Krishna Byregowda – ಕರ್ನಾಟಕ ರಾಜ್ಯಾದಂತ ಭೂ ಸುರಕ್ಷಾ ಯೋಜನೆಯಡಿಯಲ್ಲಿ ಕಂದಾಯ ಇಲಾಖೆಗಳನ್ನು ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಗಣೀಕರಣಗೊಳಿಸುವ ಕಾರ್ಯಕ್ರಮಕ್ಕೆ ಜನವರಿ 8 ರ ಬೆಳಿಗ್ಗೆ 11 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಕಚೇರಿಯ ಆವರಣದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಅವರು ಕಾರ್ಯಕ್ರಮ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 8 ರ ಬೆಳಿಗ್ಗೆ 11 ಗಂಟೆಗೆ ಕಂದಯ ಸಚಿವರಾದ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ . ಸುಧಾಕರ್, ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸೇರಿದಂತೆ ಇತರರು ನಾಳೆ ಗುಡಿಬಂಡೆ ತಾಲ್ಲೂಕು ಕಚೇರಿಯಲ್ಲಿ ಇರುವಂತಹ ಅಭಿಲೇಖಾಲಯದಲ್ಲಿ ಇರುವ ದಾಖಲೆಗಳ ಗಣೀಕರ ಮಾಡುವ ನಿಟ್ಟಿನಲ್ಲಿ, ಘನ ಸರ್ಕಾರವು ಭೂ ಸುರಕ್ಷ ಯೋಜನೆಯನ್ನು ಪ್ರಾರಂಭಿಸಿದೆ. ಈಗಾಗಲೇ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಎಲ್ಲಾ ಕಂದಾಯ ದಾಖಲೆಗಳ£ಕಡತಗಳು ಗಣಕೀರಣ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಗ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರದ ತಹಶೀಲ್ದಾರ್ ಕಛೇರಿಗಲ್ಲಿ ಇರುವ ಕಡತಗಳನ್ನು ಗಣೀಕರಣ ಮಾಡುವ ಉದ್ದೇಶ ಇಟ್ಟುಕೊಂಡಿದ್ದು ಕಂದಾಯ ಸಚಿವರು ಕೃಷ್ಣಬೈರೇಗೌಡ ಗುಡಿಬಂಡೆ ತಾಲ್ಲೂಕು ಕಚೇರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಗುಡಿಬಂಡೆ ತಾಲ್ಲೂಕು ಕಚೇರಿಯ ರೆಕಾರ್ಡ್ ರೂಮ್ ನಲ್ಲಿರವ ಎ ಮತ್ತು ಬಿ ವರ್ಗದ ಕಡತಗಳ ಗಣೀಕರಣಕ್ಕೆ ನಾಳೆ ಚಾಲನೆ ದೊರೆಯಲಿದೆ ಎಂದರು.
ಗುಡಿಬಂಡೆ ತಾಲ್ಲೂನ ತಾಲ್ಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಎ ಮತ್ತು ಬಿ ವರ್ಗದ ಒಟ್ಟು 27420 ಕಡತಗಳು, ಅಂದಾಜು 20,79,641 ಪುಟಗಳು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೈಗೆತ್ತಿಕೊಳ್ಳುತಿರುವುದು ಎ ಮತ್ತು ಬಿ ವರ್ಗದ ಕಡತಗಳು. ಎ ವರ್ಗದಲ್ಲಿ 1250 ಕಡತಗಳು ಸುಮಾರು 87,000 ಪುಟಗಳು, ಬಿ ವರ್ಗದ 403 ಕಡತಗಳು ಇದ್ದು ಸುಮಾರು 50,400 ಪುಟಗಳು ಇವೆ. ಈಗ ಒಟ್ಟು ಎ ಮತ್ತು ಬಿ ಇಂದು 1653 ಕಡತಗಳಿದ್ದು ಒಟ್ಟು ಸುಮಾರು 1,37,400 ಪುಟಗಳನ್ನು ಸ್ಕ್ಯಾನಿಂಗ್ ಮಾಡಲಿಕ್ಕೆ ನಾಳೆ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಕಂದಾಯ ಸಚಿವರು ನಾಳೆ ಈ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಲ್ಲಾ ಸರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ತಿಳಿಸಿದರು.ಸಿಬಂದಿ
ಈ ವೇಳೆ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಭಾಸ್ಕರ್, ಗುಡಿಬಂಡೆ ತಹಶೀಲ್ದಾರ್ ಸಿಗ್ಬತುಲ, ಗ್ರೇಡ್ 2 ತಹಶೀಲ್ದಾರ್ ತುಳಸಿ, ತಾಲ್ಲೂಕು ಪಂಚಾಯತಿ ಇಓ ನಾಗಮಣಿ, ಬಿಇಓ ಕೃಷ್ಣಪ್ಪ, ಸೇರಿದಂತೆ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೊಲೀಸರು ಹಾಜರಿದ್ದರು.