ಸ್ಮಾರ್ಟ್ ಪೋನ್ ಜಗತ್ತಿನಲ್ಲಿ ತುಂಬಾ ಕ್ರೇಜ್ ಹೊಂದಿರುವ ಹಾಗೂ ದುಬಾರಿ ಸ್ಮಾರ್ಟ್‌ಪೋನ್ ಎಂದೇ ಕರೆಯಲಾಗುವ ಆಪಲ್ ಕಂಪನಿ ಮೊಬೈಲ್ ಸೆಕ್ಯೂರಿಟಿ ಪರವಾಗಿ ಸಹ ತುಂಬಾನೆ ಫೇಮಸ್ ಆಗಿದೆ ಎಂದು ಹೇಳಬಹುದು. ಸದ್ಯ ಆಪಲ್ ಐಪೋನ್ 16 ಸರಣಿಯ (Iphone 16 Series) ಪೋನ್ ಗಳು ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಗೊಳಿಸಿದೆ. ಈ ಪೋನ್ ಗಳನ್ನು ಇಂದಿನಿಂದ (ಸೆ.13) ರಿಂದ ಬುಕ್ಕಿಂಗ್ ಮಾಡಬಹುದಾಗಿದೆ.
ಆಪಲ್ ಕಂಪನಿಯ ಬಹುನಿರೀಕ್ಷಿತ ಆಪಲ್ ಐಪೋನ್ 16 ಸರಣಿಯ (Iphone 16 Series) ಪೋನ್ ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಪಲ್ ಐಪೋನ್ 16 ಸರಣಿಯ (Iphone 16 Series) 4 ಹೊಸ ಮಾದರಿಯ ಪೋನ್ ಗಳನ್ನು ವಿಶ್ವಕ್ಕೆ ಪರಿಚಯಿಸಿತ್ತು. ಈ ಪೋನ್ ಗಳನ್ನು ಸೆ.13 ರಿಂದ ಬುಕ್ಕಿಂಗ್ ಆರಂಭವಾಗಲಿದೆ. ಸೆ.20 ರಿಂದ ಮಾರಾಟ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಇನ್ನೂ ಆಪಲ್ ಐಪೋನ್ 16 ಸರಣಿಯ (Iphone 16 Series) ಪೋನ್ ಗಳನ್ನು ಯಾವ ರೀತಿ ಪ್ರೀ ಬುಕ್ಕಿಂಗ್ ಮಾಡಿಕೊಳ್ಳಬೇಕು ಎಂಬ ವಿಚಾರಕ್ಕೆ ಬಂದರೇ, ಆಪಲ್ ಇಂಡಿಯಾ ವೆಬ್ ಸೈಟ್, ಅಮೇಜಾನ್, ಫ್ಲಿಪ್ ಕಾರ್ಟ್ ಗಳಂತಹ ಇ-ಕಾಮರ್ಸ್ ಫ್ಲಾಟ್ ಫಾರ್ಮ್‌ಗಳಿಂದ ಈ ಪೋನ್ ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಸೆ.20 ರಿಂದ ಈ ಹೊಸ ಆಪಲ್ ಐಪೋನ್ 16 ಸರಣಿಯ (Iphone 16 Series) ಪೋನ್ ಗಳ ಮಾರಾಟ ಆರಂಭವಾಗಲಿದೆ.
ಆಪಲ್ ಐಪೋನ್ 16 ಸರಣಿಯ (Iphone 16 Series) ಪೋನ್ ಗಳ ಬೆಲೆ ಎಷ್ಟು ಗೊತ್ತಾ?
Model | Storage | Price |
iPhone 16 | 128GB | Rs 79,900 |
iPhone 16 | 256GB | Rs 89,900 |
iPhone 16 | 512GB | Rs 1,09,900 |
iPhone 16 Plus | 128GB | Rs 89,900 |
iPhone 16 Plus | 256GB | Rs 99,900 |
iPhone 16 Plus | 512GB | Rs 1,19,900 |
iPhone 16 Pro | 128GB | Rs 1,19,900 |
iPhone 16 Pro | 256GB | Rs 1,29,900 |
iPhone 16 Pro | 512GB | Rs 1,49,900 |
iPhone 16 Pro | 1TB | Rs 1,69,900 |
iPhone 16 Pro Max | 256GB | Rs 1,44,900 |
iPhone 16 Pro Max | 512GB | Rs 1,64,900 |
iPhone 16 Pro Max | 1TB | Rs 1,84,900 |
ಇನ್ನೂ ಭಾರತದಲ್ಲಿ ಐಪೋನ್ ಬೆಲೆ ಜಾಸ್ತಿಯಿರುತ್ತದೆ. ಭಾರತದಲ್ಲಿಯೇ ಐಪೋನ್ ಉತ್ಪಾದನೆಯಾದರೂ ಸಹ ಕೆಲವೊಂದು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ಆ ವಸ್ತುಗಳು ಭಾರತಕ್ಕೆ ಆಮದು ಆಗುತ್ತಿದೆ. ಆಮದು ಮಾಡಿಕೊಳ್ಳುವಂತಹ ವಸ್ತುಗಳಿಗೆ ತೆರಿಗೆ ಹಾಕುವ ಕಾರಣದಿಂದ ಐಪೋನ್ ಬೆಲೆ ಏರಿಕೆ ಆಗಿದೆ. ಜೊತೆಗೆ ಪೋನ್ ಗಳ ಮೇಲಿನ ಜಿ.ಎಸ್.ಟಿ ಶೇ.18 ಹಾಗೂ ಅಬಕಾರಿ ಸುಂಕವನ್ನು ಹಾಕುವ ಕಾರಣದಿಂದ ಪೋನ್ ಬೆಲೆ ಶೇ.35 ರಷ್ಟು ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.