ಸಮಾಜ ಬಾಹಿರ ಚಟುವಟಿಕೆಯಿಂದ ದೂರ ಇದ್ದು, ಸಮಾಜ ಕಟ್ಟುವ ಚಟುವಟಿಕೆಗಳ ಕಡೆ ಹೆಚ್ಚು ಗಮನ ಹರಿಸಿ ನವ ಸಮಾಜ ನಿರ್ಮಾಣ ಮಾಡಬೇಕು ಎಂದು ತಹಶೀಲ್ದಾರ್ ಸಿಗ್ಬತ್ತುಲ್ಲಾ ಯುವಕ, ಯುವತಿಯರಿಗೆ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಹಬ್ಬ-2024 ರ (Kannada Habba) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಯುವಕರೇ ಹೆಚ್ಚು ಸಮಾಜ ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇದರಿಂದ ತಂದೆ, ತಾಯಿ ಸೇರಿದಂತೆ ಕುಟುಂಬ ಮಂದಿಯು ಕಣ್ಣೀರು ಸುರಿಸುವುದು ಬೇಡ. (Kannada Habba) ಜನ್ಮ ನೀಡಿದ ತಾಯಿ, ತಂದೆಯವರನ್ನು ಶುಶ್ರೂಷೆ ಮಾಡಬೇಕು. ಕಷ್ಟಪಟ್ಟು ಓದಿಸಿ, ದೊಡ್ಡವರಾದ ಮೇಲೆ ಕೆಲ ಮಕ್ಕಳು ಪೋಷಕರನ್ನು ಅನಾಥಾಶ್ರಮಗಳನ್ನು ಇರಿಸಿರುವುದು ಬಹಳ ನೋವು ತಂದಿದೆ. (Kannada Habba) ಮಕ್ಕಳು ಯಾವುದೇ ಕಾರಣಕ್ಕೂ ಹಿರಿಯರನ್ನು ಅನಾಥಾಶ್ರಮಗಳಿಗೆ ಕಳಿಸಬಾರದು. ಸಮಾಜ ಬಾಹಿರ ಚಟುವಟಿಕೆಗಳಿಂದ ದೂರ ಇರಬೇಕು. ಸಮಾಜ ಕಟ್ಟುವ ಗಮನ ಹರಿಸಬೇಕು. ಇದರಿಂದ ನವ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದರು.
ರಾಯಲಸೀಮೆಯ (Kannada Habba) ಆಂಧ್ರಪ್ರದೇಶದ ಗಡಿಯ ತಾಲ್ಲೂಕಿನಲ್ಲಿ ತೆಲುಗು ಆಡುಭಾಷೆ ಆಗಿದೆ. ವ್ಯವಹಾರಿಕ ಭಾಷೆ ಕನ್ನಡ ಆಗಿದೆ. ಶಾಲೆ, ಕಾಲೇಜು, ಕಚೇರಿಗಳಲ್ಲಿ ಹಾಗೂ ವ್ಯವಹಾರಿಕವಾಗಿ ಎಲ್ಲರೂ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ದೇಶೀಯ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳಿಸಬೇಕು. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಅನ್ಯ ರಾಜ್ಯದವರು ಬ್ಯಾಂಕುಗಳು ಸೇರಿದಂತೆ ವಿವಿಧ ಕಚೇರಿಗಳಿಗೆ ಆಯ್ಕೆ ಆಗಿದ್ದಾರೆ. ಇದರಿಂದ ರಾಜ್ಯದ ಯುವಕ, (Kannada Habba) ಯುವತಿಯರಿಗೆ ಮೋಸ ಆಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿದ್ಯಾರ್ಥಿ ದೆಸೆಯಲ್ಲಿ ಓದಿದರೆ ಮುಂದಿನ ಜೀವನ ಸಾರ್ಥಕತೆ ಪಡೆಯಲಿದೆ ಎಂದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ನಯಾಜ್ ಅಹಮದ್ ಮಾತನಾಡಿ, (Kannada Habba) ಶ್ರೀಲಂಕಾದಲ್ಲಿ ತಮಿಳರ ಮೇಲೆ ದಾಳಿ ಮಾಡಿದರೆ, ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗಳು ಆಗಲಿದೆ. ತಮಿಳುನಾಡು, ಕೇರಳ, ಮಹಾರಾಷ್ಟ ರಾಜ್ಯಗಳಲ್ಲಿ ಆಯಾಯ ಭಾಷೆ ಹೊರತು ಪಡಿಸಿದರೆ ಅನ್ಯಭಾಷೆ ಮಾತಾಡಲ್ಲ. (Kannada Habba) ಎಲ್ಲಾ ವರ್ಗದವರು ದಿನಪತ್ರಿಕೆಗಳನ್ನು ಖರೀದಿ ಮಾಡಿ ಓದುತ್ತಾರೆ. ಆದರೆ ಕನ್ನಡಿಗರು ಅನ್ಯ ಭಾಷೆಗಳಲ್ಲಿ ಮಾತನಾಡುತ್ತಾರೆ. ಕನ್ನಡ ಭಾಷೆಯನ್ನು ಮರೆಯುತ್ತಾರೆ. ವ್ಯಾಪಾರ ಹೆಸರಿನಲ್ಲಿ ಅನ್ಯರಾಜ್ಯದವರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರ ತಿಂಡಿತಿನಿಸುಗಳು, (Kannada Habba) ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿತ್ತನೆ ಮಾಡಿದ್ದಾರೆ. ಇದರಿಂದ ದೇಶೀಯ, ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಅವನತಿಯತ್ತ ಹೊರಟಿದೆ. ಮುಖ್ಯರಸ್ತೆಗಳಲ್ಲಿ ಫಿಜ್ಜಾ, ಬರ್ಗರ್ ನಂತಹ ವಿದೇಶೀಯ ಅಂಗಡಿಗಳು ಎತ್ತಿದ್ದು, ಸ್ವದೇಶಿಯ ತಿಂಡಿತಿನಿಸುಗಳು ಮಾಯವಾಗುತ್ತಿದೆ ಎಂದು ವಿಷಾದಿಸಿದರು.
ಕಾಲೇಜಿನ ಪ್ರಾಂಶುಪಾಲ ಆಫ್ಜಲ್ ಬಿಜಲಿ ಮಾತನಾಡಿ, ಸರ್ವೀಯ ಧರ್ಮದವರು ದೀಪಾವಳಿ, ಯುಗಾದಿ, ಬಕ್ರೀದ್, ರಂಜಾನ್, ಕ್ರಿಸಮಸ್, ಗುರುನಾನಕ್ ರವರ ಹಬ್ಬಗಳು ಆಚರಣೆ ಮಾಡುತ್ತಾರೆ. ಆದರೆ ಎಲ್ಲರೂ ಒಗ್ಗಟ್ಟಾಗಿ ಆಚರಣೆ ಮಾಡುವುದು ಹಬ್ಬದಂತೆ ಇರುತ್ತದೆ. ಇದರಿಂದ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಬ್ಬ-2024 (Kannada Habba) ಕಾರ್ಯಕ್ರಮ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮನೆಯಲ್ಲಿ ತಯಾರಿಸಿದ ಖಾದ್ಯಗಳ ಪ್ರದರ್ಶನ, ಸಾಮೂಹಿಕವಾಗಿ ತಿಂಡಿತಿನಿಸುಗಳ ಸೇವನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ (Kannada Habba) ಪ್ರೊ.ವೈ.ನಾರಾಯಣ ಸ್ವದೇಶಿ ತಿಂಡಿತಿನಿಸುಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಕಾಲೇಜಿನ ಹಿರಿಯ ಗ್ರಂಥಪಾಲಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಮಂಜುನಾಥ್, ಪ್ರಾಧ್ಯಾಪಕರಾದ ಬಿ.ಕೃಷ್ಣಪ್ಪ, ಶ್ರೀನಾಥ್, ವಿನೋದಮ್ಮ, ವಿಜಯಕುಮಾರ್ ಮತ್ತಿತರರು ಇದ್ದರು.