Krishna Byre Gowda – ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು (H D Kumaraswamy)ರಾಜ್ಯದಲ್ಲಿ 60% ಸರ್ಕಾರವಿದೆ ಎಂಬ ಆರೋಪ ಮಾಡಿದ್ದರು. ಈ ಆರೋಪಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ಕೌಂಟರ್ ಕೊಟ್ಟಿದ್ದು, ಕುಮಾರಸ್ವಾಮಿಯವರು ಚೆನ್ನಪಟ್ಟಣ ಉಪಚುನಾವಣೆಯ ಸೋಲಿನಿಂದ ಬೇಸತ್ತಿದ್ದಾರೆ ಎಂದಿದ್ದಾರೆ.
ಈ ಕುರಿತು ಗುಡಿಬಂಡೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತಿಚಿಗೆ ನಡೆದ ಚೆನ್ನಪಟ್ಟಣ ಉಪಚುನಾವಣೆಯಲ್ಲಿ ತನ್ನ ಮಗ ಸೋತಿದ್ದ ಕಾರಣ ಕುಮಾರಸ್ವಾಮಿಯವರು ಹತಾಶೆಗೊಂಡಿದ್ದಾರೆ. ಈ ಕಾರಣದಿಂದ ರಾಜ್ಯ ಸರ್ಕಾರದ ಮೇಲೆ 60% ಕಮಿಷನ್ ಆರೋಪ ಮಾಡುತ್ತಿದ್ದಾರೆ. ಚೆನ್ನಪಟ್ಟಣದ ಚುನಾವಣೆಯಲ್ಲಿ ಜೆಡಿಎಸ್+ಬಿಜೆಪಿ ಎರಡೂ ಪಕ್ಷಗಳ ಮತಗಳಿಗಿಂತ ಕಾಂಗ್ರೇಸ್ ಹೆಚ್ಚು ಪಡೆದುಕೊಂಡಿದೆ. ಜೆಡಿಎಸ್ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡರೂ ಸಹ ಕಳೆದ ಬಾರಿ ಬಿಜೆಪಿ ಪಡೆದುಕೊಂಡಿದ್ದಕ್ಕಿಂತ 12 ಸಾವಿರ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ. ಕುಮಾರಸ್ವಾಮಿಯವರಿಗೆ ಬಿಜೆಪಿಯವರು ಧೋಖಾ ಮಾಡಿದ್ದಾರೆ.
ಪಾರ್ಲೀಮೆಂಟ್ ನಲ್ಲಿ ಬಿಜೆಪಿಯವರು ಏನೆಲ್ಲಾ ಮತಗಳನ್ನು ಹಾಕಿಸಿಕೊಳ್ಳಬೇಕೋ ಹಾಕಿಸಿಕೊಂಡಿದ್ದಾರೆ. ಪಾರ್ಲಿಮೆಂಟ್ ಸೀಟ್ ಗಳನ್ನು ಗೆದ್ದುಕೊಂಡರು. ಸ್ವತಃ ಕುಮಾರಸ್ವಾಮಿ ಮಗ ಚುನಾವಣೆಗೆ ನಿಂತಾಗ, ಈ ಹಿಂದೆ ದಳ ಹಾಗೂ ಬಿಜೆಪಿ ಎದುರಾಳಿಯಾಗಿ ಸ್ಪರ್ಧಿಸಿದಾಗ ದಳಕ್ಕೆ ಎಷ್ಟು ಮತಗಳು ಬಂದಿತ್ತೋ, ಹಿಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ಅದಕ್ಕಿಂತ 12 ಸಾವಿರ ಮತ ಕಡಿಮೆಯಾಗಿದೆ ಅಂದ್ರೇ ಬಿಜೆಪಿ ಓಟು ಎಲ್ಲಿ ಹೋಯ್ತು? ಇದರಿಂದ ಬಿಜೆಪಿಯವರ ಮೇಲೆ ಆರೋಪ ಮಾಡಲು ಆಗದೇ ಬೇರೆಯವರ ಮೇಲೆ ಹಿಟ್ ಅಂಡ್ ರನ್ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಕೈಯಲ್ಲಿಯೇ ಇದೆಯಲ್ಲ ಇಡಿ, ಸಿಬಿಐ ಗಳನ್ನು ಚೂ ಬಿಟ್ಟು ಏನೆಲ್ಲಾ ಮಾಡ್ತಾ ಇದ್ದಾರೆ ಅಲ್ವಾ ಮಾಡಲಿ, ಎಲ್ಲವನ್ನೂ ನಾವು ಎದುರಿಸುತ್ತೇವೆ ಎಂದರು.
ಇದೇ ಸಮಯದಲ್ಲಿ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಸಹ ಮಾತನಾಡಿ, ಡಿನ್ನರ್ ಗಳು ಅವರವರ ವೈಯುಕ್ತಿಕ, ಎಲ್ಲರಿಗೂ ಅಧಿಕಾರದ ಮೇಲೆ ಆಸೆಯಿರುತ್ತದೆ. ಸದ್ಯ ಸಾರ್ವಜನಿಕವಾಗಿ ಮುಖ್ಯವಲ್ಲ. ಅದು ಅವರ ವೈಯುಕ್ತಿಕ ವಿಚಾರವಾಗಿದೆ. ಜನಗಳ ಸಮಸ್ಯೆ ಚರ್ಚಾ ವಿಷಯವಾಗಬೇಕು. ಅದನ್ನು ಬಿಟ್ಟು ಪ್ರತಿಯೊಬ್ಬರಿಗೂ ಅಧಿಕಾರದ ಮೇಲೆ ಆಸೆಯಿರುತ್ತದೆ. ಸಾರ್ವಜನಿಕ ಜೀವನದಲ್ಲಿದ್ದಾಗ ನಾವ್ಯಾರು ಸನ್ಯಾಸಿಗಳಲ್ಲ. ಒಂದು ಅಧಿಕಾರ ಸಿಕ್ಕಾಗ ಮತ್ತೊಂದು ಅಧಿಕಾರದ ಮೇಲೆ ಆಸೆಯಾಗೋದು ಸ್ವಾಭಾವಿಕವಾದುದು, ರಾಜಕೀಯದಲ್ಲಿ ನಿರಂತರವಾಗಿ ನಡೆಯುವಂತಹದು. ಆದರೆ ಅದನ್ನೆಲ್ಲವನ್ನು ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದು ಹೆಚ್ಚಿನ ಗಮನ ಕೊಡೋದು ಸೂಕ್ತ ಎಂದರು.