Sunday, October 26, 2025
HomeStateLoan Repayment : ಸಕಾಲಕ್ಕೆ ಸಾಲ ಮರುಪಾವತಿಸಿ, ಬೇರೆಯವರಿಗೆ ಸಾಲ ನೀಡಲು ಅವಕಾಶ ಮಾಡಿ :...

Loan Repayment : ಸಕಾಲಕ್ಕೆ ಸಾಲ ಮರುಪಾವತಿಸಿ, ಬೇರೆಯವರಿಗೆ ಸಾಲ ನೀಡಲು ಅವಕಾಶ ಮಾಡಿ : ಮಂಜುನಾಥರೆಡ್ಡಿ

Loan Repayment – ಸಹಕಾರ ಸಂಘಗಳಲ್ಲಿ ಸಾಲ ಪಡೆದಂತಹವರು ಸಕಾಲಕ್ಕೆ ಸಾಲ ಮರುಪಾವತಿಸಿದಾಗ ಬೇರೆ ರೈತರಿಗೂ ಸಾಲ ಕೊಡಬಹುದು ಜೊತೆಗೆ ಸಂಘವೂ ಸಹ ಅಭಿವೃದ್ದಿಯಾಗುತ್ತದೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್.ಮಂಜುನಾಥರೆಡ್ಡಿ ತಿಳಿಸಿದರು.

Kasaba Primary Agricultural Credit Cooperative Society annual general body meeting in Gudibande, loan repayment benefits farmers and cooperative growth

Loan Repayment – ಸಕಾಲದಲ್ಲಿ ಸಾಲ ಮರುಪಾವತಿಸಿ, ಇನ್ನೊಬ್ಬರಿಗೆ ನೆರವಾಗಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ಷೇರುದಾರರು ಹಾಗೂ ರೈತರ ಅಭಿವೃದ್ದಿಗಾಗಿ ಕೆಲಸ ಮಾಡುತ್ತವೆ. ಈ ಸಹಕಾರ ಸಂಘಗಳು ಅಭಿವೃದ್ದಿಯಾಗಬೇಕು, ಎಲ್ಲರಿಗೂ ಸಾಲಗಳು ನೀಡಬೇಕು ಎಂದಾದರೇ ಸಾಲ ತೆಗೆದುಕೊಂಡವರು ಸಕಾಲಕ್ಕೆ ಮರುಪಾವತಿ ಮಾಡಬೇಕು. ಆಗ ಎಲ್ಲರಿಗೂ ಸಾಲ ನೀಡಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೈತರಿಗೆ ಸಾಲ (Loan Repayment) ನೀಡಲು ಶ್ರಮಿಸಲಾಗುವುದು ಎಂದರು.

ಉಲ್ಲೋಡು-ಗುಡಿಬಂಡೆ ಸಹಕಾರಕ್ಕೆ ಒತ್ತು

ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಎಚ್.ಪಿ.ರಾಮನಾಥ್ ಮಾತನಾಡಿ, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘವನ್ನು ಉಲ್ಲೋಡು ಸಂಘವಾಗಿ ಬೇರ್ಪಡಿಸಬೇಕೆಂದು ಹಾಗೂ ಗುಡಿಬಂಡೆ ಪಟ್ಟಣಕ್ಕೆ ಪ್ರತ್ಯೇಕ ಸಂಘವನ್ನು ರಚಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಆದರೆ ಗುಡಿಬಂಡೆ ಪಟ್ಟಣದ ಜನತೆ ಮತ್ತು ಉಲ್ಲೋಡು ಜನತೆ ಅಣ್ಣತಮ್ಮಂದಿರ ರೀತಿಯಲ್ಲಿದ್ದು ಸಂಘವನ್ನು ಬೇರ್ಪಡಿಸದೇ ಅಭಿವೃದ್ದಿ ಮಾಡುವತ್ತ ಕೊಂಡಯ್ಯಬೇಕು (Loan Repayment) ಎಂದು ತಿಳಿಸಿದರು. Read this also : ರೈತರು ಹೈನುಗಾರಿಕೆ ಕೈಗೊಳ್ಳುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು : ಸುಮಂಗಳಮ್ಮ

ಆರ್ಥಿಕ ಲಾಭ ಗಳಿಸಿದ ಸಹಕಾರ ಸಂಘ

ನಂತರ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಜಿ.ಎಂ.ಬಾಬಾಫಕೃದ್ದೀನ್ ಮಾತನಾಡಿ2024-25ನೇ ಸಾಲಿನಲ್ಲಿ ಸಂಘಕ್ಕೆ 1.67 ಲಕ್ಷ ಲಾಭ ಬಂದಿದೆ. ಒಟ್ಟಾರೆಯಾಗಿ 4.58 ಲಕ್ಷ ಸಂಘ ಲಾಭದಲ್ಲಿದೆ.  ಇನ್ನು ಈಗಾಗಲೇ 355 ಸದಸ್ಯರಿಗೆ 3.11 ಕೋಟಿ ಸಾಲ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರಿಗೆ ಸಾಲ ನೀಡಲಾಗುತ್ತದೆ.  2024-5ನೇ ಸಾಲಿನ ಬಜೆಟ್‍ ಅನುಮೋದನೆ ಮತ್ತು 2025-26ನೇ ಸಾಲಿನ ಹಣಕಾಸಿನ ತಖ್ತೆಯನ್ನು ಓದಿ ಸಭೆಯಲ್ಲಿ ಅಂಗೀಕಾರ ಪಡೆದರು, 2025-26ಸಾಲಿನ ಲೆಕ್ಕ ಪರಿಶೋಧರನ್ನು ಆಯ್ಕೆ ಮಾಡುವ ವಿಚಾರ (Loan Repayment) ಸೇರಿ ಇತರೆ ವಿಷಯಗಳ ಬಗ್ಗೆ ಚರ್ಚಿಸಿ ಅನುಮೋದನೆ ಪಡೆದರು.

Kasaba Primary Agricultural Credit Cooperative Society annual general body meeting in Gudibande, loan repayment benefits farmers and cooperative growth

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಸ್.ವೆಂಕಟಾಚಲಪತಿ, ಸುರೇಂದ್ರರೆಡ್ಡಿ, ನರಸಿಂಹಮೂರ್ತಿ, ಶ್ರೀನಿವಾಸ, ಹುಸೇನ್, ಆದಿನಾರಾಯಣಪ್ಪ, ಶಾಂತಮ್ಮ, ಅರುಣಕುಮಾರಿ, ರಾಜಾರೆಡ್ಡಿ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular