ಕಾಡಿನಿಂದ ಚಿರತೆ (Leopard) ಮರಿಯೊಂದು ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಪೊಲೀಸ್ ಅತಿಥಿ ಗೃಹಗಳ ಆವರಣಕ್ಕೆ ಬಂದು ಸೇರಿದೆ. ಕಾಪೌಂಡ್ ಬಳಿ ಓಡಾಡುತ್ತಿದ್ದ ಚಿರತೆಯನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದು, ಚಿರತೆ ಮರಿ ಪೊಲೀಸ್ ಠಾಣೆಯ ಆವರಣದಲ್ಲಿರುವ ಹಳೇಯ ಕಾರಿನ ಸೀಟಿನ ಕೆಳಗೆ ಅವಿತುಕೊಂಡಿದೆ.

Leopard – ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿ
ಇತ್ತೀಚಿನ ದಿನಗಳಲ್ಲಿ ಗುಡಿಬಂಡೆ ತಾಲೂಕಿನಾದ್ಯಂತ ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ವರ್ಲಕೊಂಡ ವ್ಯಾಪ್ತಿಯಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು, ಆಗ ಗ್ರಾಮಸ್ಥರೇ ಧೈರ್ಯ ಮಾಡಿ ಚಿರತೆಯನ್ನು ಸೆರೆಹಿಡಿದಿದ್ದರು. ಆದರೆ ಇಷ್ಟು ದಿನ ಕೇವಲ ಗ್ರಾಮೀಣ ಭಾಗಗಳಲ್ಲಿ ಮಾತ್ರ ಓಡಾಡುತ್ತಿದ್ದ ವನ್ಯಜೀವಿಗಳು, ಈಗ ಏಕಾಏಕಿ ಪಟ್ಟಣದ ಜನನಿಬಿಡ ಪ್ರದೇಶಗಳಿಗೆ ಮತ್ತು ಪೊಲೀಸ್ ಠಾಣೆಯ ಆವರಣಕ್ಕೆ ಬಂದಿರುವುದು ಸ್ಥಳೀಯರಲ್ಲಿ ತೀವ್ರ ಭೀತಿಗೆ ಕಾರಣವಾಗಿದೆ.

Leopard – ಸುರಕ್ಷಿತವಾಗಿ ಚಿರತೆ ಮರಿಯ ಸೆರೆ
ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಗುಡಿಬಂಡೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಧ್ಯಾಹ್ನದಿಂದ ಸಂಜೆಯವರೆಗೂ ಚಿರತೆ ಮರಿಯನ್ನು ಸೆರೆಹಿಡಿಯಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕಾರಿನ ಸೀಟಿನಡಿ ಅವಿತು ಕುಳಿತಿದ್ದ ಚಿರತೆಯನ್ನು ಹೊರತರಲು ಎಷ್ಟೇ ಪ್ರಯತ್ನಿಸಿದರೂ, ಸರೆಯಾಗಲಿಲ್ಲ. ಬಳಿಕ ಬೆಂಗಳೂರಿನ ಬನ್ನೇರುಗಟ್ಟದಿಂದ ವೈದ್ಯರನ್ನು ಕರೆಸಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು.
