ಬಾಗೇಪಲ್ಲಿ: ಮನುಷ್ಯನ ಜೀವನ ಹಾಳು ಮಾಡುವ ಕೋಪ, ಅಸೂಯೆ, ಧ್ವೇಷ ಮತ್ತು ಸೇಡು ಇವುಗಳಿಂದ ದೂರ ಉಳಿದಾಗ ಮಾತ್ರ ಮನುಷ್ಯರು ಸಂತೋಷದಿಂದ ಜೀವನ ಸಾಗಿಸಲು ಸಾದ್ಯ (Bagepalli News) ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶೆ ಎಂ.ಭಾರತಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ (Bagepalli News) ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಲೋಕಾ ಅದಾಲತ್ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಅರ್ಜಿಗಳನ್ನು ಪರಿಶೀಲಿಸಿ, ತಾಲೂಕಿನ ವಿವಿಧ 6 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯಾರ್ಥಗೊಳಿಸಿದ್ದಾರೆ. ತಾಲೂಕಿನಲ್ಲಿ 6 ಕಕ್ಷಿದಾರರು ವಿವಾಹ ವಿಚ್ಚೇಧನಕ್ಕಾಗಿ ಕೋರ್ಟ್ ಮೆಟ್ಟಲೇರಿ ಹಲವು ವರ್ಷಗಳಿಂದ ದಾಂಪತ್ಯ ಜೀವನದಿಂದ ದೂರ ಉಳಿದಿದ್ದಾರೆ. ವಿವಾಹ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಲಾಗಿದ್ದ ಪ್ರತೇಕ 3 ಪ್ರಕರಣಗಳನ್ನು ರಾಜಿ ಸಂಧಾನ ಮಾಡುವ ಮೂಲಕ ಹಲವು ವರ್ಷಗಳಿಂದ ದಾಂಪತ್ಯ ಜೀವನದಿಂದ ದೂರ ಉಳಿದ್ದ ದಂಪತಿಗಳನ್ನು ಒಂದುಗೂಡಿಸುವಲ್ಲಿ ಹಿರಿಯ ಶ್ರೇಣಿಯ ನ್ಯಾಯಾಧೀಶೆ ಎಂ. ಭಾರತಿ ರವರು ಅನುವು ಮಾಡಿಕೊಟ್ಟಿದ್ದಾರೆ ಅಲ್ಲದೆ ದಾಂಪತ್ಯ ಜೀವನದಿಂದ ದೂರ ಉಳಿದಿಂದ ದಂಪತಿಗಳಿಗೆ ಸಿಹಿ ತಿನ್ನಿಸಿ ಹೂವಿಹಾರ ಹಾಕಿ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡ, ಹಿರಿಯ ವಕೀಲರಾದ ಜೆ.ಎನ್.ನಂಜಪ್ಪ, ಅಲ್ಲಾಭಕಾಷ್, ಎ.ಜಿ.ಸುಧಾಕರ್, ವಿ.ನಾರಾಯಣಪ್ಪ, ಚಂದ್ರಶೇಖರ್, ಪಯಾಜ್ ಭಾಷಾ,ಮಂಜುನಾಥ್, ರವಣ ಮತ್ತಿತರರು ಇದ್ದರು.