HometestHelmet Distribution : ದಂಡದ ಭೀತಿ ಬೇಡ, ಕುಟುಂಬದ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ, ಸಮಾಜ ಸೇವಕ...

Helmet Distribution : ದಂಡದ ಭೀತಿ ಬೇಡ, ಕುಟುಂಬದ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ, ಸಮಾಜ ಸೇವಕ ಹರಿನಾಥರೆಡ್ಡಿ ಕಿವಿಮಾತು

“ರಸ್ತೆಯಲ್ಲಿ ಪೊಲೀಸರು ದಂಡ ಹಾಕುತ್ತಾರೆ ಎಂಬ ಒಂದೇ ಕಾರಣಕ್ಕೆ ಹೆಲ್ಮೆಟ್ (Helmet) ಧರಿಸಬೇಡಿ. ನಿಮ್ಮನ್ನು ನಂಬಿರುವ ಕುಟುಂಬದ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದನ್ನು ಮರೆಯಬೇಡಿ,” ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಹರಿನಾಥರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಗ್ರಾಮದಲ್ಲಿ ಹರಿನಾಥರೆಡ್ಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Social worker Harinath Reddy distributing free helmet to promote road safety in Gudibande taluk

Helmet  – ಜೀವ ರಕ್ಷಣೆ ನಿಮ್ಮ ಮೊದಲ ಆದ್ಯತೆಯಾಗಲಿ

ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಕೇವಲ ಕಾನೂನು ಪಾಲನೆಯಲ್ಲ, ಅದು ನಿಮ್ಮ ಜೀವದ ರಕ್ಷಾಕವಚ. “ಹೆಲ್ಮೆಟ್‌ಗಳನ್ನು ಮನೆಯಲ್ಲಿ ಅಲಂಕಾರಿಕ ವಸ್ತುವಾಗಿ ಇಡಬೇಡಿ. ಬೈಕ್ ಹತ್ತುವ ಪ್ರತಿಯೊಂದು ಕ್ಷಣವೂ ಅದನ್ನು ಕಡ್ಡಾಯವಾಗಿ ಬಳಸಿ. ಒಂದು ಸಣ್ಣ ಜಾಗರೂಕತೆ ನಿಮ್ಮ ಜೀವನವನ್ನೇ ಉಳಿಸಬಲ್ಲದು,” ಎಂದು ಹರಿನಾಥರೆಡ್ಡಿ ಅವರು ಕಿವಿಮಾತು ಹೇಳಿದರು.

50 ಸಾವಿರ ಹೆಲ್ಮೆಟ್ ವಿತರಣೆಯ ಗುರಿ

ಸಂಸದ ಡಾ. ಕೆ. ಸುಧಾಕರ್ ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯನ್ನು ಮುಂದುವರಿಸುತ್ತಿರುವ ಹರಿನಾಥರೆಡ್ಡಿ ಅವರು ದೊಡ್ಡ ಗುರಿಯನ್ನು ಹೊಂದಿದ್ದಾರೆ. ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲೂಕಿನ ಎಲ್ಲಾ ಮನೆಗಳಿಗೆ ತಲುಪುವಂತೆ ಈಗಾಗಲೇ 25 ಸಾವಿರಕ್ಕೂ ಹೆಚ್ಚು ಉಚಿತ ಹೆಲ್ಮೆಟ್‌ಗಳನ್ನು (Helmet) ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸುವ ಸಂಕಲ್ಪ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಶ್ಲಾಘನೀಯ ಕಾರ್ಯಕ್ಕೆ ಗಣ್ಯರ ಮೆಚ್ಚುಗೆ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಅವರು ಟ್ರಸ್ಟ್‌ನ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಕುಟುಂಬದ ಆಧಾರಸ್ತಂಭವಾಗಿರುವ ವ್ಯಕ್ತಿ ಅಪಘಾತದಲ್ಲಿ ಜೀವ ಕಳೆದುಕೊಂಡರೆ ಆ ಕುಟುಂಬ ಬೀದಿಗೆ ಬೀಳುತ್ತದೆ. ಅಂತಹ ನೋವಿನ ಪ್ರಸಂಗಗಳು ಮರುಕಳಿಸಬಾರದು (Helmet) ಎಂಬ ಉದ್ದೇಶದಿಂದ ಯುವಕರ ಪ್ರಾಣ ರಕ್ಷಣೆಗೆ ಮುಂದಾಗಿರುವ ಹರಿನಾಥರೆಡ್ಡಿಯವರ ಕಾರ್ಯ ನಿಜಕ್ಕೂ ಅಭಿನಂದನೀಯ,” ಎಂದರು. Read this also : ನಿಮ್ಮ ಜೀವ ನಿಮ್ಮ ಕುಟುಂಬದ ಆಸ್ತಿ: ಸಂಚಾರಿ ನಿಯಮ ಮರೆಯಬೇಡಿ! ಗುಡಿಬಂಡೆಯಲ್ಲಿ ಸಂಸದ ಸುಧಾಕರ್ ಕಿವಿಮಾತು

Social worker Harinath Reddy distributing free helmet to promote road safety in Gudibande taluk

ಸಾಧಕರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಪುರಸ್ಕೃತರು ಹಾಗೂ ಖ್ಯಾತ ಮುಖವೀಣೆ ಕಲಾವಿದರಾದ ಅಂಜನಪ್ಪ ಅವರನ್ನು ಹರಿನಾಥರೆಡ್ಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ (Helmet) ಜೆ.ಪಿ. ಚಂದ್ರಶೇಖರರೆಡ್ಡಿ, ವಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಮಂಜುನಾಥರೆಡ್ಡಿ, ಮುಖಂಡರಾದ ಚಂದ್ರಶೇಖರರೆಡ್ಡಿ, ಪಾವಜೇನಹಳ್ಳಿ ನಾಗರಾಜರೆಡ್ಡಿ, ತಟ್ಟಹಳ್ಳಿ ಮದ್ದರೆಡ್ಡಿ, ಮನೋಜ್, ದಪ್ಪರ್ತಿ ಮುರಳಿ ಸೇರಿದಂತೆ ಹಲವರು ಇದ್ದರು.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular