HomeSpecialLife Corporation of India: ಎಲ್.ಐ.ಸಿ ಸಂಸ್ಥೆಯಲ್ಲಿದೆ 200 ಹುದ್ದೆಗಳು, ಆ.14 ಕೊನೆಯ ದಿನಾಂಕ….!

Life Corporation of India: ಎಲ್.ಐ.ಸಿ ಸಂಸ್ಥೆಯಲ್ಲಿದೆ 200 ಹುದ್ದೆಗಳು, ಆ.14 ಕೊನೆಯ ದಿನಾಂಕ….!

ಲೈಫ್ ಕಾರ್ಪೋರೇಷನ್ ಆಫ್ ಇಂಡಿಯಾ (Life Corporation of India) ದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (Housing Finance Limited ) ವಿಭಾಗದಲ್ಲಿ ಜೂನಿಯರ್‍ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯಥಿಗಳು LIC HFL ನ ಅಧಿಕೃತ ವೆಬ್‌ಸೈಟ್ lichousing.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆ.14 ರೊಳಗೆ ಅರ್ಜಿ ಸಲ್ಲಿಸಬೇಕಿದೆ.

ಲೈಫ್ ಕಾರ್ಪೋರೇಷನ್ ಆಫ್ ಇಂಡಿಯಾ (Life Corporation of India) ದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (Housing Finance Limited ) ವಿಭಾಗದಲ್ಲಿ ಒಟ್ಟು 200 ಜೂನಿಯರ್‍ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜು.25, 2024 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆ.14 ಕೊನೆಯ ದಿನಾಂಕವಾಗಿದೆ. ಇನ್ನೂ ಈ ಹುದ್ದೆಗಳಿಗೆ ಪರೀಕ್ಷಾ ದಿನಾಂಕ ಸೆ.14 (ತಾತ್ಕಲಿಕ) ಆಗಿದ್ದು, ಪ್ರವೇಶ ಪತ್ರ ಬಿಡುಗಡೆ ಪರೀಕ್ಷೆಯ 7-14 ದಿನಗಳ ಮೊದಲು ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆಯ್ಕೆ ವಿಧಾನ ಸಂದರ್ಶನದ ನಂತರ CBT ಮೋಡ್ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಶಿಕ್ಷಣ ಅರ್ಹತೆ:  ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು (ಕನಿಷ್ಠ ಒಟ್ಟು 60 % ಅಂಕಗಳು). ಭಾರತದ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ದೂರ ಶಿಕ್ಷಣ/ಅರೆಕಾಲಿಕವಾಗಿ ಪೂರ್ಣಗೊಳಿಸಿದ ಪದವಿ ಕೋರ್ಸ್‌ಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೂಕ್ತ ಶಿಕ್ಷಣ ಅರ್ಹತೆ ಅಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಕಂಪ್ಯೂಟರ್ ಸಿಸ್ಟಮ್‌ಗಳಲ್ಲಿ ಆಪರೇಟಿಂಗ್ ಮತ್ತು ವರ್ಕಿಂಗ್ ಜ್ಞಾನ ಕಡ್ಡಾಯ. ಅಂದರೆ ಅಭ್ಯರ್ಥಿಗಳು ಕಂಪ್ಯೂಟರ್ ಕಾರ್ಯಾಚರಣೆಗಳು/ಭಾಷೆಯಲ್ಲಿ ಪ್ರಮಾಣಪತ್ರ/ಡಿಪ್ಲೊಮಾ/ಪದವಿ ಹೊಂದಿರಬೇಕು/ಹೈಸ್ಕೂಲ್/ಕಾಲೇಜು/ಸಂಸ್ಥೆಯಲ್ಲಿ ಕಂಪ್ಯೂಟರ್/ಮಾಹಿತಿ ತಂತ್ರಜ್ಞಾನವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು

LIC HFL ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ವಯೋಮಿತಿ:  ವಯೋಮಿತಿ: ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 1, 2024 ರಂತೆ 21 ರಿಂದ 28 ವರ್ಷ ವಯಸ್ಸಿನವರಾಗಿರಬೇಕು, ಅಂದರೆ ಅಭ್ಯರ್ಥಿಗಳು 02.07.1996 ಕ್ಕಿಂತ ಮೊದಲು ಮತ್ತು 01.07.2003 ಕ್ಕಿಂತ ನಂತರ ಜನಿಸಿರಬೇಕು (ಎರಡೂ ದಿನಾಂಕಗಳನ್ನು ಒಳಗೊಂಡಂತೆ). ಹೆಚ್ಚಿನ ಮಾಹಿತಿಗಾಗಿ lichousing.com ನಲ್ಲಿ LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

LIC HFL Vacancy

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt