Friday, November 22, 2024

Human Trafficking: ಮಾನವ ಕಳ್ಳ ಸಾಗಣೆ ಪರಿಣಾಮಕಾರಿಯಾಗಿ ತಡೆಗಟ್ಟಬೇಕಿದೆ: ನ್ಯಾ. ಕೆ.ಎಂ. ಹರೀಶ್

ಗುಡಿಬಂಡೆ: ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ (Human Trafficking) ಮಾನವ ಕಳ್ಳ ಸಾಗಾಣಿಕೆ ಮಾಡುವುದು ಕಾನೂನು ಬಾಹಿರವಾಗಿದ್ದು ಇಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಿದೆ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.‌ಸಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕೆ.ಎಂ.ಹರೀಶ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ (Human Trafficking) ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಆಸೆ ಆಮಿಷಗಳಿಗೆ ಒಳಗಾದರೆ, ಮಕ್ಕಳು ಅರಿವಿಲ್ಲದೇ ಮಾನವ ಸಾಗಾಣಿಕೆಗೆ ಒಳಗಾಗುತ್ತಾರೆ.  ಮಹಿಳೆಯರು ಹೊರ ಹೋಗಬೇಕಾದರೆ ಒಂಟಿಯಾಗಿ ಹೋಗದೆ ಇನ್ನೊಬ್ಬರ ಒಡಗೂಡಿ ಎಚ್ಚರಿಕೆಯಿಂದ ಇದ್ದರೆ ಮಾನವ ಕಳ್ಳ ಸಾಗಾಣಿಕೆಗೆ (Human Trafficking) ಬಲಿಯಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.

Human Traffiking program at gudibande 1

(Human Trafficking) ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚು ಮಾಡುತ್ತಾರೆ. ಅವರನ್ನು ಅಪರಣ ಮಾಡಿ ಮಕ್ಕಳನ್ನು ಭಿಕ್ಷೆ ಬೇಡಲು, ಜೀತಕ್ಕೆ ದೂಡುವುದು, ವೈಶ್ಯಾವಾಟಿಕೆಗೆ ಬಳಸುವುದು, ಅಕ್ರಮ ಚಟುವಟಿಕೆಗಳಿ ಬಳಸಿಕೊಳ್ಳುವು ಕಳ್ಳ ಸಾಗಾಣಿಕೆಯ ಉದ್ದೇಶವಾಗಿರುತ್ತದೆ. ಇತ್ತೇಚೆಗೆ ಇಂತಹ ಪ್ರಕರಣಗಳು ಕಡಿಮೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ನೂತನ ಕಾಯ್ದೆಗಳ ಬಂದ ನಂತರ ಕ್ರಮ ಕೈಕೊಳತ್ತಿರುವುದರಿಂದ ಇಂತಹ ಪ್ರಕರಣಗಳು ಕಡೆಮೆಯಾಗಿದ್ದು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲಾಗಿದೆ. ಬಡವರು ಮತ್ತು ನಿರ್ಗತಿಕರು ಭಿಕ್ಷೆ ಬೇಡುವವರು ಮಕ್ಕಳನ್ನೇ ಗುರಿಯಾಗಿಸಿಕೊಂಡು ಅಪಹರಿಸುವ ಜಾಲಗಳು ಹೆಚ್ಚು. (Human Trafficking)  ಮಕ್ಕಳ ಅಂಗಾಂಗಗಳನ್ನು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಹೀನ ಕೃತ್ಯ ತಪ್ಪಿಸುವುದು ನಾಗರೀಕ ಸಮಾಜದ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಳ್ಳಸಾಗಾಣಿಕೆ ತಡೆ (Human Trafficking)  ವಿಷಯಗಳ ಬಗ್ಗೆ ಸಿಡಿಪಿಓ ಜಿ.ಎಂ.ರಫೀಕ್  ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು  ವಕೀಲರ ಸಂಘದ ಅಧ್ಯಕ್ಷ ರಾಮನಾಥರೆಡ್ಡಿ, ಉಪಾಧ್ಯಕ್ಷ ನಂದೀಶ್ವರ ರೆಡ್ಡಿ,  ಸರ್ಕಾರಿ ಅಭಿಯೋಜಕ ರಾಮಮೂರ್ತಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್, ವಕೀಲರಾದ ಚೇತನ್, ಶ್ರಾವಣಿ, ಮಮತ, ನ್ಯಾಯಾಲಯದ ಸಿಬ್ಬಂದಿ, ಗ್ರೀನ್ ಸಲ್ಯೂಷನ್ ಕಂಪ್ಯೂಟರ್ ಸಂಸ್ಥೆಯ ವಿದ್ಯಾರ್ಥಿಗಳು ಕಕ್ಷಿದಾರರು ಹಾಗೂ ಸಾರ್ವಜನಿಕ ಭಾಗವಹಿಸಿದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!