Hubballi – ಕೆಲವು ದಿನಗಳ ಹಿಂದೆಯಷ್ಟೆ 18 ವರ್ಷದ ಯುವತಿ ಹಾಗೂ 50 ವರ್ಷದ ಅಂಕಲ್ ಜೊತೆ ಪರಾರಿಯಾಗಿದ್ದಳು. ಕಳೆದೆರಡು ದಿನಗಳ ಹಿಂದೆಯಷ್ಟೆ ಅಂಕಲ್ ಯುವತಿಯನ್ನು ದೇವಾಲಯವೊಂದರಲ್ಲಿ ಮದುವೆಯಾಗಿದ್ದ. ಈ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಪರಾರಿಯಾದ ಯುವತಿ ವಾಪಸ್ ಬಂದಿದ್ದು, ಅಂಕಲ್ ವಿರುದ್ದ ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿದ್ದಾಳೆ.
18 ವರ್ಷದ ಯುವತಿ ಕರೀಷ್ಮಾ ಹಾಗೂ 50 ವರ್ಷದ ಅಂಕಲ್ ಪ್ರಕಾಶ್ ಲವ್ ಮ್ಯಾರೇಜ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹುಬ್ಬಳಿ ಮೂಲದ ಪ್ರಕಾಶ್ ಎಂಬ 50 ವರ್ಷದ ವ್ಯಕ್ತಿ ತನ್ನ ಮಗಳ ವಯಸ್ಸಿನ ಅಂದರೇ 18 ವರ್ಷ ವಯಸ್ಸಿನ ಕರೀಷ್ಮಾ ಎಂಬಾಕೆಯೊಂದಿಗೆ ಪರಾರಿಯಾಗಿದ್ದ. ಅಜ್ಜಿ ಮನೆಗೆ ಹೋಗಿದ್ದ ಕರೀಷ್ಮಾ ನಾಪತ್ತೆಯಾಗಿದ್ದಳು. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಪಾಲಕರು ಕಣ್ಣೀರು ಹಾಕಿದ್ದರು. ಜೊತೆಗೆ ಕಳೆದೆರಡು ದಿನಗಳ ಹಿಂದೆಯಷ್ಟೆ ಯುವತಿಯನ್ನು ಮದುವೆಯಾದ ಪ್ರಕಾಶ್ ತನ್ನ ವಾಟ್ಸಾಪ್ ನಲ್ಲಿ ಪೊಟೋ ಹಾಕಿಕೊಂಡಿದ್ದ. ಮದುವೆಯಾದ ಒಂದೇ ದಿನದಲ್ಲಿ ಪ್ರಕಾಶ್ ನನ್ನು ಬಿಟ್ಟು ಮನೆಗೆ ಓಡಿ ಬಂದಿದ್ದಾಳೆ ಕರೀಷ್ಮಾ, ಇದೀಗ ಪ್ರಕಾಶ್ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾಳೆ.

ಮದುವೆಯಾದ ಒಂದೇ ದಿನದಲ್ಲಿ ಪ್ರಕಾಶ್ ನನ್ನು ಬಿಟ್ಟು ಓಡಿಬಂದ ಕರೀಷ್ಮಾ ಕೆಲವೊಂದು ಆರೋಪಗಳನ್ನು ಮಾಡಿದ್ದಾಳೆ. ಆತ ಬಲವಂತವಾಗಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ವಿಡಿಯೋ ತೋರಿಸಿ ನನ್ನ ಜೊತೆಗೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂಬೆಲ್ಲಾ ಆರೋಪಗಳನ್ನು ಮಾಡಿದ್ದಾಳೆ ಎನ್ನಲಾಗಿದೆ. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಕರೀಷ್ಮಾ ನಾನು ಕೊಲ್ಲಾಪುರದಲ್ಲಿದ್ದೆ. ಕಾಳ್ ಮಾಡಿ ನನ್ನ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ನನಗೆ ಕೂಲ್ ಡ್ರಿಂಕ್ ನಲ್ಲಿ ಏನೋ ಹಾಕಿ ರೂಮ್ ಗೆ ಕರೆದುಕೊಂಡು ಹೋಗಿದ್ದ. ಯಾವ ಊರು, ಏನು ಎಂಬ ಮಾಹಿತಿಯನ್ನು ನನಗೆ ಹೇಳಿಯೇ ಇಲ್ಲ. ಆತ ನನ್ನ ಮಾತುಗಳನ್ನು ಕೇಳದೇ ಇದ್ದರೇ ನಿನ್ನ ತಂದೆಯನ್ನು ಸಾಯಿಸುತ್ತೇನೆ ಎಂದು ಧಮ್ಕಿ ಸಹ ಹಾಕಿದ್ದ ಎಂದು ಆರೋಪಿಸಿದ್ದಾಳೆ.
ಇನ್ನೂ ಅಂಕಲ್ ತನ್ನ ಮಾತುಗಳನ್ನು ಕೇಳದೇ ಇದ್ದರೇ ತಂದೆ-ತಾಯಿಯನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದ. ಮದುವೆಯಾಗಿದ್ದು ಎಲ್ಲಿ ಅಂತಾನೂ ನನಗೆ ಗೊತ್ತಿಲ್ಲ. ನಮ್ಮ ಪೋಷಕರ ವಿರುದ್ದವೇ ದೂರು ಕೊಡುವಂತೆ ಬೆದರಿಕೆ ಹಾಕಿದ್ದ. ಆದರೆ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನಾನು ಕಾಣೆಯಾಗಿದ್ದ ಕುರಿತು ನಮ್ಮ ತಂದೆ ತಾಯಿ ಹೇಳಿಕೆ ನೀಡಿದ್ದರು. ಅದು ಟಿವಿಯಲ್ಲಿ ಬಂದ ನಂತರ ಅದನ್ನು ತೋರಿಸಿ ನನಗೆ ಧಮ್ಕಿ ಹಾಕಿದ್ದ. ನಿಮ್ಮ ತಂದೆ ತಾಯಿ ನನ್ನ ಮರ್ಯಾದೆ ತೆಗೆಯುತ್ತಿದ್ದಾರೆ. ಅವರ ಮೇಲೆ ದೂರು ದಾಖಲಿಸುವಂತೆಯೂ ಹೇಳಿದ್ದ. ಅದನ್ನೇ ನೆಪ ಮಾಡಿಕೊಂಡು ನಾನು ಹುಬ್ಬಳ್ಳಿಗೆ ಬಂದಿದ್ದೇನೆ.ನನ್ನ ಜೀವನ ಹಾಳು ಮಾಡಿದ ಪ್ರಕಾಶ್ ಮೇಲೆ ಕಾನೂನಿನಂತೆ ಕ್ರಮ ಜರುಗಲೇ ಬೇಕು ಎಂದು ಯುವತಿ ಮನವಿ ಮಾಡಿಕೊಂಡಿದ್ದಾಳೆ.