Kicha Sudeep – ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಚಿಕ್ಕಬಳ್ಳಾಪುರಕ್ಕೆ ಆ.12 ರಂದು ಭೇಟಿ ನೀಡಿದ್ದರು. ಚಿಕ್ಕಬಳ್ಳಾಪುರದ ಹೊರವಲಯದ ಕೆ.ವಿ ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ನ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ರವರನ್ನು ಭೇಟಿ ಮಾಡಿದ್ದರು. ಇತ್ತೀಚಿಗಷ್ಟೆ ಕೆವಿ ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಡೇ ಅಂಗವಾಗಿ ದಾಖಲೆ ಸೃಷ್ಟಿಸಿದ ರಕ್ತದಾನ ಶಿಬಿರ ರಾಜ್ಯದಾದ್ಯಂತ ಸದ್ದು ಮಾಡಿದ್ದು, ಈ ವಿಚಾರವಾಗಿಯೇ (Kicha Sudeep) ಸುದೀಪ್ ಚಿಕ್ಕಬಳ್ಳಾಪುರಕ್ಕೆ ಬಂದು ನವೀನ್ ಕಿರಣ್ ರವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳಲ್ಲಿ ಕೆವಿ ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಡೇ ಅಂಗವಾಗಿ ದಾಖಲೆ ಸೃಷ್ಟಿಸಿದ ರಕ್ತದಾನ ಶಿಬಿರದ ರೂವಾರಿ ಮತ್ತು ಕೆ.ವಿ. ಹಾಗೂ ಪಂಚಗಿರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಕೆ.ವಿ. ನವೀನ್ ಕಿರಣ್ ರಾಜ್ಯದ ಗಮನವನ್ನು ಸೆಳೆದಿದ್ದರು. ಇದರ ಸಲುವಾಗಿಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆ.ವಿ. ಮತ್ತು ಪಂಚಗಿರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ನವೀನ್ ಕಿರಣ್ ಅವರ ಮನೆಗೆ (Kicha Sudeep) ಸುದೀಪ್ ಭೇಟಿ ನೀಡಿದ್ದು, ಹೈದರಾಬಾದ್‌ನಿಂದ ಕಾರಿನಲ್ಲಿ ಬಂದ ಅವರು, ಮಾರ್ಗ ಮಧ್ಯೆ ನವೀನ್ ಕಿರಣ್ ಅವರ ಮನೆಯಲ್ಲಿ ಭೋಜನವನ್ನು ಸವಿದು ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ನವೀನ್ ಕಿರಣ್ ಅವರು ತಮ್ಮ ಟ್ರಸ್ಟ್ ಡೇ ಅಂಗವಾಗಿ ರಾಜ್ಯದಾದ್ಯಂತ ಗಮನ ಸೆಳೆದಿದ್ದ ದಾಖಲೆ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು, ಇದು ಸುದೀಪ್ (Kicha Sudeep) ಅವರಿಗೆ ತಿಳಿದಿದ್ದು ಆದರಿಂದ ಅವರ ಈ ಸೇವೆಯನ್ನು ಗುರುತ್ತಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನವೀನ್ ಕಿರಣ್ ಅವರನ್ನು ಸನ್ಮಾನಿಸಿದರು.
(Kicha Sudeep) ಸುದೀಪ್ ಅವರ ಭೇಟಿ ತುಂಬಾ ಖಾಸಗಿಯಾಗಿ ನಡೆದಿದೆ, ಆದರೆ ಅಲ್ಲಿಯೇ ಇದ್ದ ಆನಂದ ಸ್ಟುಡಿಯೋ ಮಾಲೀಕರಾದ ಕೃಷ್ಣಾಚಾರಿ ಮತ್ತು ವಿಶ್ವನಾಥ್ ಅವರು (Kicha Sudeep) ಈ ಕ್ಷಣಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆಹಿಡಿದಿದ್ದಾರೆ. ಸುದೀಪ್ ಅವರ ಭೇಟಿ, ಆತಿಥ್ಯ ಸ್ವೀಕಾರ ಮತ್ತು ನವೀನ್ ಕಿರಣ್ ಅವರ ಮನೆಮಂದಿಯು ನೀಡಿದ ಗೌರವವು ಈ ಭೇಟಿಗೆ ಮತ್ತಷ್ಟು ಗೌರವವನ್ನು (Kicha Sudeep) ತಂದಿದೆ. ಈ ಸಂದರ್ಭದಲ್ಲಿ ಉದ್ಯಮಿ ಬಿ. ಮಹೇಶ್ ಮತ್ತು ಕೆಲವು ಸ್ಥಳೀಯ ಮುಖಂಡರು ಇದ್ದರು.