು ಸರ್ಕಾರ ಬಡ್ಡಿ ಮನ್ನಾ ಮಾಡುತ್ತೆ ಎಂದು ರೈತರು ಬಡ್ಡಿ ಹಣವನ್ನು ಕಟ್ಟುವುದು ವಿಳಂಬ ಮಾಡದೆ ನಿಗದಿತ ಅವಧಿಯಲ್ಲಿ ಸಾಲದ ಬಡ್ಡಿ ಹಣವನ್ನು ಮರುಪಾವತಿ ಮಾಡದರೆ ಬಡ್ಡಿ ಮನ್ನಾ ಆಗುತ್ತದೆ ಇಲ್ಲವಾದರೆ ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ ಎಂದರು.