Krishna Janmastami – ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಶ್ರೀ ವೇಣುಗೋಪಲ ಸ್ವಾಮಿ ದೇವಾಲಯದಲ್ಲಿ ವಿವಿಧ ಅಲಂಕಾರ, ತಮ್ಮ ಮಕ್ಕಳಿಗೆ ಕೃಷ್ಣ-ರಾಧೆ ಉಡುಗೆ ತೊಡಿಸಿ ಸಂತಸಪಡುವುದರ ಜೊತೆಗೆ ವಿಶೇಷ ಪೂಜೆ, ಭಕ್ಷ್ಯ ಭೋಜನಗಳ ನೈವೇದ್ಯವನ್ನು (Krishna Janmastami) ಭಕ್ತರಿಗೆ ಸಮರ್ಪಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ವಿಶೇಷ ತೊಟ್ಟಿಲು ಅಲಂಕಾರ, ವಿಶೇಷ ಪೂಜೆ ನಡೆಯಿತು. (Krishna Janmastami) ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಬೆಳಗಿನಿಂದಲೇ ನಡೆದವು. ಸೋಮವಾರ ಬೆಳಗಿನಿಂದಲೇ ಭಕ್ತಾಧಿಗಳು (Krishna Janmastami) ಶ್ರದ್ದಾ ಭಕ್ತಿಯಿಂದ ದೇವಾಲಯಗಳಿಗೆ ತಮ್ಮ ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸುತ್ತಿದ್ದರು.
ವಿವಿಧ ವೇಷ ಭೂಷಣಗಳು – ಸಾರ್ವಜನಿಕರು ತಮ್ಮ ಮಕ್ಕಳಿಗೆ ರಾಧೆ, ಶ್ರೀ ಕೃಷ್ಣನ ವೇಷಗಳನ್ನು ಹಾಕಿ ಸಂತೋಷ ಪಡುತ್ತಿದ್ದರು. ವಿವಿಧಕ್ ಶಾಲೆಗಳಲ್ಲಿ ವಿಶೇಷವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. (Krishna Janmastami) ವಿಶೇಷ ಪೂಜೆಯಲ್ಲಿ ದಪ್ಪರ್ತಿ ಗ್ರಾಮದ ಸಾರ್ವಜನಿಕರು, ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಟ್ರಸ್ಟ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಸಮಿತಿಯ ಸದಸ್ಯರು, (Krishna Janmastami) ಗ್ರಾಮದ ಮುಖಂಡರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನ ಭಕ್ತಾಧಿಗಳು ಪಾಲ್ಗೊಂಡಿದ್ದರು.