Monday, October 27, 2025
HomeStateHSRP: ವಾಹನ ಮಾಲೀಕರಿಗೆ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಣೆ….!

HSRP: ವಾಹನ ಮಾಲೀಕರಿಗೆ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಣೆ….!

ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ವಾಹನ ಮಾಲೀಕರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಿಸಿದೆ. ಈಗಾಗಲೇ ಮೂರ್ನಾಲ್ಕು ಬಾರಿ HSRP ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡಲಾಗಿತ್ತು. ಆದರೂ ಸಹ ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಸದ ಕಾರಣ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿದ್ದು, ನವೆಂಬರ್ 30ರೊಳಗೆ HSRP ನಂಬರ್ ಪ್ಲೇಟ್ ಅಳವಡಿಸಲು ಸಮಯವನ್ನು ರಾಜ್ಯ ಸರ್ಕಾರ ನೀಡಿದೆ.

2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. HSRP ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಈಗಾಗಲೇ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಿತ್ತು. ಅವಧಿ ಮುಗಿದರೂ ಇನ್ನೂ ಅನೇಕ ವಾಹನ ಮಾಲೀಕರು ಈ ಕೆಲಸ ಮಾಡಿರಲಿಲ್ಲ. ಒಟ್ಟು 1.90 ಕೋಟಿ ಹಳೆಯ ವಾಹನಗಳಿದ್ದು, ಈ ಪೈಕಿ ಕೇವಲ 55 ಲಕ್ಷ ವಾಹನಗಳ ಮಾಲೀಕರು ಮಾತ್ರ HSRP ನಂಬರ್‍ ಪ್ಲೇಟ್ ಅಳವಡಿಸಿಕೊಂಡಿದ್ದಾರೆ. ಉಳಿದ ವಾಹನಗಳಿಗೆ ಇನ್ನೂ HSRP ನಂಬರ್‍ ಪ್ಲೇಟ್ ಹಾಕಿಸಿಲ್ಲ. ಆದ್ದರಿಂದ ರಾಜ್ಯ ಸಾರಿಗೆ ಇಲಾಖೆ ಮತ್ತೊಂಮ್ಮೆ ನಂಬರ್‍ ಪ್ಲೇಟ್ ಅಳವಡಿಸಲು ಅವಕಾಶ ಮಾಡಿಕೊಟ್ಟಿದೆ. ಈ ದಿನಾಂಕದೊಳಗೆ ಸಹ ನಂಬರ್‍ ಪ್ಲೇಟ್ ಅಳವಡಿಸದೇ ಇದ್ದರೇ ಡಿ.1 ರಿಂದ ದಂಡ ವಿಧಿಸಲು ಸಾರಿಗೆ ಇಲಾಖೆ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

HSRP Date extebded upto nov 30 1

ಅಷ್ಟಕ್ಕೂ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್‌ ಪ್ಲೇಟ್  ಎಂದರೇನು ಎಂಬ ವಿಚಾರಕ್ಕೆ ಬಂದರೇ, 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ HSRP ನಂಬರ್‍ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ನಂಬರ ಪ್ಲೇಟ್ ಗಳು ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಹೊಸ ವಾಹನಗಳಲ್ಲಿ ಈಗಾಗಲೇ ಈ ಮಾದರಿಯ ನಂಬರ್‍ ಪ್ಲೇಟ್ ಗಳನ್ನು ಅಳವಡಿಸಲಾಗುತ್ತಿದೆ. ಈ ನಂಬರ್‍ ಪ್ಲೇಟ್ ಗಳಲ್ಲಿ ನಂಬರ್‍ ಗಳು ಉಬ್ಬಿಕೊಂಡಿರುವ ಮಾದರಿಯಲ್ಲಿ ಮುದ್ರಣವಾಗಿರುತ್ತದೆ. ನಂಬರ್‍ ಪ್ಲೇಟ್ ನ ಮೇಲ್ಬಾಗದ ಎಡಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದಾಗಿದೆ. 20 ಮಿ.ಮೀಟರ್‍ ಉದ್ದಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗುತ್ತದೆ.

HSRP ನಂಬರ್‍ ಪ್ಲೇಟ್ ಬುಕ್ ಮಾಡುವ ವಿಧಾನ:

ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ಪೂರ್ಣಗೊಳಿಸಬಹುದು. ಆನ್‌ಲೈನ್‌ನಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಲು ಹಂತ-ಹಂತದ ವಿಧಾನವನ್ನು ಕೆಳಗೆ ಉಲ್ಲೇಖಿಸಲಾಗಿದೆ:

  • ಹಂತ 1: https://bookmyhsrp.com/ ಗೆ ಭೇಟಿ ನೀಡಿ.
  • ಹಂತ 2: ‘ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ವಿತ್ ಕಲರ್ ಸ್ಟಿಕ್ಕರ್’ ಆಯ್ಕೆಮಾಡಿ.
  • ಹಂತ 3: ನಿಮ್ಮ HSRP ನಂಬರ್ ಪ್ಲೇಟ್‌ಗಾಗಿ ಎಂಜಿನ್ ಸಂಖ್ಯೆ, ಚಾಸಿಸ್ ಸಂಖ್ಯೆ, ನೋಂದಣಿ ಸಂಖ್ಯೆ, ವಾಹನ ನೋಂದಣಿ ಸ್ಥಿತಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
  • ಹಂತ 4: ‘ಇಲ್ಲಿ ಕ್ಲಿಕ್ ಮಾಡಿ’ ಕ್ಲಿಕ್ ಮಾಡಿ.
  • ಹಂತ 5: ಮುಂದೆ, ಫಿಟ್‌ಮೆಂಟ್ ಸ್ಥಳವನ್ನು ಆಯ್ಕೆಮಾಡಿ ಮತ್ತು ನಿಮ್ಮ HSRP ನಂಬರ್ ಪ್ಲೇಟ್‌ಗಾಗಿ ಅಪಾಯಿಂಟ್‌ಮೆಂಟ್ ಸ್ಲಾಟ್ ಅನ್ನು ಬುಕ್ ಮಾಡಿ.
  • ಹಂತ 6: ಮುಂದಿನ ಪುಟದಲ್ಲಿ, ನಿಮ್ಮ HSRP ನಂಬರ್ ಪ್ಲೇಟ್‌ಗೆ ಶುಲ್ಕವನ್ನು ಪಾವತಿಸಿ.
  • ಹಂತ 7: ನಿಮ್ಮ HSRP ನಂಬರ್ ಪ್ಲೇಟ್ ಪರಿಶೀಲನೆಗಾಗಿ ರಶೀದಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ.
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular