Google Search – ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಯಾವುದೇ ಮಾಹಿತಿ ಬೇಕಿದ್ದರೂ ನಾವು ಮೊದಲು ಕೈಗೆತ್ತಿಕೊಳ್ಳುವುದು ಗೂಗಲ್ (Google). ಸಾಮಾನ್ಯ ಜ್ಞಾನದಿಂದ ಹಿಡಿದು ವೈಯಕ್ತಿಕ ಮಾಹಿತಿ, ವಸ್ತುಗಳು, ಸ್ಥಳಗಳು, ಉದ್ಯೋಗ ಹೀಗೆ ಎಲ್ಲದರ ಬಗ್ಗೆಯೂ ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತೇವೆ. ಆದರೆ, ನಿಮಗೆ ಗೊತ್ತಾ? ಕೆಲವು ನಿರ್ದಿಷ್ಟ ಪದಗಳನ್ನು ಗೂಗಲ್‌ನಲ್ಲಿ ಸರ್ಚ್ (Google Search) ಮಾಡಿದರೆ ನೀವು ಅಪಾಯಕ್ಕೆ ಸಿಲುಕಬಹುದು, ಮತ್ತು ಜೈಲು ಪಾಲಾಗಬಹುದು.
ತಂತ್ರಜ್ಞಾನದ ಪ್ರಗತಿಯ ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳೂ ಹೆಚ್ಚುತ್ತಿವೆ. ಸೈಬರ್ ಕ್ರೈಂ ತನಿಖಾ ಸಂಸ್ಥೆಗಳು ಇಂತಹ ಚಟುವಟಿಕೆಗಳನ್ನು ತಡೆಯಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಗೂಗಲ್‌ನ ಅಲ್ಗಾರಿದಮ್‌ಗಳು (Google Algorithms) ಸಹ ಕಾನೂನುಬಾಹಿರ ವಿಷಯಗಳ ಹುಡುಕಾಟವನ್ನು ಪತ್ತೆಹಚ್ಚಿ, ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡುತ್ತವೆ.
Google Search – ನೀವು ಅಪ್ಪಿತಪ್ಪಿಯೂ ಗೂಗಲ್‌ನಲ್ಲಿ ಹುಡುಕಬಾರದ ವಿಷಯಗಳು
ಗಮನಿಸಿ, ಕೆಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಿದರೆ, (Google Search) ಅದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಇಂತಹ ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಅವಶ್ಯಕ.
- ATM ಹ್ಯಾಕಿಂಗ್ ಮತ್ತು ನಕಲಿ ನೋಟುಗಳು: ಎಟಿಎಂ ಹ್ಯಾಕಿಂಗ್ ತಂತ್ರಗಳು ಅಥವಾ ನಕಲಿ ನೋಟುಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಸರ್ಚ್ ಮಾಡುವುದು ಕಾನೂನುಬಾಹಿರ. ಇಂತಹ ಮಾಹಿತಿಗಳನ್ನು ಹುಡುಕಿದರೆ, ನೀವು ತನಿಖಾ ಸಂಸ್ಥೆಗಳ ಕಣ್ಣಿಗೆ ಬೀಳಬಹುದು.
- ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಹ್ಯಾಕಿಂಗ್ ಟ್ರಿಕ್ಸ್: ಇತರರ ಮೊಬೈಲ್ ಅಥವಾ ಸಾಮಾಜಿಕ ಮಾಧ್ಯಮ ಅಕೌಂಟ್ ಹ್ಯಾಕ್ ಮಾಡುವುದು ಅಥವಾ ಅದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಹುಡುಕಾಟ ನಡೆಸುವುದು ಕಾನೂನಿನ ದೃಷ್ಟಿಯಲ್ಲಿ ದೊಡ್ಡ ಅಪರಾಧ. ಇಂತಹ ವರ್ತನೆಗೆ ಕಠಿಣ ಶಿಕ್ಷೆಗಳು ಕಾದಿರುತ್ತವೆ.
- ಬಾಂಬ್, ಬಂದೂಕು ಮತ್ತು ಮದ್ದುಗುಂಡು ತಯಾರಿಕೆ: ಗೂಗಲ್‌ನಲ್ಲಿ (Google Search) ಶಸ್ತ್ರಾಸ್ತ್ರ, ಬಾಂಬ್ ಅಥವಾ ಮದ್ದುಗುಂಡುಗಳನ್ನು ಹೇಗೆ ತಯಾರಿಸುವುದು ಅಥವಾ ಎಲ್ಲಿ ಪಡೆಯುವುದು ಎಂಬುದರ ಬಗ್ಗೆ ಹುಡುಕುವುದು ಅತ್ಯಂತ ಅಪಾಯಕಾರಿ. ಈ ರೀತಿ ಹುಡುಕಾಟ ನಡೆಸಿದರೆ ನಿಮ್ಮ ಮೇಲೆ ಗಂಭೀರ ಕೇಸ್ ದಾಖಲಾಗುವ ಸಾಧ್ಯತೆ ಇದೆ.
- ಮಕ್ಕಳ ಅಶ್ಲೀಲ ಕಂಟೆಂಟ್: ಮಕ್ಕಳ ಅಶ್ಲೀಲ ಕಂಟೆಂಟ್ (Child Pornography) ಹುಡುಕುವುದು ಅಥವಾ ಅದನ್ನು ವೀಕ್ಷಿಸುವುದು ಜಗತ್ತಿನಾದ್ಯಂತ ಅತ್ಯಂತ ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ನಿಮ್ಮ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ.
Google Search – ನಿಮ್ಮ ಆನ್‌ಲೈನ್ ಸುರಕ್ಷತೆಗೆ ಕೆಲವು ಸಲಹೆಗಳು
ನಿಮ್ಮ ಆನ್‌ಲೈನ್ ಹುಡುಕಾಟವನ್ನು ಜವಾಬ್ದಾರಿಯುತವಾಗಿ ಬಳಸುವುದು ಬಹಳ ಮುಖ್ಯ. ಯಾವುದೇ ಮಾಹಿತಿಗಾಗಿ ಹುಡುಕುವಾಗ, ಅದರ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಕಾನೂನುಬಾಹಿರ ಮತ್ತು ಅನೈತಿಕ ವಿಷಯಗಳಿಂದ ದೂರವಿರುವುದು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. Read this also : ಗೂಗಲ್‌ನಿಂದ ಕ್ರಾಂತಿಕಾರಿ AI ಫೀಚರ್ಸ್: ಗಂಟೆಗಟ್ಟಲೆ ಹುಡುಕಾಟಕ್ಕೆ ಇನ್ನು ತೆರೆ…!
ಯಾಕೆ ಈ ನಿಯಮ?
ಗೂಗಲ್ ತನ್ನ ಬಳಕೆದಾರರಿಗೆ ಸುರಕ್ಷಿತ ವಾತಾವರಣ ಒದಗಿಸಲು ಬದ್ಧವಾಗಿದೆ. ಗೂಗಲ್ ತನ್ನ ಅಲ್ಗಾರಿದಂಗಳನ್ನು ಈ ರೀತಿಯ ಕಾನೂನುಬಾಹಿರ ಹುಡುಕಾಟಗಳನ್ನು ಪತ್ತೆಹಚ್ಚಲು ಮತ್ತು ಅಧಿಕಾರಿಗಳಿಗೆ ವರದಿ ಮಾಡಲು ಬಳಸುತ್ತದೆ. (Google Search) ನೀವು ಈ ರೀತಿ ವಿಷಯಗಳನ್ನು ಹುಡುಕಿದಾಗ, ತನಿಖಾ ಸಂಸ್ಥೆಗಳು ನಿಮ್ಮ ಐಪಿ ಅಡ್ರೆಸ್ ಮತ್ತು ಇತರ ಮಾಹಿತಿಯನ್ನು ಪತ್ತೆ ಹಚ್ಚಿ, ನಿಮ್ಮ ಮೇಲೆ ಕೇಸ್ ದಾಖಲಿಸಬಹುದು. ಆದ್ದರಿಂದ, ಗೂಗಲ್‌ನಲ್ಲಿ ಏನೇ ಹುಡುಕಿದರೂ, ಅದು ಕಾನೂನಿನ ಎಲ್ಲೆಯನ್ನು ದಾಟದಂತೆ ನೋಡಿಕೊಳ್ಳುವುದು ಉತ್ತಮ.