King Cobra – ಸಾಮಾನ್ಯವಾಗಿ ಹಾವು (Snake) ಅಂದ್ರೆನೇ ಭಯ. ಅಂತಹದ್ರಲ್ಲಿ ಒಂದು 13 ಅಡಿ ಉದ್ದದ ಕಿಂಗ್ ಕೋಬ್ರಾ ನಿಮ್ಮೆದುರಿಗೆ ನಿಂತರೆ ಹೇಗಿರಬಹುದು? ಊಹಿಸಿದ್ರೇನೇ ಎದೆ ನಡುಕ ಶುರುವಾಗುತ್ತೆ ಅಲ್ವಾ? ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದ್ದು, ಅದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ ಆಗಿದೆ.

King Cobra – ಹರಿದ್ವಾರದಲ್ಲಿ ಸಿಕ್ತು 13 ಅಡಿ ಕಿಂಗ್ ಕೋಬ್ರಾ
ಕಳೆದ ಭಾನುವಾರ, ಹರಿದ್ವಾರದ ಚಂಡಿ ಘಾಟ್ ಪ್ರದೇಶದಲ್ಲಿ ಗಂಗಾ ನದಿ ದಡದಲ್ಲಿ ಬೃಹತ್ ಕಿಂಗ್ ಕೋಬ್ರಾ ಕಾಣಿಸಿಕೊಂಡಿದೆ. ಈ ದೈತ್ಯ ಹಾವನ್ನು ನೋಡಿದ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ. ಯಾರು ಏನೇ ಮಾಡಿದ್ರೂ ಅದು ಅಲ್ಲೇ ತನ್ನ ಪಾಡಿಗೆ ಇತ್ತು. ಗೊಂದಲಗೊಂಡ ಜನರು ತಕ್ಷಣವೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ.
King Cobra – ಸ್ನೇಕ್ ಕ್ಯಾಚರ್‌ಗೆ ಚುಕ್ಕೆ ತೋರಿಸಿದ ನಾಗರ ಹಾವು!
ಮಾಹಿತಿ ಸಿಕ್ಕ ತಕ್ಷಣ ಅರಣ್ಯ ಇಲಾಖೆಯ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ. ಸುಮಾರು ಒಂದು ಗಂಟೆ ಕಾಲ ನಡೆದ ಈ ಕಾರ್ಯಾಚರಣೆ ಅಷ್ಟು ಸುಲಭವಾಗಿ ಇರಲಿಲ್ಲ. ಯಾಕಂದ್ರೆ, ಸುಮಾರು 13 ರಿಂದ 15 ಅಡಿ ಉದ್ದವಿದ್ದ ಆ ನಾಗರ ಹಾವು ಸಖತ್ ಚುರುಕಾಗಿತ್ತು. ಸ್ನೇಕ್ ಕ್ಯಾಚರ್‌ಗಳು ಹಾವನ್ನು ಹಿಡಿಯಲು ಪ್ರಯತ್ನಿಸಿದಾಗ, ಕೋಬ್ರಾ ರೇಗಿದೆ. ತಕ್ಷಣ ತಿರುಗಿಬಿದ್ದು ಜೋರಾಗಿ ಬುಸುಗುಟ್ಟುತ್ತಾ, ರಕ್ಷಿಸಲು ಬಂದ ಸಿಬ್ಬಂದಿಯ ಮೇಲೆ ಎರಗಲು ಪ್ರಯತ್ನಿಸಿದೆ.
ಈ ಸವಾಲಿನ ಪರಿಸ್ಥಿತಿಯಲ್ಲೂ ಸ್ನೇಕ್ ಕ್ಯಾಚರ್ (ಹಾವು ಹಿಡಿಯುವವರು) ಬಹಳ ಜಾಣ್ಮೆಯಿಂದ ವರ್ತಿಸಿ, ಕೊನೆಗೂ ಯಶಸ್ವಿಯಾಗಿ ಆ ಬೃಹತ್ ಕಿಂಗ್ ಕೋಬ್ರಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಸ್ಥಳೀಯ ನಿವಾಸಿಗಳು ಕೂಡ ರಕ್ಷಣಾ ತಂಡಕ್ಕೆ ಸಹಾಯ ಮಾಡಿದ್ದಾರೆ.

King Cobra – ವೈರಲ್ ಆಯ್ತು ವಿಡಿಯೋ
ಈ ಇಡೀ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ರೇಗಿದ ಹಾವು ಎದುರಿಗೆ ಬಂದವರಿಗೆಲ್ಲ ಹೇಗೆ ಬೆವರಿಳಿಸಿದೆ ಎಂಬುದನ್ನು ವಿಡಿಯೋದಲ್ಲಿ ನೋಡಿದ ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ದೊಡ್ಡ ನಾಗರಹಾವನ್ನು ರಕ್ಷಿಸಿದ ನಂತರ, ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ರಾಜಾಜಿ ಟೈಗರ್ ರಿಸರ್ವ್‌ನ (Rajaji Tiger Reserve) ಮನುಷ್ಯರ ವಾಸಸ್ಥಳದಿಂದ ದೂರವಿರುವ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. Read this also : ಅಬ್ಬಬ್ಬಾ…! ಬರೀ ಪೈಪ್ ಬಳಸಿ ದೈತ್ಯ ಕಾಳಿಂಗ ಸರ್ಪವನ್ನು ಹಿಡಿದ ಯುವಕ, ವೈರಲ್ ಆದ ವಿಡಿಯೋ…!
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
King Cobra – ಅರಣ್ಯ ಇಲಾಖೆಯಿಂದ ವಿನಂತಿ
ಒಂದು ವೇಳೆ ನಿಮ್ಮ ಕಣ್ಣು ಮುಂದೆ ಎಲ್ಲಾದರೂ ಇಂತಹ ಹಾವುಗಳು ಅಥವಾ ಯಾವುದೇ ಕಾಡು ಪ್ರಾಣಿಗಳು ಕಾಣಿಸಿದರೆ, ನೀವೇ ವೈಯಕ್ತಿಕವಾಗಿ ಅವುಗಳನ್ನು ಹಿಡಿಯಲು ಅಥವಾ ಯಾವುದೇ ಕ್ರಮ ತೆಗೆದುಕೊಳ್ಳಲು ಹೋಗಬೇಡಿ. ಇದರಿಂದ ಅಪಾಯವಾಗುವ ಸಾಧ್ಯತೆ ಇದೆ. ತಕ್ಷಣವೇ ಹತ್ತಿರದ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎಂದು ಸಿಬ್ಬಂದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಪಾಯದಿಂದ ದೂರ ಇರಿ, ಪರಿಸರ ಮತ್ತು ಪ್ರಾಣಿಗಳನ್ನು ರಕ್ಷಿಸಿ!
