ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವೀಡಿಯೋಗಳು ವೈರಲ್ ಆಗುತ್ತವೆ. ಆದರೆ, ಉತ್ತರ ಪ್ರದೇಶದ ಕಾನ್ಪುರದಿಂದ ಹೊರಬಿದ್ದಿರುವ ಈ ವೀಡಿಯೋ ಮಾತ್ರ (Kanpur Woman Assaults Home Guard) ನೆಟ್ಟಿಗರನ್ನು ಪೂರ್ತಿ ಕಂಗಾಲುಗೊಳಿಸಿದೆ. ಸಾರ್ವಜನಿಕರ ಹಂಗೂ ಇಲ್ಲದೆ, ನಡುರಸ್ತೆಯಲ್ಲೇ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ಗೆ ಮಹಿಳೆಯೊಬ್ಬರು ಸತತವಾಗಿ ಪಂಚ್ ನೀಡಿ, ಕೆನ್ನೆಗೆ ಹೊಡೆದಿರುವ ಘಟನೆ ಈಗ ಭಾರಿ ಸದ್ದು ಮಾಡುತ್ತಿದೆ.

Kanpur Woman Assaults Home Guard – ನಡುರಸ್ತೆಯಲ್ಲೇ ನಡೆದ ಹೈಡ್ರಾಮಾ
ಉತ್ತರ ಪ್ರದೇಶದ ಕಾನ್ಪುರದ ಗುಜೈನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕಾರ್ಗಿಲ್ ಪೆಟ್ರೋಲ್ ಪಂಪ್ ಹತ್ತಿರದ ನ್ಯಾಷನಲ್ ಹೈವೇ ಅಂಡರ್ಪಾಸ್ ಬಳಿ ಹೋಂ ಗಾರ್ಡ್ ಟ್ರಾಫಿಕ್ ಹಾಗೂ ಶಾಂತಿ ಸುವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಮಹಿಳೆಯೊಬ್ಬರು, ಯಾವುದೇ ಮುನ್ಸೂಚನೆ ಇಲ್ಲದೆ ಹೋಂ ಗಾರ್ಡ್ನ ಯುನಿಫಾರ್ಮ್ ಕಾಲರ್ ಹಿಡಿದು ಗಲಾಟೆ ಆರಂಭಿಸಿದ್ದಾರೆ.
ಮೊಬೈಲ್ ಕ್ಯಾಮೆರಾದಲ್ಲಿ ಸೀನ್ ಲಾಕ್
ಕ್ಷಣಾರ್ಧದಲ್ಲೇ ಮಾತು ಬೆಳೆದು, ಮಹಿಳೆ ಹೋಂ ಗಾರ್ಡ್ ಮೇಲೆ ಸಾರ್ವಜನಿಕವಾಗಿಯೇ ಕೈಮಾಡಲು ಶುರುಮಾಡಿದ್ದಾರೆ. ಕೆನ್ನೆಗೆ ಹೊಡೆಯುವುದು, ಕಾಲಿನಿಂದ ಒದೆಯುವುದು ಮತ್ತು ಪಿಡಿಗುದ್ದಿನಿಂದ ಹಲ್ಲೆ (Kanpur Woman Assaults Home Guard) ನಡೆಸಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. Read this also : ಸೂರತ್ನಲ್ಲಿ ಕಿಟಕಿ ಮೂಲಕ ನುಗ್ಗಿ ಆತ್ಮ**ತ್ಯೆ ತಡೆದ ರಿಯಲ್ ಹಿರೋ ಕಾನ್ಸ್ಟೆಬಲ್!
ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಮೇಲೆಯೇ ಹೀಗೆ ದಾಳಿ ನಡೆಯುತ್ತಿರುವುದನ್ನು ಕಂಡ ದಾರಿಹೋಕರು ದಿಗ್ಭ್ರಾಂತರಾಗಿದ್ದಾರೆ. ತಕ್ಷಣವೇ ಸಾರ್ವಜನಿಕರು ತಮ್ಮ ಮೊಬೈಲ್ಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದು, ಈ ಗಲಾಟೆಯಿಂದಾಗಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಅಷ್ಟಕ್ಕೂ ಗಲಾಟೆಗೆ ಕಾರಣವೇನು?
ಈ ಘಟನೆಯ ಹಿಂದಿನ ಅಸಲಿ ಕಾರಣವೇನು ಎಂಬುದರ ಬಗ್ಗೆ ಈಗ ಎರಡು ವಿಭಿನ್ನ ವಾದಗಳು ಕೇಳಿಬರುತ್ತಿವೆ:
- ಮಹಿಳೆಯ ಆರೋಪ: ಹೋಂ ಗಾರ್ಡ್ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ, ಅದಕ್ಕಾಗಿಯೇ ಕೋಪಗೊಂಡು ಆತನಿಗೆ ಬುದ್ಧಿ ಕಲಿಸಿರುವುದಾಗಿ ಮಹಿಳೆ ಹೇಳುತ್ತಿದ್ದಾಳೆ.
- ಪೊಲೀಸರ ವರ್ಷನ್: ಆದರೆ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಸ್ತೆಯಲ್ಲಿ ನಡೆದ ಸಣ್ಣ ಅಪಘಾತವೇ ಈ ಇಡೀ ಗಲಾಟೆಗೆ ಮೂಲ ಕಾರಣ. ಅಪಘಾತದಿಂದ ಆಕ್ರೋಶಗೊಂಡ ಮಹಿಳೆ ಈ ರೀತಿ ವರ್ತಿಸಿದ್ದಾಳೆ ಎನ್ನಲಾಗಿದೆ.

ಮಹಿಳೆಯ ಮುಖಕ್ಕೆ ಸ್ಕಾರ್ಫ್: ಪತ್ತೆಗೆ ತನಿಖೆ
ವಿಡಿಯೋದಲ್ಲಿ (Viral Video Link Here) ಮಹಿಳೆಯು ತನ್ನ ಮುಖವನ್ನು ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾಳೆ. ಹೀಗಾಗಿ ಆಕೆಯ ಗುರುತು ತಕ್ಷಣಕ್ಕೆ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸಿಪಿ (ACP), ವೈರಲ್ ವಿಡಿಯೋವನ್ನು (Kanpur Woman Assaults Home Guard) ಮುಖ್ಯ ಸಾಕ್ಷಿಯಾಗಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಪೊಲೀಸರು ಹೇಳುವುದೇನು?
ಇಷ್ಟೆಲ್ಲಾ ರಂಪಾಟ ನಡೆದಿದ್ದರೂ, ಇಲ್ಲಿಯವರೆಗೆ (Kanpur Woman Assaults Home Guard) ಘಟನೆಗೆ ಸಂಬಂಧಿಸಿದಂತೆ ಇಬ್ಬರ ಕಡೆಯಿಂದಲೂ ಯಾವುದೇ ಲಿಖಿತ ದೂರು ಬಂದಿಲ್ಲದಿರುವುದು ಅಚ್ಚರಿಯ ಸಂಗತಿ. ದೂರು ಸಲ್ಲಿಕೆಯಾದ ತಕ್ಷಣ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಈ ಘಟನೆ ಕಾನ್ಪುರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
